Viral Video: ಸೀರೆಯುಟ್ಟು ಪಲ್ಟಿ ಹೊಡೆದ ಅಥ್ಲೀಟ್​; ಅಚ್ಚರಿಗೊಂಡ ನೆಟ್ಟಿಗರು

Adventure: ಸಾಮಾಜಿಕ ಜಾಲತಾಣಗಳು ಅನೇಕ ಪ್ರತಿಭಾವಂತರಿಗೆ, ಕುಶಲಿಗಳಿಗೆ ವೇದಿಕೆಯನ್ನು ಒದಗಿಸಿದೆ. ಅಥ್ಲೀಟ್​​​ಗಳು ಸ್ಪರ್ಧೆಗಳಿಗಾಗಿಯೇ ಕಾಯಬೇಕು ಅಂತೇನಿಲ್ಲ. ತಮ್ಮ ಬಿಡುವಿನ ವೇಳೆಯಲ್ಲಿ ಹೀಗೆ ಚಮತ್ಕಾರಿಕ ಪ್ರದರ್ಶನಗಳಿಗೆ ಒಡ್ಡಿಕೊಳ್ಳುತ್ತಾರೆ. ಮಿಶಾ ಶರ್ಮಾ ಆಗಾಗ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇಂಥ ಪ್ರದರ್ಶನಗಳ ವಿಡಿಯೋ ಅಪ್​ಲೋಡ್ ಮಾಡುತ್ತಿರುತ್ತಾರೆ. ಈ ಬಾರಿ ಸೀರೆಯುಟ್ಟು ನೆಟ್ಟಿಗರ ಗಮನ ಸೆಳೆದಿದ್ದಾರೆ.

Viral Video: ಸೀರೆಯುಟ್ಟು ಪಲ್ಟಿ ಹೊಡೆದ ಅಥ್ಲೀಟ್​; ಅಚ್ಚರಿಗೊಂಡ ನೆಟ್ಟಿಗರು
ಮಿಶಾ ಶರ್ಮಾ
Follow us
ಶ್ರೀದೇವಿ ಕಳಸದ
|

Updated on: Sep 01, 2023 | 3:00 PM

Dance: ಅಥ್ಲೀಟ್ ಮಿಶಾ ಶರ್ಮಾ (Misha Sharma) ಆಗಾಗ ಇನ್​ಸ್ಟಾಗ್ರಾಂನಲ್ಲಿ ಇಂಥ ಚಮತ್ಕಾರಿಕ ಮತ್ತು ಸಾಹಸಮಯ ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ. ಸಾರ್ವಜನಿಕವಾಗಿ ಇಂಥ ಪ್ರದರ್ಶನ ನೀಡುವ ಇವರ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಕಪ್ಪು ರವಿಕೆ ಕೆಂಪು ಸೀರೆ ಉಟ್ಟ ಮಿಶಾ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ. 17 ಗಂಟೆಗಳ ಹಿಂದೆ ಮಾಡಿದ ಈ ವಿಡಿಯೋ ಅನ್ನು ಈತನಕ ಸುಮಾರು 4,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: 24 ವರ್ಷಗಳ ನಂತರ ಶುಭಾ ಮುದ್ಗಲ್​, ಸುಖವಿಂದರ್​ ಸಿಂಗ್​ ಹಾಡಿದ ಈ ಹಾಡು ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾನು ನಿಮ್ಮ ಅಭಿಮಾನಿ, ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಿರುತ್ತೇನೆ. ನಿಜಕ್ಕೂ ನಿಮ್ಮ ಪ್ರದರ್ಶನಗಳು ಆಕರ್ಷಕವಾಗಿ ಕೂಡಿರುತ್ತವೆ ಎಂದಿದ್ದಾರೆ ಒಬ್ಬರು. ಅದ್ಭುತ, ಅತ್ಯದ್ಭುತ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನೀವು ಕೆಂಪು ಸೀರೆ ಉಟ್ಟಿದ್ದು ಈ ವಿಡಿಯೋದ ಮೆರಗನ್ನು ಹೆಚ್ಚಿಸಿದೆ ಎಂದಿದ್ದಾರೆ ಕೆಲವರು.

ಮಿಶಾ ಶರ್ಮಾಳ ಚಮತ್ಕಾರಿಕ ಪ್ರದರ್ಶನ

ಅದೆಷ್ಟು ದಿವಸ ಇಂಥವೇ ಮಟ್ಟುಗಳನ್ನು ಪುನರಾವರ್ತಿಸುತ್ತೀರಿ, ಹೊಸದನ್ನು ಪ್ರಯತ್ನಿಸಿ ಎಂದಿದ್ದಾರೆ ಒಬ್ಬರು. ನೀವು ಹಾಕಿಸಿಕೊಂಡ ಟ್ಯಾಟೂ ನೋಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಅಯ್ಯೋ ನಮ್ಮ ಗುರಗಾಂವ್​ನಲ್ಲಿ ಪ್ರತೀ ಮನೆಯ ಮಕ್ಕಳೂ ಪ್ರತೀ ದಿನ ಬೆಳಗ್ಗೆ ಹೀಗೆಯೇ ಪಲ್ಟಿ ಹೊಡೆಯುತ್ತವೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಹಳೆಯ ಸಿಡಿಗಳನ್ನು ಬಾಣಲೆಗೆ ಹಾಕಿ ಕುದಿಸುತ್ತಿರುವ ಯುವತಿ, ಮುಂದೆ?

ನೀವು ಅಥ್ಲೀಟ್​ ಎನ್ನುತ್ತೀರಿ, ಹೀಗೆ ಬೀದಿ ಪ್ರದರ್ಶನವನ್ನು ಏಕೆ ಕೊಡುತ್ತೀರಿ, ಯಾಕೆ ಹೀಗೆ? ಎಂದು ಕೇಳಿದ್ದಾರೆ ಕೆಲವರು. ಇಷ್ಟವಾದರೆ ಲೈಕ್​ ಒತ್ತು ಇಲ್ಲ ಸುಮ್ಮನೇ ಹೋಗು, ಯಾರಿಗೆ ಏನು ಇಷ್ಟವೋ ಅದನ್ನ ಮಾಡುತ್ತಾರೆ ಎಂದು ಮತ್ತೊಬ್ಬರು ಉತ್ತರಿಸಿದ್ದಾರೆ. ಏನೇ ಆಗಲಿ ಹೀಗೆ ಪ್ರದರ್ಶನ ನೀಡುವುದಕ್ಕೆ ಧೈರ್ಯ ಬೇಕು. ನೀವು ಧೈರ್ಯವಂತರು, ಒಳ್ಳೆಯದಾಗಲಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ