Viral Video: ದೈತ್ಯಹುಲಿಗೆ ಚುಂಬಿಸುತ್ತಿರುವ ವ್ಯಕ್ತಿ; ಈತ ಅದೃಷ್ಟವಂತ ಎನ್ನುತ್ತಿರುವ ಕೆಲಮಂದಿ

Animal Lover : ಆಟವಾಡಿಸುತ್ತ ಮೈಸವರುತ್ತ ಮುದ್ದಿಸಿದರೆ ಪ್ರಾಣಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು. ಯಾವ ಪ್ರಾಣಿಗಳಿಗೆ? ಬೆಕ್ಕು, ನಾಯಿ, ಎತ್ತು, ಆಕಳು, ಕುರಿ ಇತ್ಯಾದಿ. ಆದರೆ ಹುಲಿ? ಈ ವ್ಯಕ್ತಿ ಇದಕ್ಕೆ ಆಟವಾಡಿಸುತ್ತ ಅದರ ಬಾಯಿಗೆ ಬಾಯಿ ಕೊಟ್ಟು ಚುಂಬಿಸಿದ್ದಾನೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್​ಮಂದಿ ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ನೀವೇನಂತೀರಿ?

Viral Video: ದೈತ್ಯಹುಲಿಗೆ ಚುಂಬಿಸುತ್ತಿರುವ ವ್ಯಕ್ತಿ; ಈತ ಅದೃಷ್ಟವಂತ ಎನ್ನುತ್ತಿರುವ ಕೆಲಮಂದಿ
ಹುಲಿಗೆ ಮುತ್ತು ಕೊಡುತ್ತಿರುವ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on: Sep 09, 2023 | 3:10 PM

Tiger: ಎತ್ತು, ಹಸು, ಬೆಕ್ಕು, ನಾಯಿ ಮುಂತಾದ ಸಾಕುಪ್ರಾಣಿಗಳಿಗೆ ಮುದ್ದಿನಿಂದ ಅಪ್ಪಿಕೊಳ್ಳುವುದು ಮುತ್ತು ಕೊಟ್ಟಂತೆ ಮಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ ಮಾಡಿರುತ್ತೀರಿ. ಆದರೆ ವನ್ಯಪ್ರಾಣಿಗಳಿಗೆ? ಅದನ್ನೂ ನೋಡಿರುತ್ತೀರಿ. ಆದರೆ ಹೀಗೆ ನೇರಾನೇರ ಹುಲಿಗೆ ಚುಂಬಿಸುವುದನ್ನು? ಇಲ್ಲವಾದರೆ ಈಗ ನೋಡಿ. ಈ ವ್ಯಕ್ತಿ ಈ ದೈತ್ಯ ಹುಲಿಯನ್ನು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನಾಲ್ಕು ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ  (Instagram) ಹಂಚಿಕೊಂಡ ಈ ವಿಡಿಯೋ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಕೆಲವರಂತೂ ಈತ ಬಾರೀ ಅದೃಷ್ಟವಂತ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ‘ಹುಟ್ಟಿದ್ದು ಒಂಟಿಗಾಲಲ್ಲಿ ಆದರೆ ಬದುಕಿನುದ್ದಕ್ಕೂ ನರ್ತಿಸುತ್ತೇನೆ’ ಫಾತೀಮಾ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಷ್ಟು ದೊಡ್ಡ ಪ್ರಾಣಿಯೊಂದಿಗೆ ಈತ ಹೀಗೆ ಆಟವಾಡುತ್ತಿರುವುದನ್ನು ನೋಡಲು ಸಂತೋಷವೆನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಆ ಹುಲಿ ಕೆಟ್ಟ ಮೂಡ್​ಗೆ ತಿರುಗುವತನಕ ಅವನು ಹೀಗೆ ಆಟವಾಡುತ್ತಾನೆ ಚುಂಬಿಸುತ್ತಾನೆ, ಮುಂದೆ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಹುಲಿಯೊಂದಿಗೆ ಆಟಕ್ಕಿಳಿದ ವ್ಯಕ್ತಿ

ನನಗೂ ಹೀಗೊಂದು ಅವಕಾಶ ಸಿಗಬಾರದೆ? ಎಂದು ಕೇಳಿದ್ದಾರೆ ಒಬ್ಬರು. ಯಾಕೆ ಬದುಕುವ ಆಸೆ ಇಲ್ಲವೆ? ಎಂದಿದ್ಧಾರೆ ಇನ್ನೊಬ್ಬರು. ನಿಜಕ್ಕೂ ಈ ಹುಲಿ ತುಂಬಾ ಸುಂದರವಾಗಿದೆ, ಅಂದರೆ ಅವನು ಅದನ್ನುಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಮನುಷ್ಯ ಹೀಗೇಕೆ ವರ್ತಿಸುತ್ತಿದ್ದಾನೆ? ಅವನು ಹೀಗೆ ಮಾಡುವುದರಿಂದ ಹುಲಿಗೆ ತೊಂದರೆಯಾಗುವುದಿಲ್ಲವೆ? ಎಂದಿದ್ದಾರೆ ಒಬ್ಬರು. ನಾನು ನಾಯಿ ಬೆಕ್ಕು ಮುಂತಾದ ಪ್ರಾಣಿಗಳನ್ನು ಸಾಕಿಕೊಂಡಿದ್ದೇನೆ ಆದರೆ ನನ್ನ ಹೆಂಡತಿಯನ್ನು ಬಿಟ್ಟು ಯಾವ ಪ್ರಾಣಿಗೂ ಚುಂಬಿಸಿಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ‘ಗುರು’ ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ

ಬೆಕ್ಕು ಮತ್ತು ಹುಲಿಗಳಿಗೆ ಮುದ್ದಿಸಿಕೊಳ್ಳುವುದೆಂದರೆ ಇಷ್ಟವೆನ್ನಿಸುತ್ತದೆ ಎಂದು ನಾನು ಈ ವಿಡಿಯೋ ಮೂಲಕ ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ನನಗ್ಯಾಕೋ ಈ ಮನುಷ್ಯ ಸಹಜವೆನ್ನಿಸುತ್ತಿಲ್ಲ ಎಂದಿದ್ಧಾರೆ ಕೆಲವರು. ನಾನಂತೂ ಈ ವಿಡಿಯೋ ಅನ್ನು ಮತ್ತೆ ನೋಡುವುದಿಲ್ಲ ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ