Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ

Arijit Singh: ಬಣ್ಣದಲ್ಲಿ, ರಂಗೋಲಿಯಲ್ಲಿ, ಕಲ್ಲಿನಲ್ಲಿ, ಕಟ್ಟಿಗೆಯಲ್ಲಿ, ಸಿಮೆಂಟಿನಲ್ಲಿ ಹೀಗೆ ತಮ್ಮ ನೆಚ್ಚಿನ ಕಲಾವಿದರನ್ನು ಅನೇಕರು ಅರಳಿಸುತ್ತಾರೆ. ಆದರೆ ನೆರಳು ಬೆಳಕಿನಲ್ಲಿ? ಇಲ್ಲೊಬ್ಬ ಕಲಾವಿದರು ಗಾಯಕ ಅರಿಜೀತ್ ಸಿಂಗ್​ರನ್ನು ಹೊಮ್ಮಿಸಿದ್ದಾರೆ. ಈ ವಿಡಿಯೋಗೆ ಸುಶಾಂತ್​ ನಟಿಸಿದ ಮತ್ತು ಅರಿಜೀತ್ ಹಾಡಿದ ಹಾಡಿನ ಹಿನ್ನೆಲೆ ಇದೆ. ನೆಟ್ಟಿಗರು ಸುಶಾಂತನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ
ಶಿಂಟು ಮೌರ್ಯ ನೆರಳಿನೊಳಗೆ ಅರಳಿಸಿದ ಅರಿಜಿತ್​ ಸಿಂಘ್
Follow us
|

Updated on:Sep 16, 2023 | 10:54 AM

Shadow Portrait: ತಮ್ಮ ನೆಚ್ಚಿನ ಕಲಾವಿದರನ್ನು, ವ್ಯಕ್ತಿಗಳನ್ನು ಕಲಾವಿದರು ಪೋರ್ಟ್ರೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿಯ (Virat Kohli) ಅಭಿಮಾನಿ ಕಲಾವಿದರು ನಾಲಗೆಯಿಂದ ಪೇಂಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ಗಾಯಕ ಅರಿಜೀತ್ ಸಿಂಗ್ (Arijit Singh)​ ಅಭಿಮಾನಿಯೊಬ್ಬರು ನೆರಳು ಬೆಳಕಿನಲ್ಲಿ ಅರಿಜೀತ್​ ಪೋರ್ಟ್ರೇಟ್​ ಅರಳಿಸಿ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಕಲಾವಿದ ಶಿಂಟು ಮೌರ್ಯ ಪ್ರತಿಭೆ ಮತ್ತು ಆಸ್ಥೆಯನ್ನು ಮೆಚ್ಚಿದ ನೆಟ್ಟಿಗರು ಅಭಿಮಾನದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ‘ಕೊನೆಯತನಕ ಈ ವಿಡಿಯೋ ನೋಡಿ’ ಎಂದು ಶಿಂಟು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಗೋಡೆಯ ಮೇಲೆ ಅರಿಜೀತ್​ ಮೂಡುವ ಪರಿ ಅನನ್ಯವಾಗಿದೆ.

ಇದನ್ನೂ ಓದಿ : Viral: ಅಮೆರಿಕ; ಮುದ್ದುಗಳಿವೆ ಎಚ್ಚರಿಕೆ! ಅಳಿವಿನಂಚಿನಲ್ಲಿರುವ 6 ಕೊಮೊಡೊ ಡ್ರ್ಯಾಗನ್​ ಮರಿಗಳ ಜನನ

ಇದನ್ನೂ ಓದಿ

ಆ. 17 ರಂದು ಈ ಪೋಸ್ಟ್ ಮಾಡಲಾಗಿದ್ದು, ಈತನಕ ಸುಮಾರು 30 ಮಿಲಿಯನ್​ ಜನರು ನೋಡಿದ್ದಾರೆ. 3.2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಇದ ಅತ್ಯದ್ಭುತವಾಗಿದೆ. ನಿಮ್ಮ ತಾಳ್ಮೆಗೆ ಸಲಾಂ ಎಂದಿದ್ದಾರೆ ಅನೇಕರು. ಭಾವಚಿತ್ರವೆನ್ನುವುದರ ನಿಜವಾದ ಅರ್ಥವನ್ನು ಇದು ಪಡೆದುಕೊಂಡಿದೆ ಎಂದಿದ್ದಾರೆ.

ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್ ಸಿಂಗ್

ಬ್ರಿಲಿಯಂಟ್​ ಆರ್ಟ್ ಎಂದಿದ್ದಾರೆ ಒಬ್ಬರು. ಮೇಧಾವಿ ಕಲಾವಿದ ಎಂದಿದ್ದಾರೆ ಇನ್ನೊಬ್ಬರು. ಇಷ್ಟು ಪರ್ಫೆಕ್ಟ್ ಆಗಿ ಹೇಗೆ ರೂಪಿಸಿದಿರಿ, ನೀವು ಅಸಾಮಾನ್ಯ ಪ್ರತಿಭಾವಂತರು ಎಂದಿದ್ದಾರೆ ಮತ್ತೊಬ್ಬರು. ನಿಮ್ಮಷ್ಟಕ್ಕೆ ನೀವೇ ಈ ಕಲೆಯನ್ನು ಕಲಿತಿರೋ ಹೇಗೆ? ಎಂದು ಕೇಳಿದ್ದಾರೆ ಮಗದೊಬ್ಬರು. ಈ ಹಾಡನ್ನು ಕೇಳಿ ಸುಶಾಂತ್ ಸಿಂಗ್​ ನೆನಪಾದರು ಎಂದಿದ್ದಾರೆ ಇನ್ನೊಬ್ಬರು. ಅನೇಕರು ಸುಶಾಂತ್​ ಸಿಂಗ್​ನನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ : Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ

ನೀವು ಸುಶಾಂತ್ ಸಿಂಗರನ್ನು ರಚಿಸುತ್ತೀರಿ ಎಂದುಕೊಂಡಿದ್ದೆ ಈ ಹಾಡು ಕೇಳಿ ಎಂದಿದ್ದಾರೆ ಒಬ್ಬರು. ನಾನು ಅರಿಜೀತ್​ ಮತ್ತು ಸುಶಾಂತ್​ನ ದೊಡ್ಡ ಫ್ಯಾನ್​ ಎಂದಿದ್ದಾರೆ ಕೆಲವರು. ಅನೇಕರು ಸುಶಾಂತ್ ಸಿಂಗ್​ನನ್ನು ಬಹಳೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಚಿತ್ರವನ್ನೂ ನೀವು ಹೀಗೆ ನೆರಳು ಬೆಳಕಿನಲ್ಲಿ ಹೊಮ್ಮಿಸಿ ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:52 am, Sat, 16 September 23

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!