Viral Video: ‘ಗುರು’ ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ

Music: ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸಂಗೀತದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನಸೆಳೆಯುತ್ತಿರುವ ಪ್ರತಿಭಾವಂತ ಗಾಯಕಿಯರಲ್ಲಿ ಭಾರ್ಗವಿ ವೆಂಕಟರಾಮ್​ ಕೂಡ ಒಬ್ಬರು. ಸೆ. 19ರಂದು ಬೆಂಗಳೂರು ಗಣೇಶೋತ್ಸವದಲ್ಲಿ ಇವರು ಭಾಗವಹಿಸಲಿದ್ದಾರೆ. ಅಲ್ಲಿ ಕೇಳುವ ಮೊದಲು ಇಲ್ಲಿ 'ಏಯ್ ಹೇರಥೇ' ಹಾಡನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಲೇಪದೊಂದಿಗೆ ಹೇಗೆ ಪ್ರಸ್ತುತಪಡಿಸಿದ್ದಾರೆ ಎಂದು ಕೇಳಿ.

Viral Video: 'ಗುರು' ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ
ಕರ್ನಾಟಕ ಸಂಗೀತ ಕಲಾವಿದೆ ಭಾರ್ಗವಿ ವೆಂಕಟರಾಮ್​ ಸೋದರ ವಿಷ್ಣು ವೆಂಕಟರಾಮ್​ ಅವರೊಂದಿಗೆ
Follow us
|

Updated on:Sep 09, 2023 | 10:40 AM

Bollywood : ‘ನನ್ನ ಮೆಚ್ಚಿನ ಸಿನೆಮಾಗಳಲ್ಲಿ ‘ಗುರು’ ಕೂಡ ಒಂದು. ಮಣಿರತ್ನಂ ನಿರ್ದೇಶನ ಮತ್ತು ಎ ಆರ್​ ರೆಹಮಾನ್ ಅವರ ಸಂಗೀತ ನಿರ್ದೇಶನದಲ್ಲಿ ‘ಏಯ್ ಹೇರಾಥೇ’ ಮೂಡಿಬಂದಿದೆ. ನನ್ನ ತಮ್ಮ ವಿಷ್ಣು  ಪ್ರತಿಭಾನ್ವಿತ. ನನ್ನ ಮತ್ತು ಆಲೋಚನೆಗಳು ಅದ್ಭುತವಾಗಿ ಹೊಂದುತ್ತವೆ. ಹಾಗಾಗಿ ಈ ಹಾಡನ್ನು ನಾವಿಬ್ಬರೂ ಸೇರಿ ಪ್ರಸ್ತುಪಡಿಸಿದ್ದೇವೆ.’ ಎಂಬ ನೋಟ್​ನೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ (Carnatic Classical Music) ಗಾಯಕಿ ಭಾರ್ಗವಿ ವೆಂಕಟರಾಮ್ (Bhargavi Venkatram) ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೊಸ್ಟ್ ಮಾಡಿದ್ಧಾರೆ. ಕರ್ನಾಟಕ ಸಂಗೀತ ಶೈಲಿಯಲ್ಲಿ ಈ ಹಾಡನ್ನು ಭಾರ್ಗವಿ ಪ್ರಸ್ತುತಪಡಿಸಿದ ರೀತಿ ನೆಟ್ಟಿಗರನ್ನು ಬಹುವಾಗಿ ಸೆಳೆಯುತ್ತಿದೆ.

ಇದನ್ನೂ ಓದಿ : Viral Video: ಹುಟ್ಟುಮಚ್ಚೆ; ಈ ‘ಸಂಜಯ’ ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಯಮನ್​ ಕಲ್ಯಾಣ ರಾಗದಲ್ಲಿ ಸಂಯೋಜಿಸಿದ ಈ ಹಾಡನ್ನು ಹರಿಹರನ್​, ಅಲ್ಕಾ ಯಾಜ್ಞಿಕ್​ ಮತ್ತು ಮೊಹಮ್ಮದ್​ ಅಸ್ಲಮ್​ ಹಾಡಿದ್ದಾರೆ. 2006ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ ಬಚ್ಚನ್ ನಟಿಸಿದ್ದಾರೆ. ಸೂಫಿ ಸಂಗೀತ ಛಾಯೆಯಲ್ಲಿ ಸಂಯೋಜನೆಗೊಂಡ ಈ ಹಾಡನ್ನು ಇದೀಗ ಭಾರ್ಗವಿ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಇವರ ದನಿಬಾನಿಯೊಂದಿಗೆ ವಯೋಲಿನ್​ನ ಮಾಧುರ್ಯ ಮಿಳಿತಗೊಂಡು ಈ ಹಾಡಿನ ಸೌಂದರ್ಯವನ್ನು ಇಮ್ಮಡಿಸಿದೆ.

‘ಏಯ್ ಹೈರಥೇ’ ಭಾರ್ಗವಿ ​ಮತ್ತು ವಿಷ್ಣು ಪ್ರಸ್ತುತಿಯಲ್ಲಿ

ಭಾರ್ಗವಿ ವೆಂಕಟರಾಮ್ ಸಂಗೀತ ಕುಟುಂಬದಿಂದ ಬಂದವರು. ಪ್ರೊ. ಎಚ್.ವಿ.ಕೃಷ್ಣಮೂರ್ತಿಯವರ ಮೊಮ್ಮಗಳು ಮತ್ತು ಎಚ್.ಕೆ.ವೆಂಕಟರಾಮ್ ಮತ್ತು ತ್ರಿವೇಣಿ ಸರಳಾಯರ ಮಗಳು. ಎರಡನೇ ವಯಸ್ಸಿನಲ್ಲಿಯೇ ಭಾರ್ಗವಿ ಹಲವಾರು ರಾಗಗಳನ್ನು ಗುರುತಿಸಬಲ್ಲವರಾಗಿದ್ದರು ಮತ್ತು ಸ್ವರಜ್ಞಾನದ ಬಗ್ಗೆ ಜ್ಞಾನವನ್ನೂ ಹೊಂದಿದ್ದರು. ಪ್ರಸ್ತುತ  ಚೆನ್ನೈನ ವಿದ್ವಾನ್​​ ಟಿ. ಎಂ. ಕೃಷ್ಣ (T M Krishna) ಅವರಲ್ಲಿ ಸಂಗೀತ ಕಲಿಕೆ ಮುಂದುವರಿಸಿದ್ದಾರೆ. ಅನುರಾಧಾ ಶ್ರೀಧರ್​ ಬಳಿ ಭರತನಾಟ್ಯವನ್ನೂ ಕಲಿತಿದ್ಧಾರೆ ಮತ್ತು ಕಂಪ್ಯೂಟರ್​ ಸೈನ್ಸ್​ನಲ್ಲಿ (Computer Science) ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ.

ಎರಡು ವರ್ಷದ ಭಾರ್ಗವಿಯ ಸಂಗೀತ ಜ್ಞಾನ

‘ಏ ಹೈರಥೆ’ ಹಾಡಿನ ವಿಡಿಯೋ ಅನ್ನು ಈತನಕ ಸುಮಾರು 25,000 ಜನರು ಲೈಕ್ ಮಾಡಿದ್ಧಾರೆ. ಮೂಲ ಹಾಡಿಗೆ ಬೇರೆಯದೇ ಹೊಳಪು ನಿಮ್ಮಿಂದ ಚಿಮ್ಮಿದೆ ಎಂದು ಅನೇಕರು ಹೇಳಿದ್ದಾರೆ. ನನ್ನಿಷ್ಟದ ಹಾಡನ್ನು ಹಾಡಿದ್ದಕ್ಕೆ ಬಹಳ ಧನ್ಯವಾದ ಎಂದು ಕೆಲವರು ಹೇಳಿದ್ಧಾರೆ. ಉಸ್ತಾದ ರಶೀದಖಾನ್ ಹಾಡಿರುವ ‘ಆವೋಗೆ ಜಬ ತುಮ’ ಹಾಡನ್ನು ಹಾಡಿ ಎಂದಿದ್ದಾರೆ ಒಬ್ಬರು.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:54 pm, Fri, 8 September 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್