Viral Video: ಥೈಲ್ಯಾಂಡ್​; ಅರಮನೆಯಂಥ ಸ್ನಾನಗೃಹ, ಅಚ್ಚರಿಗೆ ಒಳಗಾದ ನೆಟ್ಟಿಗರು

Washroom : ಈ ವ್ಲಾಗರ್​ ಇದೊಂದು ಸ್ನಾನಗೃಹ ಎಂದು ಹೇಳದಿದ್ದರೆ, ಎಲ್ಲರೂ ಇದು ಅರಮನೆಯೆಂದೇ ಭಾವಿಸುತ್ತಿದ್ದರು. ಅರಮನೆಯಂಥ ಭವ್ಯ ಕಟ್ಟಡ, ವಿನ್ಯಾಸವನ್ನು ಇದು ಹೊಂದಿದೆ. ಎದುರಿಗಿರುವ ಉದ್ಯಾನವು ಅದರ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ನೆಟ್ಟಿಗರು ಬೆರಗಿನಿಂದ ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ. ನೋಡಿ ನೀವೂ ಈ ವಿಡಿಯೋ.

Viral Video: ಥೈಲ್ಯಾಂಡ್​; ಅರಮನೆಯಂಥ ಸ್ನಾನಗೃಹ, ಅಚ್ಚರಿಗೆ ಒಳಗಾದ ನೆಟ್ಟಿಗರು
ಥೈಲ್ಯಾಂಡ್​ನಲ್ಲಿರುವ ಸ್ನಾನಗೃಹ!
Follow us
ಶ್ರೀದೇವಿ ಕಳಸದ
|

Updated on:Aug 24, 2023 | 4:37 PM

Thailand: ಅರಮನೆಯಂತೆ ಕಾಣುವ ಸ್ನಾನಗೃಹದ (Washroom) ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಭವ್ಯವಾದ ಮತ್ತು ಅದ್ದೂರಿಯಿಂದ ವಿನ್ಯಾಸ ಮಾಡಲ್ಪಟ್ಟ ಥೈಲ್ಯಾಂಡ್​ನ ಈ ಸ್ನಾನಗೃಹವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಹೀಗೆ ಕಣ್ಣಾರೆ ನೋಡಿದರೂ ಇದನ್ನು ನಂಬಲಾಗುತ್ತಿಲ್ಲ ಎನ್ನುತ್ತಿದ್ದಾರೆ. ಇದರ ಮುಂದೆ ಸುಂದರವಾದ ಉದ್ಯಾನವೂ ಇದೆ. ಇದು ಒಟ್ಟಾರೆಯಾಗಿ ಸೌಂದರ್ಯವನ್ನು ಹೆಚ್ಚಿಸಿದೆ. ಚಿನ್ನದ ಬಣ್ಣವನ್ನು ಲೇಪಿಸಿಕೊಂಡ ಈ ಸ್ನಾನಗೃಹವನ್ನು ನಾನು ವಿಡಿಯೋ ಮಾಡುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ ಎಂದು ವ್ಲಾಗರ್​ ಕೃಷ್ಣಾಂಗಿ ಹೇಳಿದ್ದಾರೆ.

ಇದನ್ನೂ ಓದಿ : Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 8 ರಂದು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ ಇದನ್ನು ಸುಮಾರು 5 ಲಕ್ಷ ಜನರು ವೀಕ್ಷಿಸಿದ್ದಾರೆ. ಸುಮಾರು 62,000 ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ವಾಹ್ ಇದು ತುಂಬಾ ಸುಂದರವಾಗಿದೆ. ಯಾರು ಏನೇ ಹೇಳಲಿ ನನಗಂತೂ ಇಲ್ಲಿ ಹೋಗಿ ಮಲಗಬೇಕು ಎನ್ನಿಸುತ್ತಿದೆ. ಇದು ಪೂರ್ತಿಯಾಗಿ ಅರಮನೆಯೇ ಎಂದಿದ್ದಾರೆ ಒಬ್ಬರು.

ನೋಡಿ ಥೈಲ್ಯಾಂಡ್​ನ ಸ್ನಾನಗೃಹ

ಇದು ಅದ್ಭುತವಾಗಿದೆ, ರಾಜಮನೆತನದ ಸ್ನಾನಗೃಹವಿದು ಎಂದಿದ್ದಾರೆ ಮತ್ತೊಬ್ಬರು. ನಾನಂತೂ ಮಂತ್ರಮುಗ್ಧನಾಗಿದ್ದೇನೆ, ಇಲ್ಲಿಗೆ ಹೋಗಿ ಚೆನ್ನಾಗಿ ಅಲಂಕರಿಸಿಕೊಂಡು ಸಾಕಷ್ಟು ಫೋಟೋಗಳನ್ನು ತೆಗೆಸಿಕೊಳ್ಳಬೇಕು ಎಂದುಕೊಂಡಿದ್ದೇನೆ, ಈ ವಿನ್ಯಾಸವು ತುಂಬಾ ಸೊಗಸಾಗಿದೆ ಎಂದಿದ್ದಾರೆ ಇನ್ನೊಬ್ಬರು. ಬಹುಶಃ ನಾನೇನಾದರೂ ಇಲ್ಲಿಗೆ ಹೋದರೆ, ಸ್ನಾನ ಮಾಡಲು ಮನಸ್ಸೇ ಬರುವುದಿಲ್ಲವೇನೋ, ಅಷ್ಟು ಸುಂದರವಾಗಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಸೆಕೆಂಡ್ ಚಾನ್ಸ್​; ಅಂದು 8 ತಿಂಗಳ ಮಗುವಿನೊಂದಿಗೆ ತವರಿಗೆ ಮರಳಿದ್ದ ಡಾ ಸಬೀಹಾ ಇನಾಮ್ದಾರ್​, ಇಂದು?

ನಾನೂ ಒಂದು ದಿನ ಕನಸಿನಲ್ಲಿ ಇಂಥ ಶೌಚಾಲಯವನ್ನು ಕಟ್ಟಿಸುತ್ತೇನೆ ಅದಕ್ಕಿಂತ ಮೊದಲು ಇಲ್ಲಿಗೆ ಬಂದು ವಿನ್ಯಾಸವನ್ನು ನೋಡಿಕೊಂಡು ಹೋಗುತ್ತೇನೆ ಎಂದಿದ್ದಾರೆ ಒಬ್ಬರು. ಇದು ವಾಷ್​ರೂಮ್​ ಎಂದು ನೀವು ಹೇಳದಿದ್ದರೆ ನಾವು ಇದು ಅರಮನೆ ಎಂತಲೇ ಎಂದುಕೊಳ್ಳುತ್ತಿದ್ದೆವು ಎಂದಿದ್ದಾರೆ ಮತ್ತೊಬ್ಬರು. ಅಂತೂ ಈ ಸ್ನಾನಗೃಹ ಉಪಯೋಗಿಸಲಾದರೂ ಥೈಲ್ಯಾಂಡ್​ ಪ್ರವಾಸ ಕೈಗೊಳ್ಳಬೇಕಾಯಿತು ಎಂದಿದ್ದಾರೆ ಮಗದೊಬ್ಬರು.

ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:36 pm, Thu, 24 August 23