Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು

Pakistan : ಸುಮಾರು 6 ನಿಮಿಷಗಳ ವಿಡಿಯೋ ಇದಾಗಿದೆ. ಅತ್ತ ಹೆಣ್ಣುಮಕ್ಕಳು ಇತ್ತ ಗಂಡುಮಕ್ಕಳು ಗುಂಪಾಗಿ ಮದುವೆಯ ಔತಣಕೂಟದಲ್ಲಿ ಮುಳುಗಿದ್ದಾರೆ. ಯಾರೋ ಒಬ್ಬಾತ ಬಂದು ಅತಿಥಿಯ ಟೋಪಿಯನ್ನು ಹಾರಿಸುತ್ತಾನೆ. ಇದ್ದಕ್ಕಿದ್ದಂತೆ ಅಲ್ಲಿ ತೀವ್ರತರ ಗಲಭೆಯ ಸನ್ನಿವೇಶ ನಿರ್ಮಾಣವಾಗುತ್ತದೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋ ಸೂಚಿಸುತ್ತಿದೆ.

Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು
ಪಾಕಿಸ್ತಾನದ ಮದುವೆಯ ಔತಣ ಕೂಟದಲ್ಲಿ ವ್ಯಕ್ತಿಯೊಬ್ಬ ಅತಿಥಿಯ ಟೋಪಿ ಹಾರಿಸಿದಾಗ ಕದನವೇ ಏರ್ಪಟ್ಟಿತು
Follow us
ಶ್ರೀದೇವಿ ಕಳಸದ
|

Updated on:Sep 01, 2023 | 11:13 AM

Pakistan: ಮದುವೆ (Marriage) ಮುಗಿಸಿ ಎಲ್ಲರೂ ಔತಣಕೂಟದಲ್ಲಿ ಮುಳುಗಿದ್ದಾರೆ. ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂದ ಪುರುಷನೊಬ್ಬ ಊಟ ಮಾಡುತ್ತಿರುವ ಇನ್ನೊಬ್ಬ ಪುರುಷನ ತಲೆಯ ಮೇಲಿನ ಟೋಪಿಯನ್ನು (Cap) ಹಾರಿಸುತ್ತಾನೆ. ಅಲ್ಲಿಗೆ ಆ ಔತಣಕೂಟವೊಂದು ಕುಸ್ತಿ ಅಖಾಡಾ ಆಗಿ ಮಾರ್ಪಾಡುಗುತ್ತದೆ. ಅಲ್ಲಿದ್ದವರೆಲ್ಲ  ಪರಸ್ಪರ ಕೈಕೈ ಮಿಲಾಯಿಸತೊಡಗುತ್ತಾರೆ. ಕುರ್ಚಿ ಟೇಬಲ್ಲುಗಳನ್ನು ಎತ್ತಿ ಹಿಂಸೆಗಿಳಿಯುತ್ತಾರೆ. ಔತಣಕೂಟ ಹೋಗಿ ಅದು ಯುದ್ಧಭೂಮಿಯಂತೆ ಗೋಚರಿಸುತ್ತದೆ. ಈ ವಿಡಿಯೋ X ನಲ್ಲಿ ವೈರಲ್ ಆಗಿದೆ. ಆರು ನಿಮಿಷದ ಈ ಘಟನೆಯು ಆ. 24ರಂದು ಪಾಕಿಸ್ತಾನದ ಮದುವೆಯೊಂದರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರಂತೂ ಭಯಪಟ್ಟಿದ್ದಾರೆ.

ಇದನ್ನೂ ಓದಿ : Viral Optical Illusion: ಇದರಲ್ಲಿ ಅಡಗಿರುವ ಗುಪ್ತಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕ ಈ ವಿಡಿಯೋ ಅನ್ನು 3.4 ಲಕ್ಷ ಜನರು ನೋಡಿದ್ದಾರೆ. 2,500 ಜನರು ಲೈಕ್ ಹಾಕಿದ್ದಾರೆ. ಸುಮಾರು 450 ಜನರು ರೀಪೋಸ್ಟ್ ಮಾಡಿದ್ದಾರೆ. ಎಲ್ಲವೂ ಶಾಂತವಾಗಿ ನಡೆಯುತ್ತಿರುವ ವೇಳೆ ಈ ಟೋಪಿ ಪ್ರಕರಣದಿಂದ ಇಡೀ ಔತಣಕೂಟ ಹಿಂಸೆಯಿಂದ ಭುಗಿಲೇಳುವುದನ್ನು ನೋಡಲು ಬಹಳ ಖೇದವೆನ್ನಿಸುತ್ತದೆ. ಈ ವಿಡಿಯೋ ಪಾಕಿಸ್ತಾನ ಮೂಲದ್ದು ಎಂದು @gharkekalesh ಹೇಳಿದ್ದಾರೆ.

ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದಾಗ

ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಊಟದಲ್ಲಿ ನನಗೆ ಬೇಕಾಗುವಷ್ಟು ಮಾಂಸದ ತುಂಡುಗಳು ಸಿಗದಿದ್ದರೆ ನಾನು ಹೀಗೇ ಕೋಪಗೊಳ್ಳುತ್ತೇನೆ ಎಂದಿದ್ದಾರೆ ಒಬ್ಬರು. ಮಹಿಳೆಯರನ್ನು ಪುರುಷರನ್ನು ಒಟ್ಟಿಗೇ ಕೂರಿಸಿದ್ದರೆ ಹೀಗೆ ಜಗಳವಾಗುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಛೇ ಈ ವಿಡಿಯೋ ನೋಡಿ ನನ್ನ ಮೂಡ್ ಹಾಳಾಯಿತು ಎಂದಿದ್ದಾರೆ ಮತ್ತೊಬ್ಬರು. ಬಟರ್ ಚಿಕನ್ ಒಳ್ಳೆಯ ಕ್ವಾಲಿಟಿಯದ್ದಿರಲಿಕ್ಕಿಲ್ಲ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:13 am, Fri, 1 September 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ