Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯವನ್ನು ಕಲಿಸುತ್ತೀರಾ? ಬೆಲ್ಜಿಯಮ್​ ವ್ಯಕ್ತಿ ಇವರನ್ನೆಲ್ಲಾ ಕೇಳಿದಾಗ

Indian Dance: ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಬೆಲ್ಜಿಯಂನಿಂದ ಭಾರತಕ್ಕೆ ಬಂದಿದ್ದಾನೆ ಈ ವ್ಯಕ್ತಿ. ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯಗಳನ್ನು ಕಲಿಸಿ ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದಾನೆ. ಮಕ್ಕಳಾದಿಯಾಗಿ ಭಾರತದ ವಿವಿಧ ಭಾಷೆಗಳ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಕಲಿಸಿದ್ದಾರೆ. ನೆಟ್ಟಿಗರು, ಇವನಿಗೊಂದು ಆಧಾರ್ ಕಾರ್ಡ್ ಕೊಡಿಸಿಬಿಡಿ ಎಂದು ಇದೀಗ ತಮಾಷೆ ಮಾಡುತ್ತಿದ್ದಾರೆ!

Viral Video: ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯವನ್ನು ಕಲಿಸುತ್ತೀರಾ? ಬೆಲ್ಜಿಯಮ್​ ವ್ಯಕ್ತಿ ಇವರನ್ನೆಲ್ಲಾ ಕೇಳಿದಾಗ
ಭಾರತೀಯ ಸಿನೆಮಾ ನೃತ್ಯದಲ್ಲಿ ಪಾಲ್ಗೊಂಡ ಬೆಲ್ಜಿಯಂ ಪ್ರಜೆ.
Follow us
ಶ್ರೀದೇವಿ ಕಳಸದ
|

Updated on: Sep 04, 2023 | 10:22 AM

Dance: ಭಾರತೀಯ ಸಂಗೀತ ನೃತ್ಯ ಮತ್ತು ಕಲೆಗಳಿಗೆ ಮಾರುಹೋಗದವರು ಯಾರಿದ್ದಾರೆ? ಅದರಲ್ಲಿಯೂ ಬಾಲಿವುಡ್​ ಎಂದರೆ ವಿದೇಶಿಗರಿಗೆ ಅದೇನೋ ಸೆಳೆತ. ಇದೀಗ ಬೆಲ್ಜಿಯಂನ ಡಿಜಿಟಲ್​ ಕ್ರಿಯೇಟರ್ (Digital Creator)​​ ಒಬ್ಬರು ಭಾರತಕ್ಕೆ ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ನಂತರ ಸಿನೆಮಾ​ ಹಾಡುಗಳಿಗೆ ಡ್ಯಾನ್ಸ್ ಕಲಿತು ಮ್ಯಾಷಪ್​​ ರೀಲ್ ಕೂಡ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಅನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಎಡ್ ಪೀಪಲ್​ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಟಮ್​ ಟಮ್​, ಪತಲಿ ಕಮರಿಯಾ, ತು ಮೇರಿ, ರಾರಾ ರಕ್ಕಮ್ಮ, ಚೈಯ್ಯಾ ಚೈ, ತುಕಡಂ ಮಾಂಗಲ್ಯ… ಹೀಗೆ ಮುಂತಾದ ಹಾಡುಗಳಿಗೆ ಮಕ್ಕಳು, ಯುವಕ ಯುವತಿಯರೊಂದಿಗೆ ಡ್ಯಾನ್ಸ್ ಮಾಡಿ ಮಾಡಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ : Viral: ಅಪರೂಪದ ಪುನರ್ಮಿಲನ; 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ನಾಯಿ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

6 ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಇದೀಗ ಸುಮಾರು 3 ಮಿಲಿಯನ್​ ಜನರು ನೋಡಿದ್ದಾರೆ. 4.1 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಕಲೆಯ ಬಗೆಗಿನ ಪ್ರೀತಿ ಮತ್ತು ಮುಕ್ತತೆಯನ್ನು ಬಹುವಾಗಿ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯ ಕಲಿಸಬಹುದೇ; ಬೆಲ್ಜಿಯಮ್​ ಪ್ರಜೆ ಕೇಳಿದಾಗ

View this post on Instagram

A post shared by Ed People (@ed.people)

ನಿಜಕ್ಕೂ ತುಂಬಾ ವೈವಿಧ್ಯಮಯವಾಗಿದೆ ಈ ರೀಲ್​​, ಉತ್ಸಾಹ ಮತ್ತು ಖುಷಿ ಎಲ್ಲರಲ್ಲಿಯೂ ಚಿಮ್ಮುತ್ತಿದೆ ಎಂದಿದ್ದಾರೆ ಒಬ್ಬರು. ನಾನಂತೂ ಈ ವಿಡಿಯೋ ನೋಡಿ ನಗುತ್ತಲೇ ಇದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಚೈಯ್ಯಾ ಚೈಯ್ಯಾ ರೈಲಿನ ಮೇಲೆ ನಿಂತು ಮಾಡಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು. ಯಾರಾದರೂ ಆಧಾರ್ ಕಾರ್ಡ್​ ಮಾಡಿಸಿಕೊಡಿ ಈ ವ್ಯಕ್ತಿಗೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯಹಡಗನ್ನು ಏರುವುದು ಹೇಗೆ ಗೊತ್ತೆ? ನೋಡಿ ಈ ವಿಡಿಯೋ

ಭಾರತೀಯ ನೃತ್ಯಪ್ರಕಾರಗಳು ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮ. ಉಳಿದ ನೃತ್ಯಪ್ರಕಾರಗಳಂತೆ ಲೈಂಗಿಕತೆಯನ್ನು ಪ್ರಚೋದಿಸುವುದಿಲ್ಲ, ಅದಕ್ಕಾಗಿಯೇ ನನಗೆ ಬಹಳ ಇಷ್ಟ ಎಂದಿದ್ದಾರೆ ಒಬ್ಬರು. ನನಗೆ ಡ್ಯಾನ್ಸ್​ ಕಲಿಸುತ್ತೀರಾ? ಎಂದು ಆತ ಮುದ್ದಾಗಿ ಕೇಳಿದಾಗ ಯಾರಾದರೂ ಇಲ್ಲವೆಂದು ಅವನಿಗೆ ಹೇಳಲು ಸಾಧ್ಯವೆ? ಎಂದಿದ್ದಾರೆ ಮತ್ತೊಬ್ಬರು. ಅಂತೂ ಇವನು ತನ್ನ ಮನೆಯನ್ನು ಹುಡುಕಿಕೊಂಡುಬಿಟ್ಟ! ಬೇಗ ಆಧಾರ್ ಕಾರ್ಡ್ ಒಂದು ಮಾಡಿಸಬೇಕೀಗ ಎಂದು ಅನೇಕರು ಕಾಲೆಳೆದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..