Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಕಸ್ಮಾತ್ ಆಕೆ ಅಪರಿಚಿತರಿಗೆ ಆನ್​ಲೈನ್​ನಲ್ಲಿ ಹಣ ಕಳಿಸಿದಳು, ಮುಂದೇನಾಯಿತು?

Mistake: ಗೂಗಲ್​ ಪೇ ಮಾಡಲು ಕ್ಯಾಮೆರಾ ತೆರೆಯುವುದು, ಫೋನ್ ಪೇ ಮಾಡಲು ಇನ್​ಸ್ಟಾಗ್ರಾಂ ತೆರೆಯುವುದು ಇದೆಲ್ಲ ಮಾಮೂಲು. ಆದರೆ ಯಾರಿಗೋ ಕಳಿಸಬೇಕಾದ ಹಣವನ್ನು ಇನ್ನ್ಯಾರಿಗೋ ಕಳಿಸುವುದು? ಅದೂ ಈಗ ಮಾಮೂಲು. ಆದರೆ ಅಪರಿಚಿತರಿಗೆ ಕಳಿಸಿದ ಹಣವನ್ನುವಾಪಾಸು ಪಡೆಯುವುದು ಆಗ ಅವರು ಸೌಜನ್ಯಯುತವಾಗಿ ನಡೆದುಕೊಳ್ಳುವುದು ಅಪರೂಪವಲ್ಲವೆ? ಓದಿ ಈ ಸ್ಟೋರಿ.

Viral: ಅಕಸ್ಮಾತ್ ಆಕೆ ಅಪರಿಚಿತರಿಗೆ ಆನ್​ಲೈನ್​ನಲ್ಲಿ ಹಣ ಕಳಿಸಿದಳು, ಮುಂದೇನಾಯಿತು?
ಅಪರಿಚಿತರಿಗೆ ಹಣ ಕಳಿಸಿದ ಮಹಿಳೆ ನಂತರ ಅವರೊಂದಿಗೆ ಚಾಟ್ ಮಾಡಿದ ಸ್ಕ್ರೀನ್ ಶಾಟ್
Follow us
ಶ್ರೀದೇವಿ ಕಳಸದ
|

Updated on:Sep 11, 2023 | 3:00 PM

Online : ಎಲ್ಲವೂ ಆನ್​​​ಲೈನ್ (Online)​ ಜೀವನವಾಗಿ ತಲೆ ಎಂಬುದು ಗೊಂದಲದ ಗೂಡಾಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಆಗಿರುತ್ತದೆ. ಅದರಲ್ಲಿಯೂ ಆನ್​ಲೈನ್​ ಮೂಲಕ ಹಣ ಪಾವತಿಸುವಾಗ ಎಷ್ಟೇ ಎಚ್ಚರ ವಹಿಸಿದರೂ ಸಾಲದು. ಇದೀಗ ವೈರಲ್ ಆಗಿರುವ ಈ ಸ್ಕ್ರೀನ್​ ಶಾಟ್​ ನೋಡಿ. ಮಹಿಳೆಯೊಬ್ಬಾಕೆ ಆಕಸ್ಮಿಕವಾಗಿ ಆನ್​​ಲೈನ್​ ಮೂಲಕ ಬೆರೆಯವರಿಗೆ ಹಣ ಕಳಿಸಿಬಿಟ್ಟಿದ್ದಾರೆ. ಕಳಿಸಿದ ನಂತರ ಆಕೆಗೆ ತಾನು ಮಾಡಿದ್ದೇನು ಎನ್ನುವುದು ಹೊಳೆದಿದೆ. ತಕ್ಷಣವೇ ಆ ಬದಿಯ ವ್ಯಕ್ತಿಗೆ ಮೆಸೇಜ್ ಮಾಡಿ ಹಣ ಮರಳಿಸುವಂತೆ ಕೇಳಿಕೊಂಡಿದ್ದಾಳೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಸ್ವಾರಸ್ಯಕರವಾಗಿದ್ದು ಇದೀಗ ಸ್ಕ್ರೀನ್ ಶಾಟ್​ ವೈರಲ್ ಆಗಿದೆ.

ಇದನ್ನೂ ಓದಿ : Viral Video: ಶ್​! ಇದೀಗ ನಿದ್ದೆಯ ಸಮಯ; ಹುಲಿಕುಟುಂಬದ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

X ಖಾತೆದಾರರೊಬ್ಬರು ಆಕಸ್ಮಿಕವಾಗಿ ಬೇರೊಬ್ಬರಿಗೆ ಹಣ ಟ್ರಾನ್ಸಫರ್ ಮಾಡಿದ್ದಾರೆ. ತಕ್ಷಣವೇ ಅವರು ಹಣ ಟ್ರಾನ್ಫಫರ್ ಮಾಡಿದವರೊಂದಿಗೆ ಚಾಟ್​ ಮೂಲಕ ವಿಷಯ ತಿಳಿಸಿದ್ಧಾರೆ. ಪರಸ್ಪರರ ನಡುವೆ ನಡೆದ ಸೌಜನ್ಯಯುತ ಸಂಭಾಷಣೆಯನ್ನು ಗಮನಿಸಿದ ನೆಟ್ಟಿಗರು ಇವರಿಬ್ಬರನ್ನೂ ಶ್ಲಾಘಿಸಿದ್ದಾರೆ.

ಅಪರಿಚಿತರಿಗೆ ಹಣ ಕಳಿಸಿ ಅವರೊಂದಿಗೆ ಚಾಟ್ ಮಾಡಿದ ಸ್ಕ್ರೀನ್ ಶಾಟ್

ತಪ್ಪಾದ ವ್ಯಕ್ತಿಗೆ ಹಣ ಕಳಿಸಿದ ನಂತರ ನಾನು ಒಂದು ನಿಮಿಷ ಅಕ್ಷರಶಃ ಬೆವರುತ್ತಿದ್ದೆ ಎಂದಿದ್ದಾರೆ @medusaflower. ಅಪರಿಚಿತ ವ್ಯಕ್ತಿಗೆ ಹಣ ಕಳಿಸುವಂತೆ ಮಹಿಳೆ ಕೇಳಿಕೊಂಡಾಗ, ಮೊದಲು ಹಣವನ್ನು ಮರಳಿಸಲಾಗುವುದಿಲ್ಲ! ಎಂದು ತಮಾಷೆ ಮಾಡಿದ್ದಾರೆ. ಹೀಗೆ ಅವರ ಸಂಭಾಷಣೆ ಸಾಗಿದೆ. ಈತನಕ ಈ ಪೋಸ್ಟ್​ ಅನ್ನು ಸುಮಾರು 70,000 ಜನರು ನೋಡಿದ್ದಾರೆ. 500 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; 53 ವರ್ಷದ ಮಹಿಳೆ ‘ಜೈಲರ್’ಗೆ ಹೆಜ್ಜೆ ಹಾಕಿದಾಗ

ಮಾನವೀಯತೆ ಇದೆ ಎನ್ನುವುದನ್ನು ಆ ಅಪರಿಚಿತ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ ಒಬ್ಬರು. ಒಮ್ಮೆ ನನಗೆ ಒಬ್ಬ ಮಹಿಳೆ ಭಾರೀ ಮೊತ್ತದ ಹಣವನ್ನು ಕಳಿಸಿದಳು. ನಂತರ ನನಗೆ ಫೋನ್ ಮಾಡಿದಳು. ಆಕೆಯ ಧ್ವನಿ ನಿಜಕ್ಕೂ ನಡಗುತ್ತಿತ್ತು. ಅಯ್ಯೋ ಇಷ್ಟೊಂದೇಕೆ ಭಯಪಡುತ್ತಿದ್ದೀರಿ? ಒಂದೇ ನಿಮಿಷ ಕಾಯಿರಿ, ನಿಮ್ಮ ಹಣವನ್ನು ನಿಮಗೆ ಮರಳಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದೆ. ಅಂದಿನಿಂದ ನಾವಿಬ್ಬರೂ ಸಂಪರ್ಕದಲ್ಲಿದ್ದೇವೆ. ತನ್ನ ವೈಯಕ್ತಿಕ ಸಮಸ್ಯೆಗಳನ್ನು; ಆಕೆ ಹಂಚಿಕೊಳ್ಳುತ್ತಾಳೆ ಎಂದಿದ್ದಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:53 pm, Mon, 11 September 23

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ