AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್

Painting: ಅಭಿಮಾನಿಗಳ ಆಲೋಚನೆ ಯಾವಾಗ ಹೇಗೆಲ್ಲ ತಿರಗುತ್ತದೆ ಅದೆಷ್ಟು ಆಳವಾಗಿ ಅತಿರೇಕವಾಗಿ ಹೊಮ್ಮುತ್ತದೆ ಎಂದು ಊಹಿಸುವುದು ಕಷ್ಟವೇ. ಏಕೆಂದರೆ ಕೆಲವರು ತಮ್ಮ ನೆಚ್ಚಿನ ಪ್ರಸಿದ್ಧ ವ್ಯಕ್ತಿಗಳನ್ನು ಚಿತ್ರಿಸಲು ತಮ್ಮ ರಕ್ತವನ್ನೇ ಬಳಸಿದ ಉದಾಹರಣೆಗಳಿವೆ. ಸದ್ಯ ವೈರಲ್ ಆಗಿರುವ ಈ ವಿಡಿಯೋ ನೋಡಿ. ಯುವಕನೊಬ್ಬ ತನ್ನ ನೆಚ್ಚಿನ ವಿರಾಟ ಕೊಯ್ಲಿಯನ್ನು ಚಿತ್ರಿಸಲು ನಾಲಗೆಯನ್ನೇ ಬ್ರಷ್ ಮಾಡಿಕೊಂಡಿದ್ದಾನೆ.

Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್
ವಿರಾಟ ಕೊಹ್ಲಿಯ ಅಭಿಮಾನಿ ತನ್ನ ನಾಲಗೆಯಿಂದ ಕೊಯ್ಲಿಯನ್ನು ಚಿತ್ರಿಸಿದ್ದಾನೆ
ಶ್ರೀದೇವಿ ಕಳಸದ
|

Updated on: Sep 12, 2023 | 12:51 PM

Share

Virat Kohli: ತಮ್ಮ ತಮ್ಮ ಆಸಕ್ತಿಗಳಿಗೆ ತಕ್ಕಂತೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ತಮ್ಮ ಅಭಿವ್ಯಕ್ತಿಗಳ ಮೂಲಕ ಆರಾಧಿಸುವುದು ಸಹಜ. ತಮಗೆ ಇಷ್ಟವಾದ ವ್ಯಕ್ತಿಯ ಬಗ್ಗೆ ಕವನ ಬರೆಯುತ್ತಾರೆ. ಹಾಡು ಹಾಡುತ್ತಾರೆ. ರಂಗೋಲಿ ಬಿಡಿಸುತ್ತಾರೆ. ಪೇಂಟಿಂಗ್ ಮಾಡುತ್ತಾರೆ. ಇದೀಗ ಯುವಕನೊಬ್ಬ ತನ್ನ ನೆಚ್ಚಿನ ವಿರಾಟ ಕೊಹ್ಲಿಯ  ಚಿತ್ರವನ್ನು ಪೇಂಟ್​ ಮಾಡಿ ವೈರಲ್ ಆಗಿದ್ದಾನೆ. ಅಂಥದ್ದೇನು ವಿಶೇಷ ಇದೆ? ಎಂದು ನೀವು ಯೋಚಿಸುತ್ತಿದ್ದೀರಾ? ಈ ಯುವಕ ಪೇಂಟ್​ ಮಾಡಲು ತನ್ನ ನಾಲಗೆಯನ್ನೇ (Tongue) ಬ್ರಷ್ ಮಾಡಿಕೊಂಡಿದ್ದಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಇವನ ಅಭಿಮಾನವನ್ನು ಮತ್ತು ಪ್ರತಿಭೆಯನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Optical Illusion: ಇವುಗಳಲ್ಲಿ ಯಾವ ಕಪ್ ಮೊದಲು ತುಂಬುತ್ತದೆ ಎಂದು ಹೇಳಬಲ್ಲಿರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 9ರಂದು Xನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 2.7 ಮಿಲಿಯನ್ ಜನರು ನೋಡಿದ್ದಾರೆ. 10,700 ಜನರು ಲೈಕ್ ಮಾಡಿದ್ದಾರೆ. ಸುಮಾರು 2 ಸಾವಿರ ಜನರು ರೀಪೋಸ್ಟ್ ಮಾಡಿದ್ದಾರೆ. 1,200 ಜನರು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ವಿರಾಟ್ ಮೇಲಿನ ಇವರ ಪ್ರೀತಿಯನ್ನು ವಿವರಿಸಲು ಪದಗಳೇ ಇಲ್ಲ, ಈ ಯುವಕ ಅತ್ಯದ್ಭುತವಾಗಿ ಚಿತ್ರ ಬಿಡಿಸಿದ್ಧಾರೆ ಎಂದಿದ್ದಾರೆ ಅನೇಕರು.

ನಾಲಗೆಯಿಂದ ವಿರಾಟನ ಚಿತ್ರ ಬಿಡಿಸಿದ ಅಭಿಮಾನಿ

ಈ ಮೊದಲು ಇನ್ನೊಬ್ಬ ಕಲಾವಿದರು ಭೂತಗನ್ನಡಿಯಿಂದ ಮರದ ಮೇಲ್ಮೈಯನ್ನು ಸುಡುತ್ತ ವಿರಾಟನ ಆಕೃತಿಯನ್ನು ಮೂಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿದೆ. ಆದರೆ ಈ ಆಲೋಚನೆ ನಿಮಗೆ ಹೇಗೆ ಹೊಳೆಯಿತು? ಆ ಬಣ್ಣಗಳು ನಿಮ್ಮ ದೇಹ ಸೇರಿ ಹಾನಿಯುಂಟು ಮಾಡುವುದಿಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಇದು ಸೂಪರ್​ ಡ್ಯೂಪರ್​ ಆರ್ಟ್ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಉಸಿರುಗಟ್ಟುವಿಕೆಯಿಂದ ಬಾಲಕನನ್ನು ರಕ್ಷಿಸಿದ ಮಹಿಳೆ; ಆಕೆಯನ್ನು’ಹೀರೋ’ ಎಂದ ನೆಟ್ಟಿಗರು

ಕೆಲವರು ಈ ಯುವಕನ ಬಗ್ಗೆ ತಮಾಷೆಯನ್ನೂ ಮಾಡಿದ್ದಾರೆ. ಈತನಕ ಕೈಗಳನ್ನು ಬೇರೆ ಯಾರಿಗಾದರೂ ಬೇಕಾದಲ್ಲಿ ದಾನ ಮಾಡಿ ಎಂದಿದ್ದಾರೆ ಒಬ್ಬರು. ಈತನಕ ಹೆಂಡತಿ ಬಹಳ ಸುಖಯಾಗಿರುತ್ತಾಳೆ ಎಂದಿದ್ಧಾರೆ ಇನ್ನೊಬ್ಬರು. ಇದು ಬಹಳ ಅದ್ಭುತವಾದ ರಹಸ್ಯಪ್ರತಿಭೆ, ರಹಸ್ಯವಾಗಿಯೇ ಇರಲಿ ಎಂದಿದ್ದಾರೆ ಮತ್ತೊಬ್ಬರು. ಹೀಗೆ ಪ್ರತಿಕ್ರಿಯಿಸುವ ನಿಮ್ಮ ಅಭಿರುಚಿಯನ್ನು ನೀವೇ ಕೊಂಡಾಡಿಕೊಳ್ಳಬೇಕು ಎಂದು ಪ್ರತಿಯಾಗಿ ಹೇಳಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್