Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುರುಕ್ಷೇತ್ರ; ಸುಖವಿಂದರ್ ಸಿಂಗ್​ ಹಾಡು ಇದೀಗ ಟ್ರೆಂಡಿಂಗ್​ನಲ್ಲಿ, ವಾಹ್​ ಎಂದ ನೆಟ್ಟಿಗರು

Bollywood Song: ಸಂಜಯ್ ದತ್, ಮಹಿಮಾ ಚೌಧರಿ ನಟಿಸಿರುವ ಈ ಸಿನೆಮಾದ ಹಾಡು ಇದೀಗ ಟ್ರೆಂಡಿಂಗ್​ನಲ್ಲಿದೆ. ಈ ಹಾಡಿಗೆ ಹೆಜ್ಜೆ ಹಾಕಿದ ಜೋಡಿಯ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಇಷ್ಟು ವರ್ಷದ ಮೇಲೆ ಈ ಹಾಡನ್ನು ಕೇಳಿ ಮತ್ತು ನೀವು ಪ್ರಸ್ತುತಪಡಿಸಿದ ರೀತಿಗೆ ನಾವಂತೂ ಫಿದಾ ಆಗುತ್ತಿದ್ದೇವೆ ಎಂದಿದ್ದಾರೆ ಅನೇಕರು. ನೀವೇನಂತೀರಿ?

Viral Video: ಕುರುಕ್ಷೇತ್ರ; ಸುಖವಿಂದರ್ ಸಿಂಗ್​ ಹಾಡು ಇದೀಗ ಟ್ರೆಂಡಿಂಗ್​ನಲ್ಲಿ, ವಾಹ್​ ಎಂದ ನೆಟ್ಟಿಗರು
ಬಣ್​ಠಣ್​ ಚಲೀ ಬೋಲೋ ಹಾಡಿಗೆ ಜಬರ್​ದಸ್ತ್​ ಹೆಜ್ಜೆ ಹಾಕಿದ ಜೋಡಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 25, 2023 | 10:33 AM

Kurukshetra : 2000ರಲ್ಲಿ ಬಿಡುಗಡೆಯಾದ ಕುರುಕ್ಷೇತ್ರ ಸಿನೆಮಾಕ್ಕೆ ಬಣ್​ ಠಣ್ ಛಲೀ ಬೋಲೋ ಹಾಡನ್ನು ಸುಖವಿಂದರ್ ಸಿಂಗ್​ ಮತ್ತು ಸುನಿಧಿ ಚೌಹಾನ್ (Sukhwindar Singh Sunidhi Chouhan) ಹಾಡಿದ್ದರು. ಈ ಹಾಡೀಗ ಮತ್ತೆ ಟ್ರೆಂಡಿಂಗ್​ನಲ್ಲಿದೆ. ಪ್ರಶಾಂತ ಮಹೇಶ್ವರಿ ಎನ್ನುವವರು ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಇವರ ನೃತ್ಯವನ್ನು ಶ್ಲಾಘಿಸುತ್ತಿದ್ದಾರೆ. ಜೋಡಿಯ ಉಡುಪು ವಿನ್ಯಾಸ, ಬಣ್ಣ, ಪ್ರಸಾಧನ ಮತ್ತು ಹೆಜ್ಜೆಗಳು ತುಂಬಾ ಆಕರ್ಷಕವಾಗಿವೆ ಎನ್ನುತ್ತಿದ್ದಾರೆ. ಮೇ.24ರಂದು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. 4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, 20,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ‘ಕೋಕೋ ಲೀಫಿ ಸ್ಟ್ರಾ’ ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಜೋಡಿ ನಿಜಕ್ಕೂ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ, ಇವರ ನೃತ್ಯದ ಮಟ್ಟುಗಳೂ ವಿಶೇಷವಾಗಿವೆ ಎಂದಿದ್ದಾರೆ ಒಬ್ಬರು. ಅದ್ಭುತವಾದ ಪ್ರದರ್ಶನ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೂ ನಿಮ್ಮ ಬಳಿ ಈಗ ಡ್ಯಾನ್ಸ್​ ಕಲಿಯಬೇಕೆನ್ನಿಸುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು.

ಪ್ರವೀಣ ಶಾಹ್ ನಿರ್ಮಾಣದ ಈ ಚಿತ್ರಕ್ಕೆ ಮಹೇಶ ಮಾಂಜ್ರೇಕರ್ ನಿರ್ದೇಶನವಿದೆ. ಸಂಜಯ್ ದತ್, ಮಹಿಮಾ ಚೌಧರಿ, ಓಮ್ ಪುರಿ, ರಾಖೀ ಸಾವಂತ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಅಮರ್ ಹಲ್ದೀಪುರ್ ಮತ್ತು ಹಿಮೇಶ ರೇಷಮಿಯಾ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್

ಇಷ್ಕ್ ಭೀ ಕ್ಯಾ ಚೀಝ್ ಹೈ, ಚಲ್ ಶಾದೀ ಕರಲೇತೇ, ಆಪ್​ ಕಾ ಆನಾ ದಿಲ್. ಬಣ್​ಥನ್​, ಜನಮ್ ತೇರೇ ಲಿಯೇ ಹಾಡುಗಳನ್ನು ಈ ಚಿತ್ರವು ಹೊಂದಿದೆ. ಇನ್ನು ಬಾಕ್ಸ್​ ಆಫೀಸ್- ರೂ. 16.48 ಕೋಟಿ. ಇಷ್ಟು ವರ್ಷದ ಮೇಲೆ ಈ ಹಾಡು ಇದೀಗ ಟ್ರೆಂಡಿಂಗ್​ನಲ್ಲಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:32 am, Fri, 25 August 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!