AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಲಂಡನ್; ಎರಡು ತಲೆಯ ಹಾವಿನ ಮರಿಯ ವಿಡಿಯೋ ವೈರಲ್

Two Headed Snake : ಲಂಡನ್​ನಲ್ಲಿ ಅಪರೂಪದ ಎರಡು ತಲೆಯ ಹಾವು ಜನಿಸಿದೆ. ಇದನ್ನು ವೆಸ್ಟರನ್​ ಹಾಗ್ನೋಸ್​ ಎಂಬ ಜಾತಿಗೆ ಸೇರಿದ ಹಾವು ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುದ್ದಾದ ಈ ಹಾವನ್ನು ಸಾಕಬೇಕೂ ಎನ್ನಿಸುತ್ತದೆ ಜೊತೆಗೆ ಭಯವೂ ಆಗುತ್ತದೆ ಎಂದಿದ್ದಾರೆ. ನೀವೇನಂತೀರಿ?

Viral Video: ಲಂಡನ್; ಎರಡು ತಲೆಯ ಹಾವಿನ ಮರಿಯ ವಿಡಿಯೋ ವೈರಲ್
ಲಂಡನ್​ನಲ್ಲಿ ಜನಿಸಿದ ಎರಡು ತಲೆಯ ಹಾವಿನ ಮರಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Aug 24, 2023 | 2:25 PM

Share

Snake: ಭೂಮಂಡಲದ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದು. ಕೌಶಲಯುತ ಬೇಟೆ ಮತ್ತು ನಿಗೂಢತೆಯಿಂದಾಗಿ ಜನರಲ್ಲಿ ತನ್ನ ಬಗ್ಗೆ ವಿಶೇಷ ಆಕರ್ಷಣೆ ಉಳಿಸಿಕೊಂಡಿದೆ. ಭಯಂಕರ ವಿಷಕಾರಿಯಾದ ಈ ಪ್ರಾಣಿಯ ಬಗ್ಗೆ ಗೊತ್ತಿದ್ದೂ ಅನೇಕರು ಇದನ್ನು ಸಾಕಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಎರಡು ತಲೆಯ ಹಾವಿನಮರಿಯನ್ನು (Two Headed Western Hognose) ನೋಡಬಹುದಾಗಿದೆ. ಲಂಡನ್ನಿನ (London) ಎಕ್ಸಿಟರ್ ಎಕ್ಸಾಟಿಕ್ಸ್​ ಎಂಬ ಅಂಗಡಿಯಲ್ಲಿ ಕಳೆದ ತಿಂಗಳು ಇದು ಜನಿಸಿದೆ. ವೆಸ್ಟರ್ನ್​ ಹಾಗ್ನೋಸ್ ಎಂಬ ವಿಶಿಷ್ಟ​ ಜಾತಿಗೆ ಸೇರಿದ ಈ ಮರಿಯನ್ನು ತನ್ನ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಈ ಅಂಗಡಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ : Viral Video: ಸೆಕೆಂಡ್ ಚಾನ್ಸ್​; ಅಂದು 8 ತಿಂಗಳ ಮಗುವಿನೊಂದಿಗೆ ತವರಿಗೆ ಮರಳಿದ್ದ ಡಾ ಸಬೀಹಾ ಇನಾಮ್ದಾರ್​, ಇಂದು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ವೆಸ್ಟರ್ನ್  ಹಾಗ್ನೋಸ್​ ಹಾವು ಇದೀಗ ನಮ್ಮ ಕುಟುಂಬದ ಸದಸ್ಯ. ಯಾವುದೇ ಬಾಹ್ಯ ಸಹಾಯವಿಲ್ಲದೆಯೇ ತನ್ನಷ್ಟಕ್ಕೆ ತಾನೇ ಮೊಟ್ಟೆಯೊಡೆದು ಹೊರಗೆ ಬಂದಿದೆ. ಬಾಲದ ತುದಿಯಲ್ಲಿ ಸುರುಳಿಯಂತೆ ಕಂಡರೂ ಆರೋಗ್ಯಕರವಾಗಿದೆ. ಬಲಭಾಗದಲ್ಲಿರುವ ತಲೆಯು ವಾಸನೆಗಳನ್ನು ಗ್ರಹಿಸುವಲ್ಲಿ ಚುರುಕಾಗಿದೆ. ಎಡಭಾಗದಲ್ಲಿರುವ ತಲೆಯು ಆಹಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದೆ. ಆದರೆ ಇದರ ಗಂಟಲು ಚಿಕ್ಕದಾಗಿದ್ದು ತಿನ್ನುವಾಗ ಕಷ್ಟಪಡುತ್ತಿದೆ. ಆದರೆ ಬೆಳೆದಂತೆ ಸುಧಾರಿಸುತ್ತದೆ ಎಂದುಕೊಂಡಿದ್ದೇವೆ.’ ಎಂಬ ಒಕ್ಕಣೆ ಈ ಪೋಸ್ಟ್​ಗಿದೆ.

ಎರಡು ತಲೆಯ ಹಾವಿನ ಮರಿಯ ವಿಡಿಯೋ

ಆ. 9ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಬಹಳ ಮುದ್ದಾಗಿದೆ ಆದರೆ ಅಷ್ಟೇ ಭಯವೂ ಬರುವಂತಿದೆ ಎಂದಿದ್ಧಾರೆ ಒಬ್ಬರು. ಹ್ಯಾರಿಪಾಟರ್ ಅಪ್ಪಟ​ ಅಭಿಮಾನಿಯಾಗಿರುವ ನನ್ನ ಮಗಳು ಇದಕ್ಕೆ ಕ್ವಿರೆಲ್ (ಎರಡು ಮುಖ) ಎಂದು ಹೆಸರಿಡಬೇಕು ಎಂದಿದ್ದಾಳೆ ಎಂದಿದ್ದಾರೆ ಮತ್ತೊಬ್ಬರು. ನನಗಿದನ್ನು ಸಾಕಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Brain Teaser: ಈ ಸಮೀಕರಣ ಸರಿಗೊಳಿಸಲು ಒಂದು ಬೆಂಕಿಕಡ್ಡಿ ಎತ್ತಿಡಬೇಕು, ಪ್ರಯತ್ನಿಸುವಿರಾ?

ಇತ್ತೀಚೆಗಷ್ಟೇ ಹೂಕೋಸು, ಬ್ರೊಕೋಲಿಯಲ್ಲಿ ಅಡಗಿದ್ದ ಹಾವಿನ ಮರಿಗಳ ವಿಡಿಯೋ ವೈರಲ್ ಆಗಿದ್ದವು. ಈ ಹಾವುಗಳನ್ನು ನೋಡಿದಾಗ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿದ್ದವು. ಇದೀಗ ಎರಡು ತಲೆಯ ಈ ಹಾವಿನಮರಿಯ ವಿಡಿಯೋ ನೋಡಿದಾಗ ಆ ಹಾವಿನಮರಿಗಳೆರಡೂ ನಿಮ್ಮ ನೆನಪಿಗೆ ಬಂದಿರಬಹುದು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.