Viral Video: ಉಸಿರುಗಟ್ಟುವಿಕೆಯಿಂದ ಬಾಲಕನನ್ನು ರಕ್ಷಿಸಿದ ಮಹಿಳೆ; ಆಕೆಯನ್ನು’ಹೀರೋ’ ಎಂದ ನೆಟ್ಟಿಗರು

Heimlich Maneuver: ಇಲ್ಲೊಂದು ಪುಟ್ಟ ಹುಡುಗ ಕ್ಯಾಂಡಿ ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿಕೊಂಡಿದೆ. ಗಾಬರಿಗೊಂಡ ತಾಯಿ ಸಹಾಯಕ್ಕಾಗಿ ಕೂಗಾಡಲು ಶುರುಮಾಡಿದ್ಧಾಳೆ. ಅಪರಿಚಿತ ಮಹಿಳೆಯೊಬ್ಬಳು ಬಂದು ಆ ಹುಡುಗನ ಪ್ರಾಣವನ್ನು ಉಳಿಸಿದ್ಧಾಳೆ. ಈ ಮಹಿಳೆಯನ್ನು ನೆಟ್ಟಿgರು ಹೀರೋ ಎಂದು ಕೊಂಡಾಡುತ್ತಿದ್ದಾರೆ. ಆಕೆ ಹುಡುಗನನ್ನು ಉಳಿಸಿರುವ ಈ ವಿಡಿಯೋ ನೋಡಿ.

Viral Video: ಉಸಿರುಗಟ್ಟುವಿಕೆಯಿಂದ ಬಾಲಕನನ್ನು ರಕ್ಷಿಸಿದ ಮಹಿಳೆ; ಆಕೆಯನ್ನು'ಹೀರೋ' ಎಂದ ನೆಟ್ಟಿಗರು
ಮಗು ಉಸಿರುಗಟ್ಟಿ ಒದ್ದಾಡುತ್ತಿರುವ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Sep 12, 2023 | 11:29 AM

Choking: ಮಕ್ಕಳಿಂದ ಹಿಡಿದು ಮುದುಕರವರೆಗೂ ಉಸಿರುಗಟ್ಟುವಿಕೆ ಸಾಮಾನ್ಯ. ವಿಶೇಷವಾಗಿ ಏನಾದರೂ ತಿನ್ನುವಾಗ. ಮಕ್ಕಳ ವಿಷಯಕ್ಕೆ ಬಂದರೆ ಚಾಕೊಲೇಟ್​, ಕ್ಯಾಂಡಿಗಳು (Candy) ಮಕ್ಕಳ ಗಂಟಲಲ್ಲಿ ಸಿಕ್ಕು ಉಸಿರುಗಟ್ಟಿಸುತ್ತವೆ. ಸಂದರ್ಭದಲ್ಲಿ ಜೊತೆಗಿರುವವರಿಗೆ ಸಿಕ್ಕಿಹಾಕಿಕೊಂಡ ಉಸಿರನ್ನು ಸಹಜಕ್ಕೆ ತರುವ ತಂತ್ರ ತಿಳಿದಿದ್ದರೆ ಬಹಳ ಒಳ್ಳೆಯದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಾಲಕನೊಬ್ಬ ಕ್ಯಾಂಡಿ ತಿನ್ನುತ್ತಿರುವಾಗ ಉಸಿರಾಟದ ತೊಂದರೆಗೆ ಸಿಲುಕಿದ್ದಾನೆ. ಗಾಬರಿಯಾದ ತಾಯಿಗೆ ಏನು ಮಾಡಬೇಕೆಂದು ತೋಚದೆ ಸಹಾಯಕ್ಕಾಗಿ ಕಿರುಚಿದ್ದಾಳೆ. ಆಗ ಅಲ್ಲಿಯೇ ಇದ್ದ ಒಬ್ಬ ಮಹಿಳೆ ಹೈಮ್ಲಿಚ್​ ತಂತ್ರದಿಂದ ಮಗುವನ್ನು ಕಾಪಾಡಿದ್ದಾಳೆ.

ಇದನ್ನೂ ಓದಿ : Viral Video: ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ನಡುವೆ ಜಗಳ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ನಿನ್ನೆ ಇನ್​ಸ್ಟಾಗ್ರಾಂನ ಗುಡ್​ನ್ಯೂಸ್​ ಮೂವ್​ಮೆಂಟ್​ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 2.5 ಮಿಲಿಯನ್ ಜನರು ನೋಡಿದ್ದಾರೆ. 1.4 ಲಕ್ಷ ಜನರು ಲೈಕ್ ಮಾಡಿದ್ದಾರೆ. ಮಗುವಿನ ಪ್ರಾಣ ಉಳಿಸಿದ ಮಹಿಳೆಯನ್ನು ಸಾವಿರಾರು ಜನರು ‘ಹೀರೋ’ ಎಂದು ಕರೆದಿದ್ದಾರೆ. ತನ್ನ ಮಗು ಪುದೀನಾ ಕ್ಯಾಂಡಿಯನ್ನು ತಿನ್ನುತ್ತಿರುವಾಗ ಉಸಿರುಗಟ್ಟುವುದನ್ನು ಗಮನಿಸಿ ಗಾಬರಿಯಿಂದ ಕಿರುಚಿದ್ದಾಳೆ. ಮುಂದೇನಾಗಿದೆ ಎಂದು ಈ ವಿಡಿಯೋದಲ್ಲಿ ನೋಡಿ.

ಉಸಿರುಗಟ್ಟಿದ್ದ ಮಗುವನ್ನು ಬದುಕಿಸಿದ ಮಹಿಳೆ

ಹೈಮ್ಲಿಚ್​ ತಂತ್ರದಿಂದ ಈಕೆ ಮಗುವನ್ನು ಪಾರುಮಾಡಿದ್ದಾಳೆ. ಇತ್ತೀಚೆಗೆ ಹೋಟೆಲ್​ ಒಂದರಲ್ಲಿ ಹದಿಹರೆಯದ ಹುಡುಗನೊಬ್ಬ ಇದೇ ತಂತ್ರದಿಂದ ವೃದ್ಧರೊಬ್ಬರನ್ನು ಬದುಕಿಸಿದ ವಿಡಿಯೋ ನೋಡಿದ್ದು ನಿಮ್ಮ ಗಮನದಲ್ಲಿರಬಹುದು. ಸಹಾಯ ಮನೋಭಾವ, ಸಮಯಪ್ರಜ್ಞೆ ಮತ್ತು ಪ್ರಾಯೋಗಿಕ ಅರಿವು ರೂಢಿಸಿಕೊಂಡಿದ್ದಲ್ಲಿ ಇಂಥ ಕಷ್ಟಕರ ಸಂದರ್ಭಗಳನ್ನು ನಿಭಾಯಿಸಬಹುದು ಎನ್ನುವುದಕ್ಕೆ ಇಂಥ ವಿಡಿಯೋಗಳೇ ಸಾಕ್ಷಿ.

ಇದನ್ನೂ ಓದಿ : Viral Video: ‘ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ’ ಸಮೃದ್ಧಿ ಮಲ್ಹೋತ್ರಾ

ಇಂಥ ಸಂದರ್ಭದಲ್ಲಿ ಅಪರಿಚಿತರನ್ನು ನಂಬುವುದು ಕಷ್ಟ, ಆದರೆ ಮಗುವಿನ ಪ್ರಾಣ ಉಳಿಯಲಿ ಎನ್ನುವುದಷ್ಟೇ ತಾಯಿಯ ಆಸೆಯಾಗಿರುತ್ತದೆ ಎಂದು ಒಬ್ಬರು ಹೇಳಿದ್ದಾರೆ. ದೇವರೇ ಪ್ರಾಣ ಉಳಿಸಿದ ಮಹಿಳೆಗೆ ಒಳ್ಳೆಯದಾಗಲಿ ಎಂದಿದ್ದಾರೆ ಇನ್ನೊಬ್ಬರು. ದೇವರು ಕಾಪಾಡುತ್ತಾನೆ ಎಂದರೆ ಇದೇ, ಹೀಗೆ ಮನುಷ್ಯರ ರೂಪದಲ್ಲಿಯೇ ಅವನು ಕಾಣಿಸಿಕೊಳ್ಳುವುದು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:23 am, Tue, 12 September 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು