Viral Video: ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ನಡುವೆ ಜಗಳ

Metro: ಈ ಮೆಟ್ರೋಗಳಲ್ಲಿ ನಡೆಯುವ ಜಗಳಗಳನ್ನಷ್ಟೇ ವಿಡಿಯೋ ಮಾಡಿ ಪಿಎಚ್.​ಡಿ ಮಾಡಲು ಹೊರಟಿದ್ದಾನೋ ಏನೋ ಈ ಕಾಳೇಶ? ಎಂದು ಕೇಳಿದ್ಧಾರೆ ಕೆಲವರು. ಉಳಿದೆಡೆಯ ಜಗಳಗಳನ್ನು ಇವನು ಯಾಕೇ ವಿಡಿಯೋ ಮಾಡುವುದಿಲ್ಲ? ಎಂದು ತಮಾಷೆಯಾಗಿ ಚರ್ಚಿಸಿದ್ದಾರೆ ನೆಟ್ಟಿಗರು.

Viral Video: ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ನಡುವೆ ಜಗಳ
ದೆಹಲಿ ಮೆಟ್ರೋದೊಳಗೆ ಜಗಳವಾಡುತ್ತಿರುವ ಪುರುಷ ಮತ್ತು ಮಹಿಳೆ
Follow us
ಶ್ರೀದೇವಿ ಕಳಸದ
|

Updated on:Sep 11, 2023 | 5:40 PM

Delhi: ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೆಟ್ರೋದ (Metro) ಬಗ್ಗೆ ತಕರಾರು ಇಲ್ಲದಿದ್ದರೆ ಆ ದಿನ ಸಂಪನ್ನವೇ ಆಗುವುದಿಲ್ಲವೇನೋ ಎಂಬ ಮಟ್ಟಿಗೆ ಬಂದು ನಿಂತಿದೆ ಪರಿಸ್ಥಿತಿ. ರೈಲಿನಲ್ಲಿ ಹೊಡೆದಾಟ, ಕೂಗಾಟ, ಚೀರಾಟ, ರೀಲ್ಸ್​, ಪ್ರೀತಿ, ಪ್ರೇಮ ಹೀಗೆ ಇನ್ನೂ ಏನೇನೋ. ಇದೀಗ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಸೆ. 9ರಂದು ಹಂಚಿಕೊಂಡ ಈ ವಿಡಿಯೋ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. ಮೊದಲು ಮಹಿಳೆ ಮತ್ತು ಪುರುಷನೊಬ್ಬ ವಾಗ್ವಾದಕ್ಕಿಳಿದಿರುತ್ತಾರೆ. ಆಗ ಇನ್ನೊಬ್ಬ ಮಹಿಳೆಯೂ ಮಧ್ಯಪ್ರವೇಶಿಸುತ್ತಾಳೆ. ಸಹಪ್ರಯಾಣಿಕರು ಮೂವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ : Viral Video: ‘ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ’ ಸಮೃದ್ಧಿ ಮಲ್ಹೋತ್ರಾ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Xನ @gharkekalesh ಎನ್ನುವ ಖಾತೆಯಲ್ಲಿ ವಿಡಿಯೋ ಅನ್ನು ಹಂಚಿಕೊಳ್ಳಲಾಗಿದೆ. ಹೀಗೆ ಮಾಡುವುದರಿಂದ ವಿನಾಕಾರಣ ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಾರೆ. ಇನ್ನಾದರೂ ಇಂಥ ಪ್ರಕರಣಗಳ ಕಡೆಗೆ ಮೆಟ್ರೋ ಆಡಳಿತ ಗಮನ ಕೊಡಬೇಕು ಎಂದು ಕೆಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನುಳಿದವರು ಸನ್ನಿವೇಶದ ಬಗ್ಗೆ ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ.

ಇಲ್ಲಿದೆ ನೋಡಿ ಸೀಟಿಗಾಗಿ ಜಗಳ!

ಈ ವ್ಯಕ್ತಿ ಅಲ್ಲಿಯ ಹೆಣ್ಣುಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿರುವ ಹಾಗಿದೆ. ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು, ಅವನಿಗೆ ಶಿಕ್ಷೆಯಾಗಬೇಕು ಎಂದು ಕೆಲವರು ಹೇಳಿದ್ಧಾರೆ. ಕ್ಯಾಮೆರಾಮ್ಯಾನ್​ ಬೇಗ ಇತ್ತ ಫೋಕಸ್ ಮಾಡಿ ಎಂಬ ಟ್ವೀಟ್​ ಅನೇಕರನ್ನು ನಗೆಗಡಲಿನಲ್ಲಿ ತೇಲಿಸಿದೆ. ​ಇದು ಮೆಟ್ರೋ ಮಸಾಲಾ ಎಂದು ಒಬ್ಬರು. ಮೆಟ್ರೋ ಹೊತ್ತಿ ಉರಿಯುತ್ತಿದೆ ಎಂದು ಇನ್ನೊಬ್ಬರು.

ಇದನ್ನೂ ಓದಿ : Viral: ಅಕಸ್ಮಾತ್ ಆಕೆ ಅಪರಿಚಿತರಿಗೆ ಆನ್​ಲೈನ್​ನಲ್ಲಿ ಹಣ ಕಳಿಸಿದಳು, ಮುಂದೇನಾಯಿತು? 

ಮೆಟ್ರೋದಲ್ಲಿ ಪ್ರಯಾಣಿಸುವವರು ಯಾಕೆ ಹೀಗೆಲ್ಲ ಮಾಡುತ್ತಿರುತ್ತಾರೆ, ಏನಾಗಿದೆ ಇವರಿಗೆಲ್ಲ? ಉಳಿದ ಮೆಟ್ರೋಗಳಲ್ಲಿ ಯಾಕೆ ಇಂಥ ಪ್ರಕರಣಗಳು ನಡೆಯುವುದಿಲ್ಲ? ಎಂದು ಕೇಳಿದ್ಧಾರೆ ಒಬ್ಬರು. ಇಂಥಾ ಜಗಳದ ಮಧ್ಯೆಯೂ ಆ ಹೆಣ್ಣುಮಗಳು ತನ್ನ ಕೂದಲನ್ನು ಸರಿಪಡಿಸಿಕೊಳ್ಳುತ್ತಿದ್ದಾಳೆ! ಎಂದು ನಕ್ಕಿದ್ದಾರೆ ಮತ್ತೊಂದಿಷ್ಟು ಜನ. ಇಂಥ ವಿಡಿಯೋ ಪೋಸ್ಟ್ ಮಾಡುವ ಕಾಳೇಶ ದಿನಾಲೂ ದೆಹಲಿ ಮೆಟ್ರೋದೊಳಗೆ ಪ್ರಯಾಣಿಸುತ್ತಾನೆ ಎನ್ನಿಸುತ್ತದೆ ಎಂದಿದ್ದಾರೆ ಉಳಿದ ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 5:39 pm, Mon, 11 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್