Viral Video: ದೈತ್ಯಕೊಂಬಿನ ಗೂಳಿಯೊಂದಿಗೆ ಕಾರ್ ಸವಾರಿ ಮಾಡಿದ ವ್ಯಕ್ತಿ; ಅಯ್ಯಯ್ಯೋ ಎಂದ ನೆಟ್ಟಿಗರು
Bull: ಬೆಕ್ಕನ್ನೋ, ನಾಯಿಯನ್ನೋ ಹೀಗೆ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತೀರಿ ಅಥವಾ ಕೂರಿಸಿಕೊಂಡು ಹೋಗುವುದನ್ನು ನೋಡಿದ್ದೀರಿ. ಆದರೆ ಗೂಳಿಯನ್ನು, ಅದೂ ಇಷ್ಟುದ್ದ ದೊಡ್ಡ ಕೊಂಬುಳ್ಳ ಗೂಳಿಯನ್ನು? ಅಬ್ಬಾ ನೋಡಿದ ಯಾರಿಗೂ ಭಯವಾಗುವುದಲ್ಲವೆ? ಹೆದ್ದಾರಿಯಲ್ಲಿ ಈ ಮನುಷ್ಯ ಕಾರಿನಲ್ಲಿ ಹೀಗೆ ರಾಜಾರೋಷವಾಗಿ ಇದನ್ನು ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ, ನೋಡಿ ನೀವೂ ಒಮ್ಮೆ.
Bull: ನಾಯಿಬೆಕ್ಕುಗಳನ್ನು ಕಾರಿನಲ್ಲಿ ಕರೆದೊಯ್ಯಬಹುದು. ಕುರಿ, ಆಕಳು, ಎತ್ತು, ದನಕರುಗಳನ್ನು ಟೆಂಪೋ, ಟ್ರಕ್ನಲ್ಲಿ ಸಾಗಿಸಬಹುದು. ಆದರೆ ಇಲ್ಲೊಬ್ಬ ಕಾರಿನಲ್ಲಿ ದೈತ್ಯ ಕೊಂಬುಳ್ಳ ಗೂಳಿಯನ್ನು ಕರೆದೊಯ್ಯುತ್ತಿದ್ದಾನೆ. ಅದೂ ಹೆದ್ದಾರಿಯಲ್ಲಿ! ಇಂಥ ಅಪಾಯಕಾರಿ ವಿಡಿಯೋ ನೋಡಿದ ನೆಟ್ಟಿಗರು ಹೌಹಾರುತ್ತಿದ್ದಾರೆ. ವೈರಲ್ (Viral) ಆಗುತ್ತಿರುವ ಈ ವಿಡಿಯೋಗೆ ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಊರೇ ಹಾರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಹೆದ್ದಾರಿಯಲ್ಲಿ ಶಾಂತಚಿತ್ತದಿಂದ ಚಲಿಸುತ್ತಿದ್ದಾನೆ. ಆ ಗೂಳಿಯೋ ರಾಜಾರೋಷವಾಗಿ ವಾಯುವಿಹಾರದಲ್ಲಿ ಮೈಮರೆತರುವಂತಿದೆ.
ಇದನ್ನೂ ಓದಿ : Viral Video: ಸೀರೆಯುಟ್ಟು ಪಲ್ಟಿ ಹೊಡೆದ ಅಥ್ಲೀಟ್; ಅಚ್ಚರಿಗೊಂಡ ನೆಟ್ಟಿಗರು
ಈ ಗೂಳಿ ಏನಾದರೂ ಹೀಗೆ ರೈಡ್ ಕರೆದುಕೊಂಡು ಹೋಗು ಎಂದು ಹೇಳಿತ್ತೋ ಏನೋ ಗೊತ್ತಿಲ್ಲ. ಅಥವಾ ಇನ್ನೊಂದು ಜಾಗಕ್ಕೆ ಈ ಪ್ರಾಣಿಯನ್ನು ಸಾಗಿಸುತ್ತಿದ್ದಾನೋ ಗೊತ್ತಿಲ್ಲ. ಅಂತೂ ನೋಡಲು ಈ ದೃಶ್ಯ ಅತ್ಯಂತ ಭಯಂಕರವಾಗಿದೆ. ಅಕಸ್ಮಾತ್ ಈ ಗೂಳಿ ದಾರಿಹೋಕರ ಮೇಲೆ ಹರಿಹಾಯ್ದರೆ! ಅಥವಾ ದಾರಿಹೋಕರು ಇದನ್ನು ಕೆಣಕಿದರೆ ಇದರ ಮಾಲಿಕನ ಗತಿ ಏನು?
ನೋಡಿ ಗೂಳಿ ರೈಡ್
#Nebraska police pull over man with a #bull riding in the passenger’s seat 🥴🤣#animals #nature #crazypeople pic.twitter.com/oe3hdlujbI
— Genesis Watchman Report (@ReportWatchman) August 31, 2023
ಷೋಕಿಗಾಗಿ ಹೀಗೆ ಗೂಳಿಯೊಂದಿಗೆ ಸವಾರಿ ಹೊರಟಿದ್ದಾನೋ ಏನೋ ಗೊತ್ತಿಲ್ಲ. ಅಂತೂ ಪೊಲೀಸರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ. ಮುಂದೇನಾಯಿತೋ ಅದು ಅವನಿಗೇ ಗೊತ್ತು! ಅವನ ಕಾರನ್ನು ಗಮನಿಸಿ, ಕಾರಿಗೆ ಎರಡು ಕೊಂಬುಗಳನ್ನು ಚಂದ್ರಾಕಾರದಲ್ಲಿ ಅಂಟಿಸಿದ್ದಾನೆ. ಬಹುಶಃ ಅವನು ಷೋಕಿಗಾಗಿಯೇ ಗೂಳಿಯನ್ನು ರೈಡ್ಗೆ ಕರೆದುಕೊಂಡು ಬಂದಿರುವ ಸಾಧ್ಯತೆ ಇದೆ.
ಇದನ್ನೂ ಓದಿ : Viral Video: ಕಪ್ಪುಸುಂದರಿಯ ಕನ್ನಡಿಯೊಂದಿಗಿನ ಏಕಾಂತ; ಭಂಗ ಮಾಡಿದ ನೆಟ್ಟಿಗರು
ಸಾರ್ವಜನಿಕ ಪ್ರದೇಶಗಳಲ್ಲಿ ಹೀಗೆ ಅಪಾಯಕಾರಿಯಾಗಿ ಪ್ರಾಣಿಗಳ ಸಾಗಾಣಿಕೆ ಖಂಡಿತ ಸಲ್ಲದು. ಕಾನೂನು ಮೀರಿ ನಡೆದರೆ ಖಂಡಿತ ಪೊಲೀಸರ ಅತಿಥಿಯಾಗಬೇಕಾಗುತ್ತದೆ. ಆ. 31 ರಂದು ಪೋಸ್ಟ್ ಮಾಡಿರುವ ಈ ವಿಡಿಯೋ ಅನ್ನು ಅಂತೂ ನೆಟ್ಟಿಗರು ಉಸಿರು ಬಿಗಿ ಹಿಡಿದುಕೊಂಡು ನೋಡುತ್ತಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ