Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್ ವೈರಲ್
Kannada Cinema: ಸಪ್ತಸಾಗರದಾಚೆ ಎಲ್ಲೋ ಟೈಟಲ್ ಟ್ರ್ಯಾಕ್ನ ಹಾಡನ್ನು ಧನಂಜಯ್ ರಂಜನ್ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಕಪಿಲ್ ಕಪಿಲನ್ ಹಾಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಸುನಿಧಿ ಗಣೇಶ ಈ ಹಾಡನ್ನು ಹಾಡಿದ್ದು ಅದೀಗ ವೈರಲ್ ಆಗುತ್ತಿದೆ. ಈತನಕ ಈ ಗಾಯಕಿ ಎಲ್ಲಿ ಅವಿತಿದ್ದರು? ಎಂದು ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.
Kannada Cinema: ಬೆಂಗಳೂರಿನಲ್ಲಿದ್ದರೂ ಕರಾವಳಿಯ ನೀಲಸಮುದ್ರವನ್ನೇ ಧ್ಯಾನಿಸುವ ಕನಸುಕಂಗಳ ಹುಡುಗಿ ಪ್ರಿಯಾ (Rukmini Vasanth) ಮತ್ತು ಅವಳ ಕನಸುಗಳನ್ನು ನನಸು ಮಾಡಲೆಂದೇ ಬದುಕುತ್ತಿರುವ ಮನು (Rakshit Shetty). ಇವರಿಬ್ಬರ ಪ್ರೇಮಕಥೆಯೇ ‘ಸಪ್ತಸಾಗರದಾಚೆ ಎಲ್ಲೋ’. ಈ ಸಿನೆಮಾದ ಟೈಟಲ್ ಟ್ರ್ಯಾಕ್ ಕೇಳಿದ ಯಾರೂ ಗುನುಗದೇ ಇರಲಾರರು, ಅಂಥ ನವಿರಾದ ಆಕರ್ಷಣೆ ಇದಕ್ಕಿದೆ. ಚರಣ್ರಾಜ್ ಸಂಗೀತ ನಿರ್ದೇಶನ ಮತ್ತು ಕಪಿಲ್ ಕಪಿಲನ್ ಅವರ ಕಂಠ ಈ ಹಾಡಿಗಿದೆ. ಸೆ. 15ರಂದು ಬಿಡುಗಡೆಯಾಗಲಿರುವ ಮೇಘನಾ ರಾಜ್ ಅಭಿನಯದ ‘ತತ್ಸಮ ತದ್ಭವ’ ಸಿನೆಮಾದಲ್ಲಿ ‘ದೂರಿ ಲಾಲಿ’ ಹಾಡಿರುವ ಸುನಿಧಿ ಗಣೇಶ್ ಇದೀಗ ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ಟ್ರ್ಯಾಕ್ ಹಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇವರ ಸುಮಧುರವಾದ ಧ್ವನಿ ನೆಟ್ಟಿಗರನ್ನು ಬಹುವಾಗಿ ಸೆಳೆಯುತ್ತಿದೆ.
ಇದನ್ನೂ ಓದಿ : Viral Video: ಅದು ವಿದ್ವಾನ್ ಬಾತುಕೋಳಿಯವರ ಬೀಟ್ಬಾಕ್ಸ್; ಎಡಿಟಿಂಗ್ ವೇಳೆ ಗೊತ್ತಾದ ಸತ್ಯ
ಸುನಿಧಿ ಗಣೇಶ ಹಿಂದೂಸ್ತಾನಿ ಶಾಸ್ತ್ರೀಯ ಕಲಾವಿದೆ. ಪಂ. ಪರಮೇಶ್ವರ ಹೆಗಡೆ ಅವರ ಶಿಷ್ಯೆ. ಶಾಸ್ತ್ರೀಯ, ಲಘು ಶಾಸ್ತ್ರೀಯ, ಸುಗಮ ಮತ್ತು ಸಿನೆಮಾ ಸಂಗೀತಕ್ಕೂ ಒಗ್ಗುವಂಥ ದನಿಬಾನಿ ಇವರದಾಗಿದೆ. ‘ನೀನಿಲ್ಲದೇ’ ಎನ್ನುವ ಆಲ್ಬಂನಲ್ಲಿ ಇವರ ಭಾವಪೂರ್ಣ ಧ್ವನಿ ಅಡಕವಾಗಿದೆ. ಸಂಗೀತಕ್ಕೆ ಸಂಬಂಧಿಸಿದ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ ಅನುಭವ ಇವರಿಗಿದೆ. ಆಗಾಗ ಇನ್ಸ್ಟಾಗ್ರಾಂನಲ್ಲಿ ಕನ್ನಡ, ಹಿಂದೀ ಸಿನೆಮಾ ಗೀತೆಗಳ ವಿಡಿಯೋ ಅಪ್ಲೋಡ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿರುತ್ತಾರೆ.
ಸುನಿಧಿ ಗಣೇಶ ಹಾಡಿರುವ ಸಪ್ತಸಾಗರದಾಚೆ ಎಲ್ಲೋ
View this post on Instagram
ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ನಾಯಕಿ ರುಕ್ಮಿಣಿ ವಸಂತ್ ಈ ರೀಲ್ಗೆ ‘ಬ್ಯೂಟಿಫುಲ್’ ಎಂದು ಪ್ರತಿಕ್ರಿಯಿಸಿದ್ದು, ರುಕ್ಮಿಣಿ ಅವರ ಅಭಿಮಾನಿಗಳ ದಂಡು ಆ ಪ್ರತಿಕ್ರಿಯೆಯ ಕೆಳಗೆ ‘ಐ ಲವ್ ಯೂ’ ಎಂದು ಪ್ರೀತಿ ಅಭಿಮಾನದ ತೊರೆಯನ್ನೇ ಹರಿಸಿದೆ. ಸುನಿಧಿಯವರ ಮಾಧುರ್ಯಕ್ಕೆ ಮಾರುಹೋದ ಅನೇಕರು, ನಿಮಗೆ ಸಂಗೀತದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹಾರೈಸಿದ್ದಾರೆ.
ಸುನಿಧಿ ಗಣೇಶ ಪ್ರಸ್ತುತ ಪಡಿಸಿದ ‘ಬಾನ ತೊರೆದು ನೀಲಿ’
View this post on Instagram
ಸುನಿಧಿ ಇತ್ತೀಚೆಗೆ ಹಾಡಿರುವ ‘ಬಾನ ತೊರೆದು ನೀಲಿ ಮರೆಯಾಯಿತೇತಕೇ’ ಹಾಡನ್ನು ಸುಮಾರು 1.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ನಿಮ್ಮ ಹಾಡುಗಾರಿಕೆ ಅನುಭವಿಸುವುದೇ ಒಂದು ಆನಂದ ಎಂದು ಪ್ರತಿಕ್ರಿಯಿಸಿದ್ದಾರೆ ಒಬ್ಬರು. ‘ಬಿಸಿಲು ಕುದುರೆಯೊಂದು’ ಹಾಡನ್ನು ಹಾಡಿ ಎಂದು ಹೇಳಿದ್ದಾರೆ ಮತ್ತೊಬ್ಬರು.
ಈ ಹಾಡುಗಳನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:49 pm, Tue, 5 September 23