AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾವಾಲಾ ಕಾವು; 53 ವರ್ಷದ ಮಹಿಳೆ ‘ಜೈಲರ್​’ಗೆ ಹೆಜ್ಜೆ ಹಾಕಿದಾಗ

Jailer: ಪುಟ್ಟಮಕ್ಕಳಿಂದ ಹಿಡಿದು ವೃತ್ತಿಪರ ಕಲಾವಿದರು, ರೂಪದರ್ಶಿಯರು, ಸಿನೆಮಾ ನಟನಟಿಯರು ಮತ್ತು ಅನೇಕ ಡಿಜಿಟಲ್ ಕ್ರಿಯೇಟರುಗಳು ಈ ಹಾಡಿಗೆ ಹೆಜ್ಜೆ ಹಾಕಿ ಕಾವೇರಿಸಿಬಿಟ್ಟರು. ಇದೀಗ 53 ವರ್ಷದ ಮಹಿಳೆಯೊಬ್ಬರು ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ನೆಟ್ಟಿಗರು ಇವರ ಎನರ್ಜಿಗೆ ಫಿದಾ ಆಗಿದ್ದಾರೆ. ನೋಡಿ ಈ ವಿಡಿಯೋ.

Viral Video: ಕಾವಾಲಾ ಕಾವು; 53 ವರ್ಷದ ಮಹಿಳೆ 'ಜೈಲರ್​'ಗೆ ಹೆಜ್ಜೆ ಹಾಕಿದಾಗ
ಕಾವಾಲಾಗೆ ಹೆಜ್ಜೆ ಹಾಕುತ್ತಿರುವ ಮಹಿಳೆ
ಶ್ರೀದೇವಿ ಕಳಸದ
|

Updated on: Sep 11, 2023 | 12:33 PM

Share

Kaavaalaa: ರಜಿನಿಕಾಂತ (Rajinikanth) ಮತ್ತು ತಮನ್ನಾ ಭಾಟಿಯಾ ಅಭಿನಯದ ಜೈಲರ್​ನ ಕಾವಾಲಾ ಇನ್ನೂ ಕಾವನ್ನು ಹೆಚ್ಚಿಕೊಳ್ಳಿಸುತ್ತಲೇ ಇದೆ. ಇದೀಗ 53 ವರ್ಷದ ಮಹಿಳೆ ನೀರು ಸೈನಿ, ತಮನ್ನಾ ಭಾಟಿಯಾರ ಹೆಜ್ಜೆ ಮತ್ತು ಭಾವಾಭಿನಯವನ್ನು ಅನುಕರಿಸಿ ನೆಟ್ಟಿಗರ ಮನಗೆದ್ದಿದ್ದಾರೆ. ಆಹಾ ನಿಮ್ಮ ಎನರ್ಜೀ ಎಂದು ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಈ ವಿಡಿಯೋ ಅನ್ನು ಆ. 12ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಾಗಿದೆ. ಈತನಕ 2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 10,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಸಲ ಈ ವಿಡಿಯೋ ನೋಡಿದೆವು ನಿಮ್ಮ ಎನರ್ಜಿ ಲೆವಲ್​ ಸಖತ್ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Optical Illusion: ಉದುರಿದ ಎಲೆಗಳ ನಡುವೆ ಅಡಗಿರುವ 4 ಸೇಬುಗಳನ್ನು ಗುರುತಿಸುವಿರಾ? 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ತನಕ ನೂರಾರು ಜನರ ರೀಲ್ಸ್ ನೋಡಿದ್ದೇನೆ. ಆದರೆ ನಿಮ್ಮಷ್ಟು ಅದ್ಭುತವಾಗಿ ಯಾರೂ ಮಾಡಿರಲಿಲ್ಲ ಎಂದಿದ್ದಾರೆ ಒಬ್ಬರು. ನಿಮ್ಮ ವಯಸ್ಸು ಎಷ್ಟು ಮೇಡಮ್​ ಎಂದು ಕೇಳಿದ್ದಾರೆ ಇನ್ನೊಬ್ಬರು. ವಯಸ್ಸು ಕೇವಲ ಅಂಕಿ ಮಾತ್ರ ಎನ್ನುವುದನ್ನು ನೀವು ಸಾಬೀತು ಮಾಡಿದ್ದೀರಿ, ನಿಮ್ಮ ನೃತ್ಯಪ್ರೀತಿ ಮುಂದುವರಿಯಲಿ ಎಂದಿದ್ದಾರೆ ಮಗದೊಬ್ಬರು.

53 ವರ್ಷದ ಮಹಿಳೆ ಕಾವಾಲಾಗೆ ಹೆಜ್ಜೆ ಹಾಕಿದಾಗ

View this post on Instagram

A post shared by Neeru Saini (@neerusaini__)

ನಾನು ನಿಮ್ಮ ಅಭಿಮಾನಿಯಾದೆ, ಮತ್ತಷ್ಟು ಟ್ರೆಂಡಿಂಗ್ ಹಾಡುಗಳಿಗೆ ನೀವು ನರ್ತಿಸಿ ಎಂದಿದ್ದಾರೆ ಒಬ್ಬರು. ಅರೆ ವಾಹ್​, ನೀವು ಹದಿನೆಂಟರ ಹುಡುಗಿಯಂತೆ ಕಾಣುತ್ತಿದ್ದೀರಿ ಮತ್ತು ಡ್ಯಾನ್ಸ್ ಮಾಡಿದ್ದೀರಿ ಎಂದಿದ್ದಾರೆ ಇನ್ನೊಬ್ಬರು. ನನಗೂ ಈಗ ನಿಮ್ಮ ಜೊತೆ ಒಂದು ರೀಲ್ ಮಾಡಬೇಕು ಎನ್ನಿಸುತ್ತಿದೆ, ನೀವು ಎಲ್ಲಿರುತ್ತೀರಿ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: 41 ವರ್ಷಗಳ ನಂತರ ರಾಜಕುಮಾರ ಹಾಡು ವೈರಲ್; ಮೂಲಹಾಡಿಗಿಂತಲೂ ಮಧುರ ಎಂದ ನೆಟ್ಟಿಗರು

ಅಂತೂ ನಿಮ್ಮ ಈ ನೃತ್ಯ ಅನೇಕರಿಗೆ ಸ್ಫೂರ್ತಿಯಾಯಿತು, ನನಗೂ ಈಗ ಡ್ಯಾನ್ಸ್ ಮಾಡಬೇಕು ಈ ಹಾಡಿಗೆ ಎನ್ನಿಸುತ್ತಿದೆ. ಆದರೆ ವಯಸ್ಸಿನಲ್ಲಿ ನಿಮ್ಮಷ್ಟೇ ಇದ್ದರೂ ನನಗೆ ನಿಮ್ಮಷ್ಟು ಶಕ್ತಿ ಇಲ್ಲ ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ