Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್

New Born : ಬಿಡೆನು ಈ ಟ್ರೇ ಮಾತ್ರ ಬಿಡೆನು! ಎಂದು ಗಟ್ಟಿಯಾಗಿ ಹಿಡಿದುಕೊಂಡಿದೆ ಈ ಮಗು. ಇದು ಎಲ್ಲಿ ಜನಿಸಿದೆ ಎಂಬಿತ್ಯಾದಿ ವಿವರಗಳು ತಿಳಿದು ಬಂದಿಲ್ಲ. ಆದರೆ ಹುಟ್ಟುತ್ತಲೇ ಮಹಾನ್​ ಶಕ್ತಿಪ್ರದರ್ಶನಕ್ಕಿಳಿದ ಈ ಮಗುವಿನ ವಿಡಿಯೋ ಅನ್ನು ನೆಟ್ಟಿಗರು ಕುತೂಹಲ, ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಬಲಶಾಲಿಯನ್ನು ಭುವಿಗೆ ಕರೆತಂದ ವೈದ್ಯತಂಡ ಅಪರೂಪದ ದೃಶ್ಯ ಕಂಡು ಸಂಭ್ರಮಿಸುತ್ತಿದೆ.

Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್
ಹುಟ್ಟುತ್ತಲೇ ಗಟ್ಟಿಯಾಗಿ ಸ್ಟೀಲ್​ ಟ್ರೇ ಹಿಡಿದುಕೊಂಡಿರುವ ಮಗು!
Follow us
ಶ್ರೀದೇವಿ ಕಳಸದ
|

Updated on:Aug 24, 2023 | 6:13 PM

New Born: ನೋಡು ಪುಟ್ಟಾ, ನೀನು ಈ ಜಗತ್ತಿಗೆ ಬಂದ ಮೇಲೆ ಯಾರ ಮೇಲೂ ಅವಲಂಬಿಸಬಾರದು. ನಿನ್ನ ಮನೋಬಲ ಮತ್ತು ತೋಳ್ಬಲದ ಮೇಲೆಯೇ ನೀನು ಬದುಕಿ ತೋರಿಸಬೇಕು. ನಿನ್ನನ್ನು ನಂಬು ನಿನ್ನ ಮನಸ್ಸನ್ನು ನಂಬು ನಿನ್ನ ಹೃದಯವನ್ನು ನಂಬು… ಈ ಕೂಸು ಹೊಟ್ಟೆಯಲ್ಲಿರುವಾಗ ಇದರ ತಾಯಿ ಇದಕ್ಕೆ ಹೀಗೆ ಉಪದೇಶ ಮಾಡಿದ್ದಳೋ ಏನೋ. ಅಥವಾ ಶಕ್ತಿಮಾನ್​ (Shaktiman) ಛೋಟಾ ಭೀಮ್​, ಕೃಷ್ಣಾ, ಸಿಂಘಮ್ ಕಾರ್ಟೂನ್​ಗಳನ್ನು ನೋಡುತ್ತಿದ್ದಳೋ ಏನೋ. ಅಂತೂ ಇದು ಅಮ್ಮನ ಹೊಟ್ಟೆಯಿಂದ ಹೊರಬಂದು ಕಣ್ಬಿಡುವ, ಅಳುವ ಮೊದಲೇ ಸಾಹಸ ಪ್ರದರ್ಶನಕ್ಕೆ ಇಳಿದುಬಿಟ್ಟಿದೆ. ತನ್ನನ್ನು ಮಲಗಿಸಿದ್ದ ಟ್ರೇಯನ್ನೇ ಎತ್ತಿ ಹಿಡಿದುಕೊಂಡುಬಿಟ್ಟಿದೆ! ಆಹಾ ಕಲಿಯುಗದ ಕಂದಾ… ಇಡೀ ಜಗತ್ತು ನಿನ್ನ ಭವಿಷ್ಯದ ಕನಸು ಕಾಣುತ್ತಿದ್ದಾರೆ, ನಿನ್ನ ತೋಳ್ಬಲವನ್ನು ಕೊಂಡಾಡುತ್ತಿದ್ದಾರೆ. ನಡೀಲಿ ನಡೀಲಿ…

ಇದನ್ನೂ ಓದಿ : ​​Viral Video: ಕಾವಾಲಾ ಕಾವು; ಉಗಾಂಡಾದ ಮಕ್ಕಳ ವಿಡಿಯೋ ಪೋಸ್ಟ್ ಮಾಡಿದ ಗಾಯಕಿ ಶಿಲ್ಪಾ ರಾವ್​

5G Launch Baby ಎಂಬ ಶೀರ್ಷಿಕೆಯಡಿ ಈ ವಿಡಿಯೋ ಅನ್ನು ನಿನ್ನೆ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಸದ್ಯ ಟ್ರೆಂಡಿಂಗ್​ನಲ್ಲಿದೆ. ವಾಟ್ಯಾಪ್​ನಲ್ಲಿಯೂ ಹರಿದಾಡುತ್ತಿದೆ. ಆದರೆ ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ, ಮತ್ತು ಯಾವಾಗ ಎಂಬ ವಿವರಗಳು ತಿಳಿದುಬಂದಿಲ್ಲ. ಆದರೆ ಈ ವಿಡಿಯೋದಲ್ಲಿ ಕೇಳಿಬಂದಿರುವ ಧ್ವನಿಗಳ ಪ್ರಕಾರ ಈ ಮಗು ಉತ್ತರಭಾರತದಲ್ಲಿ ಜನಿಸಿದೆ ಎಂದು ಊಹಿಸಬಹುದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೀವೂ ನೋಡಿಬಿಡಿ ಈ ಮಗುವಿನ ವಿಡಿಯೋ!

ತಾಯಿಯ ಗರ್ಭದಿಂದ ಹೊರಬರುವಾಗ ವೈದ್ಯರು ಮತ್ತು ನರ್ಸಗಳ ಬೆರಳನ್ನು ಹಿಡಿಯುವುದು, ವೈದ್ಯಕೀಯ ಉಪಕರಣಗಳನ್ನು ಹಿಡಿಯುವುದು, ಮತ್ತು ತನ್ನ ಬೆರಳನ್ನು ತಾನೇ ಚೀಪುವುದು… ಇಂಥ ವಿಡಿಯೋ, ಫೋಟೋಗಳನ್ನು ನೋಡಿದ್ದೀರಿ. ಆದರೆ ಹೀಗೆ ಲೋಹದ ಟ್ರೇಯನ್ನೇ ಇಷ್ಟೊತ್ತು ಹೊತ್ತು ಗಟ್ಟಿಯಾಗಿ ಹಿಡಿದ ಮಗುವನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಅಲ್ಲವೆ? ನೋಡಿ ಹಾಗಿದ್ದರೆ, ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಈ ವಿಡಿಯೋ ಮುದ್ದಾಗಿದೆ.

ಇದನ್ನೂ ಓದಿ : Viral Video: ‘ಕಾನ್ಫಿಡೆನ್ಸ್​ ಈಸ್ ಸೆಕ್ಸಿ’; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!

ನೆಟ್ಟಿಗರಂತೂ ಈ ವಿಡಿಯೋ ಅನ್ನು ಭಾರೀ ಕುತೂಹಲದಿಂದ ನೋಡುತ್ತಿದ್ದಾರೆ. ಸಾಹಸಕ್ಷೇತ್ರದಲ್ಲಿ ಈ ಮಗು ಒಳ್ಳೆಯ ಹೆಸರನ್ನು ಮಾಡಲಿ ಎಂದು ಹಾರೈಸುತ್ತಿದ್ದಾರೆ. ಆದರೆ ಅದರ ತಾಯಿ-ತಂದೆ ಮತ್ತು ಮನೆಯವರು, ಅದು ಕಣ್ಣುಬಿಟ್ಟು ಒಮ್ಮೆ ಜೋರಾಗಿ ಅತ್ತುಬಿಡಲಿ, ಆ ಅಳುವನ್ನು ಕೇಳಿದರೆ ಸಾಕು ಎಂಬ ಕುತೂಹಲದಲ್ಲಿ ಹಂಬಲಿಸುತ್ತಿರಬಹುದು.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್​​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:06 pm, Thu, 24 August 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್