AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮುಂಬೈ; ಯುವಕನ ಸಿಂಗಲ್​ ಬೆಡ್ರೂಮ್ ಫ್ಲ್ಯಾಟ್​ ಟೂರ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

Single Bedroom Flat: ಮುಂಬೈನಲ್ಲಿ ಬಾಡಿಗೆಗಾಗಲೀ ಖರೀದಿಗಾಗಲೀ ಮನೆ ಸಿಗಬೇಕೆಂದರೆ ಎಷ್ಟು ಕಷ್ಟ ಮತ್ತು ತುಟ್ಟಿ ಎನ್ನುವುದನ್ನು ಈ ವಿಡಿಯೋ ಮನವರಿಕೆ ಮಾಡಿಕೊಡುತ್ತದೆ. ಇದನ್ನು ನೋಡಿದಮೇಲೆ ನಾವಿರುವ ಮನೆಯೇ ವಾಸಿ ಎನ್ನುತ್ತೀರೋ ಹೇಗೆ? ರೂ. 2.5 ಕೋಟಿಯ ಸಿಂಗಲ್​ ಬೆಡ್ರೂಮ್​ ಮುಂಬೈನ ದಕ್ಷಿಣ ಭಾಗದಲ್ಲಿದೆ ಎಂದು ಈ ಯುವಕ ಹೇಳಿದ್ದಾನೆ!

Viral Video: ಮುಂಬೈ; ಯುವಕನ ಸಿಂಗಲ್​ ಬೆಡ್ರೂಮ್ ಫ್ಲ್ಯಾಟ್​ ಟೂರ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ
ದಕ್ಷಿಣ ಮುಂಬೈನಲ್ಲಿ ರೂ. 2.5 ಕೋಟಿ ಬೆಲೆಯುಳ್ಳ ಸಿಂಗಲ್​​ ಬೆಡ್ರೂಮ್​ ಟೂರ್​
Follow us
ಶ್ರೀದೇವಿ ಕಳಸದ
|

Updated on:Sep 08, 2023 | 6:09 PM

Mumbai: ಮುಂಬೈ ವಾಸ್ತವ್ಯವೆಂದ ಕೂಡಲೇ ನಿಮ್ಮ ಹಣದ ಥೈಲಿ ತುಸು ದೊಡ್ಡದಾಗಿಯೇ ಇರಬೇಕು, ಅಂದಾಗ ಮಾತ್ರ ಬಾಡಿಗೆಗೆ ಅಥವಾ ಖರೀದಿಗೆ ಮನೆಗಳು ಸಿಗಬಹುದು. ಆದರೆ ನಿಮಗೆ ಬೇಕಾದಂಥ ಮತ್ತು ನೀವಂದುಕೊಂಡಂಥ ಜಾಗದಲ್ಲಿ ಸಿಗಬೇಕು ಎಂದರೆ ಹಣದ ಥೈಲಿ ಇನ್ನೂ ದೊಡ್ಡದಾಗಿಯೇ ಇರಬೇಕು. ಹಾಗೆಂದು ಸಿಕ್ಕ ಮನೆಯ ಬಗ್ಗೆ ಸಮಾಧಾನವಿರುತ್ತದೆಯೇ ಗೊತ್ತಿಲ್ಲ. ಆದರೆ ಸಿಕ್ಕಮನೆಯೇ ಅರಮನೆ ಎಂಬಂತೆ ಸಮಾಧಾನಿಸಿಕೊಳ್ಳದಿದ್ದರೆ ಬದುಕು ಸಾಗದು! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಯುವಕ ಮುಂಬೈನ ಸಿಂಗಲ್​ ಬೆಡ್ರೂಮ್​ ಫ್ಲ್ಯಾಟ್​ ಟೂರ್ (Single Bedroom Flat Tour)​ ವಿಡಿಯೋ ಹಂಚಿಕೊಂಡಿದ್ದಾನೆ. ಈ ವಿಡಿಯೋ ನೋಡಿದ ಕೆಲವರು ಕಳವಳಕ್ಕೆ ಈಡಾದರೆ ಇನ್ನೂ ಕೆಲವರು ಹಾಸ್ಯ ಮಾಡಿ ನಕ್ಕಿದ್ದಾರೆ.

ಇದನ್ನೂ ಓದಿ : Viral Video: ಬಿಲ್ಲಿ ಬೆಲ್ಲೀ ಡ್ಯಾನ್ಸ್​; ಸಾಕುಪ್ರಾಣಿಗಳೆಂದರೆ ಮಕ್ಕಳಿದ್ದಂತೆ ಎಂದು ಬುದ್ಧಿ ಹೇಳುತ್ತಿರುವ ನೆಟ್ಟಿಗರು

ಮುಂಬೈನ ದಕ್ಷಿಣ ಭಾಗದಲ್ಲಿರುವ ರಿಯಲ್ ಎಸ್ಟೇಟ್​ ಏಜೆಂಟರುಗಳು ಗ್ರಾಹಕರಿಗೆ ಹೇಗೆ ಮನೆಯನ್ನು ಪರಿಚಯಿಸುತ್ತಾರೆ ಎನ್ನುವುದರ ಮೋಜಿನ ಝಲಕ್​ ಇಲ್ಲಿದೆ. ಸುಮಿತ್ ಪಾಲ್ವೆ ಎನ್ನುವ ಯುವಕ ತನ್ನ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮುಂಬೈನ ದಕ್ಷಿಣ ಭಾಗದಲ್ಲಿ ಇರುವುದರಿಂದ ಈ ಸಿಂಗಲ್​ ಬೆಡ್ರೈಮ್ ಫ್ಲ್ಯಾಟ್​ನ ಬೆಲೆ ರೂ. 2.5 ಕೋಟಿ. ಕಾಂಪ್ರೋಮೈಸ್ ಮಾಡಿಕೊಳ್ಳಲೇಬೇಕು ಎಂದು ವಿಡಿಯೋದುದ್ದಕ್ಕೂ ಹೇಳುತ್ತ ಹೋಗುತ್ತಾನೆ.

ಮುಂಬೈನ ಸಿಂಗಲ್ ಬೆಡ್ರೂಮ್​ ಫ್ಲ್ಯಾಟ್​ ಟೂರ್

View this post on Instagram

A post shared by SUMIT PALVE (@me_palve)

ಜುಲೈ 8ರಂದು ಪೋಸ್ಟ್​ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 1 ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅವನು ಟೆರೇಸ್​ಗೆ ಹೋಗುವತನಕವೂ ನನ್ನ ಉಸಿರುಗಟ್ಟಿತ್ತು ಎಂದಿದ್ದಾರೆ ಒಬ್ಬರು. ನಿಜಕ್ಕೂ ಇಂಥ ಮನೆಗಳಲ್ಲಿ ವಾಸಿಸುವ ಜೀವನ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ ಎಂದಿದ್ದಾರೆ ಇನ್ನೊಬ್ಬರು. ಅಡುಗೆಮನೆಯ ಪಕ್ಕದಲ್ಲಿಯೇ ವಾಷ್​​ರೂಮ್​! ಇದು ಅತ್ಯಂತ ಕೆಟ್ಟದ್ದುಎಂದಿದ್ದಾರೆ ಮತ್ತೊಬ್ಬರು. ಈ ಮನೆ ನೋಡಿದ ಮೇಲೆ ನಾನು ಉತ್ತಮ ಸೌಲಭ್ಯಗಳನ್ನು ಹೊಂದಿದ್ದೇನೆ ಎನ್ನುವುದು ಅರಿವಾಯಿತು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬೆಯಾನ್ಸ್​​ ಸಂಗೀತ ಕಛೇರಿಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆನೋವು; ಹೆಣ್ಣುಮಗು ಜನನ

ಈ ಮನೆ ನೋಡಿದಮೇಲೆ ದೆಹಲಿಯ ಮನೆಗಳು ಸ್ವರ್ಗಸಮಾನ ಎಂದಿದ್ದಾರೆ ಒಬ್ಬರು. ನಾವು ಈಗಲೂ ಇಂಥ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:19 pm, Fri, 8 September 23

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ