Viral Video: ವಿಮಾನದ ರೆಕ್ಕೆಯ ಮೇಲೆ ಸ್ಟಂಟ್; ಕ್ಯಾಬಿನ್​​ ಸಿಬ್ಬಂದಿಯ ವಿಡಿಯೋ ವೈರಲ್

Stunt : ವಿಮಾನ ಸಿಬ್ಬಂದಿಯೂ ಮನುಷ್ಯರೇ, ಅವರಿಗೂ ಕೆಲಸದ ಏಕತಾನತೆಯಿಂದ ಬೇಸರ ಬಂದಿರುತ್ತದೆ. ಹಾಗಾಗಿ ಅವರೂ ಅಪರೂಪಕ್ಕೆ ಇಂಥ ಸ್ಟಂಟ್​​ಗಳಿಗೆ ಮೊರೆ ಹೋಗುತ್ತಾರೆ ಎಂದೆನ್ನಿಸಬಹುದು. ಆದರೆ ಅವರು ಆಯ್ಕೆ ಮಾಡಿಕೊಂಡ ಜಾಗವನ್ನು ನೋಡಿದರೆ ನಿಮಗೂ ಭಯ, ಬೇಸರವೆನ್ನಿಸುತ್ತದೆ. ವಿಮಾನದ ರೆಕ್ಕೆಯ ಮೇಲೆ ನಿಂತು ಅವರು ಮೊಬೈಲ್​ಗೆ ಪೋಸ್ ನೀಡಿದ್ದಾರೆ.

Viral Video: ವಿಮಾನದ ರೆಕ್ಕೆಯ ಮೇಲೆ ಸ್ಟಂಟ್;  ಕ್ಯಾಬಿನ್​​ ಸಿಬ್ಬಂದಿಯ ವಿಡಿಯೋ ವೈರಲ್
ಬೋಯಿಂಗ್​ 777 ವಿಮಾನ ಸಿಬ್ಬಂದಿಯು ವಿಮಾನದ ರೆಕ್ಕೆಯ ಮೇಲೆ ಸ್ಟಂಟ್ ಮಾಡುತ್ತಿರುವ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Aug 30, 2023 | 12:49 PM

Selfie: ಟರ್ಮಿನಲ್​ನಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿರುವ ಈ ವಿಮಾನದ ರೆಕ್ಕೆಯ (Flight Wings) ಮೇಲೆ ಕ್ಯಾಬಿನ್​ ಸಿಬ್ಬಂದಿ ಸ್ಟಂಟ್​ ಮಾಡಿದೆ. ಈ ದೃಶ್ಯವನ್ನು ಪ್ರಯಾಣಿಕರು ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಸ್ವಿಸ್ ಇಂಟರ್‌ನ್ಯಾಶನಲ್ ಏರ್ ಲೈನ್ಸ್‌ನ ಈ ಇಬ್ಬರೂ  ಸಿಬ್ಬಂದಿ ಬೋಯಿಂಗ್ 777 ವಿಮಾನದ ರೆಕ್ಕೆಯ ಮೇಲೆ ನರ್ತಿಸುತ್ತಾ ಫೋಟೋ ತೆಗೆಸಿಕೊಳ್ಳುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಮೊದಲು ಮಹಿಳಾ ಸಿಬ್ಬಂದಿಯನ್ನು ಕಾಣಬಹುದು ನಂತರ ಪುರುಷ ಸಿಬ್ಬಂದಿಯನ್ನು. ಈ ವಿಡಿಯೋ ನೋಡಿದ ಸ್ವಿಸ್​ ಇಂಟರ್​ನ್ಯಾಷನಲ್​ ಏರ್​ಲೈನ್ಸ್​ ಆಡಳಿತವು ಕೋಪಗೊಂಡಿದೆ.

ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿ ಎರಡು ಅಂಕಿಗಳು ಅಡಗಿವೆ, ಗುರುತಿಸಬಲ್ಲಿರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಯು ಇಂಥ ನಡೆವಳಿಕೆಯನ್ನು ಸಹಿಸುವುದಿಲ್ಲ ಎಂದು ಹೇಳಿಕೆಯನ್ನು ನೀಡಿದೆ. ವಿಡಿಯೋದಲ್ಲಿ ಅವರು ಮೋಜಿಗಾಗಿಯೇ ಮಾಡಿದ್ದರೂ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಸ್ವಿಸ್ ವಕ್ತಾರ ಮೈಕೆಲ್ ಹೇಳಿದ್ದಾರೆ.

ವಿಮಾನದ ರೆಕ್ಕೆಗಳ ಮೇಲೆ ಸ್ಟಂಟ್​

ಬೋಯಿಂಗ್ 777 ವಿಮಾನದ ರೆಕ್ಕೆಗಳು ಸುಮಾರು ಐದು ಮೀ. (16.4 ಅಡಿ) ಎತ್ತರದಲ್ಲಿವೆ. ಆ ಎತ್ತರದಿಂದ ಅಕಸ್ಮಾತ್ ಅವರಿಬ್ಬರೂ ಆಯತಪ್ಪಿ ಬಿದ್ದರೆ ಜೀವಕ್ಕೆ ಅಪಾಯ. ಇದೇನು ಮೊದಲ ಸಲವಲ್ಲ, ಅನೇಕ ಕ್ಯಾಬಿನ್​ ಸಿಬ್ಬಂದಿ ವಿಮಾನದ ಒಳಗೆ ವಿಮಾನದ ಹೊರಗೆಲ್ಲ ಹೀಗೆ ಸ್ಟಂಟ್​​ಗಳನ್ನು ವಿಡಿಯೋ ಮಾಡಲೆಂದೇ ಮಾಡುತ್ತದೆ ಎಂದಿದ್ದಾರೆ ಒಬ್ಬರು. ಅವರೂ ಮನುಷ್ಯರೇ ಅವರಿಗೂ ಏಕತಾನತೆಯಿಂದ ಬಿಡುವು ಬೇಕಿರುತ್ತದೆ, ಆದರೆ ಹೀಗೆ ಜೀವಕ್ಕೆ ಅಪಾಯ ತಂದುಕೊಳ್ಳುವುದು ಸಲ್ಲದು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಕೆಳಗೆ ಇಳೀ ಮಗು; ಅಡುಗೆಮನೆಯ ಕಟ್ಟೆ ಏರಿ ತಪಸ್ಸಿಗೆ ಕುಳಿತ ಮಾರ್ಜಾಲ

ವಿಮಾನದ ಒಳಗೆ ಏನಾದರೂ ಮಾಡಿಕೊಳ್ಳಲಿ ಆದರೆ ಹೊರಗೆ ಹೀಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ ಅನೇಕರು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:46 pm, Wed, 30 August 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?