AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಯಾನ್ಸ್​​ ಸಂಗೀತ ಕಛೇರಿಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆನೋವು; ಹೆಣ್ಣುಮಗು ಜನನ

Concert : ನಿಮ್ಮ ಮಗುವಿಗೆ ಬೆಯಾನ್ಸ್​ ಸಂಗೀತ ಕೇಳಬೇಕು ಎನ್ನಿಸಿತ್ತೇನೋ, ಅದಕ್ಕೆ ಒಂದು ವಾರ ಮೊದಲೇ ಅದು ಹೊರಬಂದಿದೆ, ಇದು ಬೆಯಾನ್ಸ್​ ಸಂಗೀತ ಮಹಿಮೆ! ಎಂದಿದ್ದಾರೆ ಅನೇಕ ನೆಟ್ಟಿಗರು. ಈ ಮಹಿಳೆ ಸಂಗೀತ ಕಛೇರಿಯಲ್ಲಿದ್ದಾಗ ಹೆರಿಗೆ ಬೇನೆಗೆ ಒಳಗಾದಾಗಿನಿಂದ ಹಿಡಿದು ಮಗು ಕೈಗೆ ಬರುವ ತನಕದ ವಿಡಿಯೋ ಇಲ್ಲಿದೆ.

Viral Video: ಬೆಯಾನ್ಸ್​​ ಸಂಗೀತ ಕಛೇರಿಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆನೋವು; ಹೆಣ್ಣುಮಗು ಜನನ
ಬೆಯಾನ್ಸ್​ ಸಂಗೀತ ಕಛೇರಿಯಲ್ಲಿರುವಾಗ ಸಾರಾ ಫ್ರಾನ್ಸಿಸ್​​ಗೆ ಹೆರಿಗೆ ಬೇನೆ ಶುರುವಾಗತೊಡಗಿತು
Follow us
ಶ್ರೀದೇವಿ ಕಳಸದ
|

Updated on:Sep 08, 2023 | 12:32 PM

Concert: ಪ್ರಸಿದ್ಧ ಗಾಯಕಿ ಬೆಯಾನ್ಸ್​ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ಶುರುವಾಗಿದೆ. ಆನಂತರ ಆಸ್ಪತ್ರೆಗೆ ದಾಖಲಿಸಿದಾಗ ಸುರಕ್ಷಿತವಾಗಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ದಂಪತಿ ಮಗುವಿಗೆ ನೋಲಾ ಎಂದು ನಾಮಕರಣವನ್ನೂ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸೆ. 4ರಂದು ಬೆಯಾನ್ಸ್ (Beyonce)​ ತನ್ನ ಹುಟ್ಟುಹಬ್ಬದ ನಿಮಿತ್ತ ಏರ್ಪಡಿಸಿದ್ದ ಸಂಗೀತ ಕಛೇರಿಗೆ  ಆಗಮಿಸಿದ್ದ ಆಕೆಯ ಅಭಿಮಾನಿ ಸಾರಾ ಫ್ರಾನ್ಸಿಸ್​ ಜೋನ್ಸ್​ಗೆ  ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಆಕೆಯ ಪತಿ ಮಾರ್ಸೆಲ್ ಸ್ಟಿಯರ್ಸ್​​ ಆಸ್ಪತ್ರೆಗೆ ದಾಖಲಿಸಿದನು.

ಇದನ್ನೂ ಓದಿ : Viral Video: ಮನೆಗೆ ಬಂದ 3 ಹೆಬ್ಬಾವುಗಳನ್ನು ರಕ್ಷಿಸಿದ ಗ್ಲೆನ್​ ಮ್ಯಾಕ್​ಗ್ರೆತ್; ಸಾಹಸ ಮೆಚ್ಚಿದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನಲ್ಲಿ ನಿನ್ನೆಯಷ್ಟೇ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 35,500ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು 5 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ವಿಶೇಷ ಸಂದರ್ಭದಲ್ಲಿ ಜನಿಸಿದ ಈ ಮಗುವನ್ನು ತುಂಬುಹೃದಯದಿಂದ ಸ್ವಾಗತಿಸಿದ್ದಾರೆ. ಅದರ ಅಪ್ಪಅಮ್ಮನಿಗೆ ಅಭಿನಂದನೆ ತಿಳಿಸಿದ್ದಾರೆ.

ಬೆಯಾನ್ಸ್​ ಸಂಗೀತ ಕಛೇರಿ ಕೇಳುತ್ತಲೆ ತಾಯಗರ್ಭದಿಂದ ಬಂದ ನೋಲಾಪುಟ್ಟಿ

ಸಾರಾ ಫ್ರಾನ್ಸಿಸ್​ ಜೋನ್ಸ್​ಗೆ ಸಂಗೀತ ಕಛೇರಿಗೆ ಹೋಗುತ್ತಿದ್ದಂತೆ ಸುಸ್ತಾಗಲು ಶುರುವಾಗಿದೆ. ಹೆರಿಗೆಗೆ ಇನ್ನೂ ಒಂದು ವಾರ ಇದ್ದುದರಿಂದ ಇದು ಸುಳ್ಳುಬೇನೆ ಎಂದುಕೊಂಡಿದ್ದಾಳೆ. ಹಾಗಾಗಿ ಸಂಗೀತ ಕಛೇರಿಯನ್ನು ಆಸ್ವಾದಿಸಲು ಗಂಡನೊಂದಿಗೆ ಕುಳಿತಿದ್ದಾಳೆ. ಆದರೆ ನೋವು ಹೆಚ್ಚುತ್ತಿದ್ದಂತೆ ಅವರು ಅಲ್ಲಿಂದ ತಮ್ಮ ಕಾರನ್ನು ತಲುಪಿದ್ದಾರೆ. ನೋವು ತೀವ್ರವಾಗುತ್ತಿದ್ದಂತೆ ಆಸ್ಪತ್ರೆಗೆ ಹೋಗಿದ್ದಾರೆ. ಸೆ. 5ಕ್ಕೆ ಮಗು ನೋಲಾ ಅಮ್ಮನ ಗರ್ಭದಿಂದ ಹೊರಬಂದಿದೆ.

ಇದನ್ನೂ ಓದಿ : Viral Video: ಆಕೆ ಪ್ರಕಾಶಮಾನವಾಗಿ ಕಂಗೊಳಿಸಬೇಕು; ವಧುವಿಗೆ ಎಲ್​ಇಡಿ ಲೆಹೆಂಗಾ ವಿನ್ಯಾಸ ಮಾಡಿದ ವರ

ಅಂತೂ ನೋಲಾ ಈ ಪ್ರಪಂಚಕ್ಕೆ ಬರುವಾಗ ಏನೆಲ್ಲ ನಡೆಯುತ್ತಿತ್ತು ಎನ್ನುವುದು ಈ ವಿಡಿಯೋದಲ್ಲಿ ಅಡಕವಾಗಿದೆ. ಆಹಾ ಮಗು, ಈ ಸಂಗೀತ ಕಛೇರಿಯನ್ನು ನೋಡಲು ಬಯಸಿದ್ದಳು ಎನ್ನಿಸುತ್ತದೆ, ಅಭಿನಂದನೆಗಳು ಎಂದಿದ್ದಾರೆ ಒಬ್ಬರು. ಈ ಸುಂದರವಾದ ನೆನಪು ನಿಮ್ಮನ್ನು ಬದುಕಿನಲ್ಲಿ ಸದಾ ಖುಷಿಯಿಂದ ಇಡುತ್ತದೆ, ಒಳಿತಾಗಲಿ ಎಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:26 pm, Fri, 8 September 23

ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್