AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಎನ್​ಗಳ ಮಧ್ಯೆ ಎಷ್ಟು ಎಮ್​​ಗಳು ಅಡಗಿವೆ, 5 ಸೆಕೆಂಡುಗಳಲ್ಲಿ ಹುಡುಕುವಿರಾ?

Brain Teaser: ಕಣ್ಣುಗಳು ಮತ್ತು ತಲೆ ನೋಯಲು ಆರಂಭಿಸಿತು ಈ ಚಿತ್ರ ನೋಡಿದಮೇಲೆ ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ. ನನಗೆ ಉತ್ತರ ಸಿಕ್ಕಿತು ಆದರೆ ಐದು ಸೆಕೆಂಡುಗಳಿಗಿಂತ ಹೆಚ್ಚು ಕಾಲ ತೆಗೆದುಕೊಂಡೆ ಎಂದಿದ್ದಾರೆ ಒಬ್ಬರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ಹೇಳಿದ್ದಾರೆ. ಸರಿಯಾದ ಉತ್ತರವನ್ನು ಹದ್ದಿನ ಕಣ್ಣುಳ್ಳ ನೀವು ಕಂಡುಕೊಳ್ಳಬಹುದೆ?

Viral Optical Illusion: ಎನ್​ಗಳ ಮಧ್ಯೆ ಎಷ್ಟು ಎಮ್​​ಗಳು ಅಡಗಿವೆ, 5 ಸೆಕೆಂಡುಗಳಲ್ಲಿ ಹುಡುಕುವಿರಾ?
ಐದು ನಿಮಿಷದೊಳಗೆ ಇಲ್ಲಿ ಎಷ್ಟು M ಗಳಿವೆ ಎಂದು ಹುಡುಕಿರಿ
ಶ್ರೀದೇವಿ ಕಳಸದ
|

Updated on:Sep 09, 2023 | 12:47 PM

Share

Viral: ಶನಿವಾರವೂ ಕೆಲಸ ಮಾಡಬೇಕೇ? ಎಂದು ನೀವು ಆಲಸ್ಯದಿಂದಲೇ ಕೆಲಸದಲ್ಲಿ ತೊಡಗಿರುವಿರಿ. ಭಾನುವಾರದ (Sunday) ವಿರಾಮಕ್ಕಾಗಿ ಕಾಯುತ್ತ ತೂಕಡಿಸುತ್ತಿದ್ದೀರಿ. ಹೀಗಿರುವಾಗ ನಿಮ್ಮ ಮೆದಳಿಗೆ ಸ್ವಲ್ಪ ಗುದ್ದು ಕೊಡಬೇಕಲ್ಲವೆ? ಇದೀಗ ಹೊಸ ಭ್ರಮಾತ್ಮಕ ಚಿತ್ರವನ್ನು (Optical Illusion) ನಿಮಗಾಗಿ ತರಲಾಗಿದೆ. ಇಲ್ಲಿ N ಅಕ್ಷರಗಳ ಸಾಲುಗಳ ಮಧ್ಯೆ ಒಂದಿಷ್ಟು M ಅಕ್ಷರಗಳು ಅಡಗಿವೆ. ನಿಮಗೆ ಕೊಡುವ ಸಮಯ 5 ಸೆಕೆಂಡುಗಳು ಮಾತ್ರ. ನಿಮ್ಮ ಹದ್ದಿನ ಕಣ್ಣಿನಿಂದ ನೀವು ಎಷ್ಟು M ಅಕ್ಷರವನ್ನು ಹುಡುಕಬಲ್ಲಿರಿ?

ಇದನ್ನೂ ಓದಿ : Viral Video: ಅಲಸ್ಕನ್ ಸಮುದ್ರದಾಳದಲ್ಲಿ ಪತ್ತೆಯಾದ ಬಂಗಾರದ ಮೊಟ್ಟೆ; ಗೊಂದಲಕ್ಕೆ ಬಿದ್ದ ಸಂಶೋಧಕರು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ @mathcince ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅನೇಕರು M ಅಕ್ಷರಗಳನ್ನು ಗುರುತಿಸಿದ್ದು ಅವುಗಳ ಒಟ್ಟು ಸಂಖ್ಯೆಯನ್ನು ಹೇಳಿದ್ದಾರೆ. ಈತನಕ ಈ ವಿಡಿಯೋ ಅನ್ನು ಸುಮಾರು 30,000 ಜನರು ನೋಡಿದ್ದಾರೆ. ಸುಮಾರು 5,000 ಜನರು ಲೈಕ್ ಮಾಡಿದ್ದಾರೆ. ಐದು ಸೆಕೆಂಡುಗಳಲ್ಲಿ ನಿಮಗೂ ಗುರುತಿಸಲು ಸಾಧ್ಯವಾಗುವುದೆ? ಪ್ರಯತ್ನಿಸಿ.

ನಿಮ್ಮ ಸಮಯ ಇದೀಗ ಶುರು

ನಾಲ್ಕನೇ ಸಾಲಿನಲ್ಲಿ ನನಗೆ M ಕಂಡಿತು ಎಂದಿದ್ದಾರೆ ಒಬ್ಬರು. ನನಗೂ ಕಂಡಿತು ಆದರೆ ಬಹಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ ಇನ್ನೊಬ್ಬರು. ನನಗೆ ಒಟ್ಟು 7 M ಕಂಡವು ಆದರೆ ಸಾಕಷ್ಟು ಸಮಯ ತೆಗೆದುಕೊಂಡೆ ಎಂದಿದ್ದಾರೆ ಮತ್ತೊಬ್ಬರು. ನನಗೆ 8M ಕಂಡವು ಆದರೆ ಐದು ಸೆಕೆಂಡಿನ ಒಳಗಲ್ಲ ಎಂದಿದ್ದಾರೆ ಮಗದೊಬ್ಬರು. ನನಗಂತೂ ತಲೆನೋವು ಕಣ್ಣುನೋವು ಬಂದಿತು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಬಿಲ್ಲಿ ಬೆಲ್ಲೀ ಡ್ಯಾನ್ಸ್​; ಸಾಕುಪ್ರಾಣಿಗಳೆಂದರೆ ಮಕ್ಕಳಿದ್ದಂತೆ ಎಂದು ಬುದ್ಧಿ ಹೇಳುತ್ತಿರುವ ನೆಟ್ಟಿಗರು

ಇದು ನಿಜಕ್ಕೂ ಕಣ್ಣಿಗೆ ತಲೆಗೆ ಕಷ್ಟ ಕೊಡುವಂಥ ಭ್ರಮಾತ್ಮಕ ಚಿತ್ರವಾಗಿದೆ. ಯಾಕೆ ಇಂಥ ಚಿತ್ರವನ್ನು ಆಯ್ಕೆ ಮಾಡಿದಿರಿ? ಎಂದು ಕೇಳಿದ್ದಾರೆ ಇನ್ನೂ ಕೆಲವರು. ನನಗೆ ಹದಿನೈದು ಸೆಕೆಂಡಿನಲ್ಲಿ ಒಟ್ಟು 8 M ಕಂಡವು ಎಂದಿದ್ದಾರೆ ಮತ್ತೊಬ್ಬರು.

ನಿಮಗೆ ಎಷ್ಟು M ಕಂಡವು? ಎಷ್ಟು ಸಮಯ ತೆಗೆದುಕೊಂಡಿರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Published On - 12:44 pm, Sat, 9 September 23

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್