Viral Optical Illusion: ಈ ಚಿತ್ರದಲ್ಲಿ ಎರಡು ಅಂಕಿಗಳು ಅಡಗಿವೆ, ಗುರುತಿಸಬಲ್ಲಿರಾ?

Brain Teaser : ಈ ಚಿತ್ರವನ್ನು ನೋಡುವಾಗ ಕಣ್ಣಿಗೆ ತೊಂದರೆ ಎನ್ನಿಸಿದರೆ ಸಾಧ್ಯವಾದಷ್ಟು ನಿಮ್ಮ ಮೊಬೈಲ್​ ಅನ್ನು ದೂರ ಹಿಡಿದುಕೊಳ್ಳಿ. ನಿಮ್ಮ ಕಣ್ಣನ್ನು ಅತ್ತಿಂದಿತ್ತ ಇತ್ತಿಂದಿತ್ತ ನಿಧಾನವಾಗಿ ಚಲಿಸಿ ಆಗ ಅಂಕಿಗಳು ಕಾಣುತ್ತವೆ ಎಂದಿದ್ದಾರೆ ಕೆಲ ನೆಟ್ಟಿಗರು. ನೀವು ನಿಮ್ಮದೇ ಆದ ರೀತಿಯಲ್ಲಿ ಈ ಚಿತ್ರವನ್ನು ನೋಡಿ, ಫಲಿತಾಂಶವನ್ನು ತಿಳಿಸಿ.

Viral Optical Illusion: ಈ ಚಿತ್ರದಲ್ಲಿ ಎರಡು ಅಂಕಿಗಳು ಅಡಗಿವೆ, ಗುರುತಿಸಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಎರಡು ಅಂಕಿಗಳನ್ನು ಗುರುತಿಸಿ
Follow us
ಶ್ರೀದೇವಿ ಕಳಸದ
|

Updated on:Aug 30, 2023 | 11:46 AM

Optical Illusion : ಅಬ್ಬಾ! ಈ ಚಿತ್ರವನ್ನು ನೋಡಲು ಕಣ್ಣಿಗೆ ಅದೆಷ್ಟು ಕಷ್ಟವಾಗುತ್ತಿದೆ, ಇನ್ನು ಇದರೊಳಗಿನ ಅಂಕಿಗಳನ್ನು ಗುರುತಿಸುವುದಾದರೂ ಹೇಗೆ? ಈ ಚಿತ್ರನ್ನು ನೋಡುತ್ತಿದ್ದರೆ ನನಗಂತೂ ತಲೆ ತಿರುಗಿದಂತೆ ಆಗುತ್ತಿದೆ. ನೋಡುತ್ತಿದ್ದಂತೆಯೇ ಕಣ್ಣು ಮುಚ್ಚತೊಡಗಿವೆ. ಕಣ್ಣಲ್ಲಿ ನೀರಿಳಿಯುತ್ತಿವೆ… ಹೀಗೆಲ್ಲ ನೆಟ್ಟಿಗರು ಈ ಭ್ರಮಾತ್ಮಕ ಚಿತ್ರದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಫಿಗೆನ್​ ಎನ್ನುವವರು ಈ ಚಿತ್ರವನ್ನು X ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅಡಗಿರುವ ಎರಡು ಅಂಕಿಗಳನ್ನು ಗುರುತಿಸಿ ಎಂದಿದ್ದಾರೆ. ಆದರೆ ಕಪ್ಪು ಮತ್ತು ಬಿಳಿ (Black and White) ಗೆರೆಗಳಿರುವ ಈ ಚಿತ್ರವನ್ನು ನೋಡಿದ ಅನೇಕರು ಗೊಂದಲಕ್ಕೀಡಾಗಿದ್ದಾರೆ.

ಇದನ್ನೂ ಓದಿ : Viral Video: ಕೆಳಗೆ ಇಳೀ ಮಗು; ಅಡುಗೆಮನೆಯ ಕಟ್ಟೆ ಏರಿ ತಪಸ್ಸಿಗೆ ಕುಳಿತ ಮಾರ್ಜಾಲ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಚಿತ್ರವನ್ನು ಆ. 29ರಂದು ಹಂಚಿಕೊಳ್ಳಲಾಗಿದೆ. ಈತನ 4.9 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. 19,000 ಜನರು ಲೈಕ್ ಮಾಡಿದ್ದಾರೆ. 2,260 ಜನರು ರೀಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ನನಗೇನೂ ಕಾಣುತ್ತಿಲ್ಲ. ಇದು ತುಂಬಾ ಸರಳವಾಗಿದೆ, ಆದರೆ ನನಗೇನೂ ಕಾಣುತ್ತಿಲ್ಲ ಎಂದಿದ್ದಾರೆ ಕೆಲವರು. ನೋಡಿ ನಿಮಗೇನಾದರೂ ಇದರಲ್ಲಿ ಅಡಗಿರುವ ಎರಡು ಅಂಕಿಗಳು ಕಾಣುವುದೆ?

ಎರಡು ಅಂಕಿಗಳು ಇಲ್ಲಿ ಅಡಗಿವೆ

ನನ್ನ ಕನ್ನಡಕ ತಂದು ನೋಡೋಣವೆಂದುಕೊಂಡೆ. ಅದು ಇನ್ನೊಂದು ರೂಮಿನಲ್ಲಿದೆ. ಅಲ್ಲಿಗೆ ಹೋದಾಗ  ನಾನು ಈ ರೂಮಿಗೆ ಯಾಕೆ ಬಂದೆ ಎನ್ನುವುದೇ ಮರೆತು ಹೋಯಿತು. ಆಮೇಲೆ ವಾಷ್​ರೂಮಿಗೆ ಹೋದೆ. ಅಲ್ಲಿ ಈ ಚಿತ್ರವನ್ನು ನೋಡುತ್ತ ಕುಳಿತೆ, ಇಡೀ ಜಗತ್ತನ್ನೇ ಮರೆತರೂ ನನಗೆ ಈ ಚಿತ್ರದಲ್ಲಿ ಯಾವ ಅಂಕಿಗಳೂ ಕಾಣಲೇ ಇಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಬಚ್ನಾ ಏ ಹಸೀನೋ; ಅಬ್ಬಾ ಎಂಥಾ ಶಕ್ತಿ! ಅಮ್ಮ ಮಗಳ ನೃತ್ಯ ನೋಡಿದ ನೆಟ್ಟಿಗರ ಅಚ್ಚರಿ 

ಕನ್ನಡಕವನ್ನು ಹಾಕಿ ನೋಡಿದಾಗ ನನಗೆ ಈ ಚಿತ್ರದಲ್ಲಿ Q ಅಕ್ಷರ ಕಾಣುತ್ತಿದೆ. ಕನ್ನಡಕ ತೆಗೆದು ನೋಡಿದರೆ 17 ಕಾಣುತ್ತಿದೆ. ಸರಿಯೋ ತಪ್ಪೋ ಗೊತ್ತಿಲ್ಲ ಅಥವಾ ನಾ ಭ್ರಮೆಯಲ್ಲಿದ್ದೆನೇಯೇ? ಎಂದಿದ್ದಾರೆ ಇನ್ನೊಬ್ಬರು. ಒಂದೇ ಒಂದು ಮಿಲಿಸೆಕೆಂಡಿನಲ್ಲಿ ನನಗೆ 17 ಕಂಡಿತು, ಆದರೆ ತಕ್ಷಣವೇ ಅದು ಮಾಯವಾಯಿತು ಎಂದಿದ್ದಾರೆ ಮತ್ತೊಬ್ಬರು.

ನಿಮಗೆ ಯಾವ ಅಂಕಿಗಳು ಈ ಚಿತ್ರದಲ್ಲಿ ಕಂಡವು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:46 am, Wed, 30 August 23