Viral Video: ರಣವೀರ್ ಸಿಂಗ್​, ಸೋನಾಕ್ಷಿ ಸಿನ್ಹಾ ಅಭಿನಯದ ಈ ಹಾಡಿಗೆ ಲಘುಶಾಸ್ತ್ರೀಯ ನೃತ್ಯ

Sawaar Loon : 2013ರಲ್ಲಿ ಬಿಡುಗಡೆಯಾದ ಲೂಟೇರಾ ಸಿನೆಮಾದ ಈ ಹಾಡನ್ನು ಗಾಯಕಿ ಮನಾಲಿ ಠಾಕೂರ್ ಹಾಡಿದ್ದಾರೆ. ನೃತ್ಯ ಕಲಾವಿದೆ ರಾಧಿಕಾ ವಾರಿಕೂ ರೀಲ್ ಮಾಡಿದ್ದಾರೆ. ಮಿಲಿಯನ್​ಗಟ್ಟಲೆ ಜನರು ಈ ಹಾಡನ್ನು ಮೆಚ್ಚಿದ್ದಾರೆ. ಈ ಹಾಡಿಗೆ ಈತನಕ ನೋಡಿದ ರೀಲ್​​ಗಳಲ್ಲಿ ​ಇದು ಆಕರ್ಷಕವಾಗಿದೆ ಎಂದಿದ್ದಾರೆ. ಕಲಾವಿದೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Viral Video: ರಣವೀರ್ ಸಿಂಗ್​, ಸೋನಾಕ್ಷಿ ಸಿನ್ಹಾ ಅಭಿನಯದ ಈ ಹಾಡಿಗೆ ಲಘುಶಾಸ್ತ್ರೀಯ ನೃತ್ಯ
ನೃತ್ಯಕಲಾವಿದೆ ರಾಧಿಕಾ ವಾರಿಕೂ ಸವಾರ ಲೂ ಹಾಡಿಗೆ ನರ್ತಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Aug 30, 2023 | 1:23 PM

Dance: ಮನಾಲಿ ಠಾಕೂರ್ ಹಾಡಿರುವ ಈ ಜನಪ್ರಿಯ ಹಾಡಿಗೆ ರಣವೀರ್ ಸಿಂಗ್​ ಮತ್ತು ಸೋನಾಕ್ಷಿ ಸಿನ್ಹಾ (Ranveer Singh and Sonakshi Sinha) ಅಭಿನಯಿಸಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು ಎಂಟು ಮಿಲಿಯನ್‌ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಇದೀಗ ಲಘುಶಾಸ್ತ್ರೀಯ ನೃತ್ಯಶೈಲಿಯಲ್ಲಿ ರಾಧಿಕಾ ವಾರಿಕೂ ಎಂಬ ನೃತ್ಯಕಲಾವಿದೆ ಸಿಲ್ಹೌಟ್​ನಲ್ಲಿ ಈ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಜೂ. 7ರಂದು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ನೃತ್ಯವನ್ನು ಮತ್ತು ಕಲಾವಿದೆಯ ಆಂಗಿಕಾಭಿನಯದ ಸೂಕ್ಷ್ಮವನ್ನು ನೋಡಿದ ನೆಟ್ಟಿಗರು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Viral Video: ವಿಮಾನದ ರೆಕ್ಕೆಯ ಮೇಲೆ ಸ್ಟಂಟ್; ಕ್ಯಾಬಿನ್​​ ಸಿಬ್ಬಂದಿಯ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಈತನಕ 9.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋದಲ್ಲಿ ರೆಕ್ಕೆಗಳಿಲ್ಲದ ಪಕ್ಷಿಗಳೆಲ್ಲ ಕಂಡವು ಎಂದಿದ್ದಾರೆ ಒಬ್ಬರು. ನಿಜಕ್ಕೂ ನಿಮ್ಮ ಈ ಪರಿಕಲ್ಪನೆ ಅದ್ಭುತವಾಗಿ ಎಂದಿದ್ದಾರೆ ಇನ್ನೊಬ್ಬರು.

ರಾಧಿಕಾ ವಾರಿಕೂ ನೃತ್ಯಾಭಿನಯ

ಕೋರಿಯೋಗ್ರಫಿ ತುಂಬಾ ಚೆನ್ನಾಗಿದೆ. ನೀವು ದೇವಿಯಂತೆ ಕಂಗೊಳಿಸುತ್ತಿದ್ದೀರಿ ಎಂದಿದ್ದಾರೆ ಒಬ್ಬರು. ನಿಮ್ಮ ಕೈಬೆರಳ ಸನ್ನೆ ಪಕ್ಷಿಗಳನ್ನು ಸೂಚಿಸುತ್ತಿವೆ. ಪಾರಿವಾಳದಂತೆಯೂ ತೋರುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಹಕ್ಕಿಗಳ ಮೂಲಕವೇ ನೀವು ಈ ಹಾಡನ್ನು ಹಿಡಿದಿಟ್ಟಿದ್ದು ಅತ್ಯಂತ ಸುಂದರವಾಗಿದೆ ಎಂದಿದ್ದಾರೆ ಮತ್ತೊಬ್ಬರು. ನನ್ನ ಮನಸ್ಸು ನಿಜಕ್ಕೂ ಶಾಂತಗೊಂಡಿತು, ತುಂಬಾ ಅಮೋಘವಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Optical Illusion: ಈ ಚಿತ್ರದಲ್ಲಿ ಎರಡು ಅಂಕಿಗಳು ಅಡಗಿವೆ, ಗುರುತಿಸಬಲ್ಲಿರಾ?

ಸಿಲ್ಹೌಟ್​ನಲ್ಲಿ ನೀವು ನೃತ್ಯಪ್ರದರ್ಶಿಸಿದ್ದು ಮನಸ್ಸಿಗೆ ಹಿತ ಕೊಡುವಂತಿದೆ ಎಂದಿದ್ದಾರೆ ಒಬ್ಬರು. ನನಗೂ ಈಗ ಇದೇ ಹಾಡಿಗೆ ಹೀಗೇ ನರ್ತಿಸಬೇಕೆನ್ನುವ ಹುಕಿ ಉಂಟಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ಅನ್ನು ಈತನಕ ಸುಮಾರು 20 ಸಲವಾದರೂ ನೋಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಈ ಹಾಡು ನನ್ನಿಷ್ಟದ್ದು, ಇದಕ್ಕೆ ನೀವು ನೃತ್ಯ ಸಂಯೋಜಿಸಿರುವ ರೀತಿಯ ಆಕರ್ಷಕ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ