Viral Optical Illusion: ಉದುರಿದ ಎಲೆಗಳ ನಡುವೆ ಅಡಗಿರುವ 4 ಸೇಬುಗಳನ್ನು ಗುರುತಿಸುವಿರಾ?

Monday Blues: ಮತ್ತೊಂದು ಸೋಮವಾರ ಬಂದಿದೆ. ನಿನ್ನೆಯಷ್ಟೇ ಭಾನುವಾರವನ್ನು ಆರಾಮಾಗಿ ಕಳೆದು ಇದೀಗ ಆಕಳಿಸುತ್ತ ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿರುವಿರಿ. ಹಾಗಿದ್ದರೆ ಈ ಆಕಳಿಕೆ ಹೋಗಿಸಲು ಮತ್ತು ಮೆದುಳನ್ನು ಚುರುಕಾಗಿಸಲು ಒಂದು ಹೊಸ ಬ್ರೇನ್​ ಟೀಸರ್​ ನಿಮಗಾಗಿ ತರಲಾಗಿದೆ. ಬನ್ನಿ ಈ ಚಿತ್ರವನ್ನು ನೋಡಿ ಹಾಗಿದ್ದರೆ.

Viral Optical Illusion: ಉದುರಿದ ಎಲೆಗಳ ನಡುವೆ ಅಡಗಿರುವ 4 ಸೇಬುಗಳನ್ನು ಗುರುತಿಸುವಿರಾ?
ನಾಲ್ಕು ಸೇಬುಹಣ್ಣುಗಳು ಅಡಗಿವೆ, ಕಂಡುಹಿಡಿಯಿರಿ.
Follow us
ಶ್ರೀದೇವಿ ಕಳಸದ
|

Updated on: Sep 11, 2023 | 10:40 AM

Brain Teaser: ಈ ಸೋಮವಾರವಾದರೂ ಸೋಮಾರಿತನ ಬಿಟ್ಟು ಲವಲವಿಕೆಯಿಂದ ಕೆಲಸ ಮಾಡಬೇಕು ಎನ್ನುವ ಮೂಡ್​ನಲ್ಲಿ ನೀವಿದ್ದೀರಿ. ಹಾಗಾಗಿಯೇ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಮತ್ತೊಂದು ಹೊಸ ಬ್ರೇನ್​ ಟೀಸರ್​​ಅನ್ನು ನಿಮಗಾಗಿ ತಂದಿದ್ದೇವೆ. ಇಲ್ಲಿ ಎಲೆಗಳ ರಾಶಿಯೇ ಬಿದ್ದಿದೆ. ಈವುಗಳ ಮಧ್ಯೆ ನಾಲ್ಕು ಸೇಬುಹಣ್ಣುಗಳು ಅಡಗಿವೆ. ಈ ಸೇಬುಗಳನ್ನು ಕಂಡುಹಿಡಿಯಲು ನಿಮಗೆ ಎಷ್ಟು  ಸಮಯ ಬೇಕು? 10 ಸೆಕೆಂಡ್​? 15 ಸೆಕೆಂಡ್? ಎಂದಿನಂತೆ ಗರ್ಗೆಲಿ ಡುಡಾಸ್​ ಎಂಬ ಕಲಾವಿದರು ಈ ಚಿತ್ರ ರಚಿಸಿ ಫೇಸ್​ಬುಕ್​ನಲ್ಲಿ (Facebook) ಪೋಸ್ಟ್ ಮಾಡಿದ್ದಾರೆ. 362 ಜನರು ಲೈಕ್ ಮಾಡಿದ್ದು, 97 ಜನರು ಇದನ್ನು ಹಂಚಿಕೊಂಡಿದ್ದು, 40 ಜನ ಉತ್ತರಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : Viral Video: 41 ವರ್ಷಗಳ ನಂತರ ರಾಜಕುಮಾರ ಹಾಡು ವೈರಲ್; ಮೂಲಹಾಡಿಗಿಂತಲೂ ಮಧುರ ಎಂದ ನೆಟ್ಟಿಗರು

ಅಯ್ಯೋ ಇದು ನನ್ನ ಕಣ್ಣುಗಳು ನೋಯುವಂತೆ ಮಾಡುತ್ತಿದೆ ಎಂದಿದ್ದಾರೆ ಒಬ್ಬರು. ನನಗೆ ಎಲ್ಲ ಸೇಬುಗಳೂ ಸಿಕ್ಕವು ಎಂದು ಇನ್ನೊಬ್ಬರು. ಅದ್ಭುತವಾದ ಬ್ರೇನ್ ಟೀಸರ್ ಇದು ಕೆಲವು ಜನ ಹೇಳಿದ್ದಾರೆ ಮತ್ತು ಸರಿಯಾದ ಉತ್ತರಗಳನ್ನು ಹೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೀವೂ ಹುಡುಕಿ ಈ ಎಲೆಗಳ ನಡುವೆ ಅಡಗಿರುವ ಸೇಬುಗಳನ್ನು

ಮೊದಲ ನೋಟಕ್ಕೆ ನಿಮಗೇನೂ ಕಾಣದೆ ನಿರಾಶೆಯಾಗಬಹುದು. ಹಾಗಾಗಿ ಮತ್ತೆ ಪ್ರಯತ್ನಿಸಿ. ಸುಳಿವು ಬೇಕೆ? ಒಂದು ಹಣ್ಣು ಚಿತ್ರದ ಬಲಮೂಲೆಯ ಕಡೆ ಇದೆ. ಈಗ ನಿಮಗೆ ಒಂದು ಅಂದಾಜು ಬರಬಹುದು. ಒಂದು ಹಣ್ಣನ್ನು ಗುರುತಿಸಿದ ಮೇಲೆ ಆ ಚಿತ್ರದ ಆಕಾರ ಮತ್ತು ಬಣ್ಣವನ್ನು ನಿಮ್ಮ ಮೆದುಳು ಗ್ರಹಿಸಿರುತ್ತದೆಯಾದ್ದರಿಂದ ಉಳಿದ ಮೂರು ಹಣ್ಣುಗಳನ್ನು ಗುರುತಿಸಲು ಸುಲಭವೆನ್ನಿಸಬಹುದು. ಇಲ್ಲವಾದರೆ ಈ ಕೆಳಗಿನ ಚಿತ್ರವನ್ನು ನೋಡಿ.

ಮತ್ತಷ್ಟು ವೈರಲ್​ ಬ್ರೇನ್ ಟೀಸರ್​ ಮತ್ತು ಆಪ್ಟಿಕಲ್ ಇಲ್ಲ್ಯೂಷನ್​ಗಳನ್ನು ನಿಮಗಾಗಿ ಹುಡುಕಿ ತರಲಾಗುವುದು. ಈ ಚಿತ್ರವನ್ನು ನಿಮ್ಮ ಮನೆಯ ಸದಸ್ಯರಿಗೆ, ಆಪ್ತರಿಗೆ, ಸ್ನೇಹಿತರಿಗೆ ಮತ್ತು ಮಕ್ಕಳಿಗೆ ತೋರಿಸಿ ಅವರ ಮೆದುಳೂ ಚುರುಕಾಗಲು ಸಹಕರಿಸಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ