AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ

Rescue : ನಾಯಿಯನ್ನು ಪ್ರಾಣಿಯಂತೆ ನೋಡದೆ ಮನೆಯ ಸದಸ್ಯರಂತೆ ನೋಡಿದಾಗ ಮಾತ್ರ ಇಂಥ ಧೈರ್ಯ ಮತ್ತು ಅಪಾಯಕ್ಕೆ ಒಡ್ಡಿಕೊಳ್ಳುವ ಮನಸ್ಸಾಗುತ್ತದೆ. ಈ ವಿಡಿಯೋದಲ್ಲಿ ಅಗ್ನಿಶಾಮಕದಳದವರು ನಿಂತಿರುವ ರೀತಿ ನೋಡಿದರೆ ಯಾಕೋ ವಿಚಿತ್ರವೆನ್ನಿಸುತ್ತದೆ. ಆದರೆ ತನ್ನ ನಾಯಿಯನ್ನು ಈತ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನುಗ್ಗಿ ರಕ್ಷಿಸಿದ ರೀತಿ ಮಾತ್ರ ಭಲೇ!

Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ
ಬೆಂಕಿ ಬಿದ್ದ ಮನೆಯಿಂದ ತನ್ನ ನಾಯಿಯನ್ನು ರಕ್ಷಿಸಿದ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on: Aug 24, 2023 | 3:32 PM

Dog Lover : ಆಕಸ್ಮಿಕವಾಗಿ ಈ ಮನೆಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ದಳದವರು ಇಲ್ಲಿದ್ದಾರೆ. ಇದ್ದಕ್ಕಿದ್ದಂತೆ ಅಲ್ಲಿಗೆ ಓಡಿಬಂದ ವ್ಯಕ್ತಿಯೊಬ್ಬ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನುಗ್ಗಿ ಸಾಕುನಾಯಿಯನ್ನು ಹೊರಗೆ ಕರೆದುಕೊಂಡು ಬರುತ್ತಾನೆ. ರಕ್ಷಣೆ ಕಾರ್ಯಾಚರಣೆಯಲ್ಲಿ ಅವನ ಕೈಗಳಿಗೆ ಸುಟ್ಟ ಗಾಯಗಳಾದರೂ ಅವ ಲೆಕ್ಕಿಸುವುದಿಲ್ಲ. ಹೀಗೆ ಓಡಿಬಂದು ರಕ್ಷಿಸಿದ್ದು ತನ್ನ ನಾಯಿಯನ್ನೇ. ಈ ವಿಡಿಯೋ ಇದೀಗ ವೈರಲ್ (Viral Video) ಆಗುತ್ತಿದ್ದು ಸಾಮಾಜಿಕ ಜಾಲತಾಣಿಗರು ಇವನ ಪ್ರಾಣಿಪ್ರೇಮ, ಧೈರ್ಯ ಮತ್ತು ಪ್ರಯತ್ನವನ್ನು ಶ್ಲಾಘಿಸುತ್ತಿದ್ದಾರೆ. ಜೊತೆಗೆ ಅಗ್ನಿಶಾಮಕ ದಳದವರು ಯಾಕೆ ಹೀಗೆ ಸುಮ್ಮನೇ ನಿಂತಿದ್ದಾರೆ!? ಎಂದೂ ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತನ್ನ ಜೀವವನ್ನು ಲೆಕ್ಕಿಸದೇ ಸುರಕ್ಷಾ ವಿಧಾನಗಳನ್ನೂ ಅನುಸರಿಸದೇ ಅಷ್ಟು ದೊಡ್ಡ ಜ್ವಾಲೆಗಳ ಮಧ್ಯೆಯೇ ಮನೆಯೊಳಗೆ ನುಗ್ಗುವ ಈ ವ್ಯಕ್ತಿಯನ್ನು ನೋಡಿದಾಗ ಭಯವೂ ಅಚ್ಚರಿಗೂ ಒಮ್ಮೆಲೇ ಆಗುತ್ತದೆ. ಯಾವುದೋ ಸಿನೆಮಾದ ದೃಶ್ಯವಲ್ಲ ತಾನೆ? ಎಂದು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ. ಅಂತೂ ಮನೆಯೊಳಗಿನಿಂದ ನಾಯಿಯನ್ನು ಹೊರಗೆ ಓಡಿಸಿಕೊಂಡು ಬರುತ್ತಾನೆ.

ತನ್ನ ನಾಯಿಯನ್ನು ರಕ್ಷಿಸಿದ ಈ ವ್ಯಕ್ತಿ

ನಾಯಿಗಳು ಮತ್ತು ಮನುಷ್ಯರ ನಡುವಿನ ಈ ಅನುಬಂಧವನ್ನು ವರ್ಣಿಸುವುದು ಕಷ್ಟ. ಅದೇನಿದ್ದರೂ ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕು. ಕೆಲವರು ಮನೆ ಕಾಯಲು ನಾಯಿಯನ್ನು ಸಾಕುತ್ತಾರೆ. ಕೆಲವರು ತಮ್ಮೊಂದಿಗೆ ಒಂದು ಪ್ರಾಣಿ ಇರಲಿ ಎಂದು ಸಾಕುತ್ತಾರೆ. ಇನ್ನೂ ಕೆಲವರು ಮಕ್ಕಳಂತೆ ನಾಯಿಯನ್ನು ಸಾಕುತ್ತಾರೆ. ಮಕ್ಕಳಂತೆ ನೋಡಿಕೊಂಡವರಿಗೆ ಮಾತ್ರ ತಮ್ಮ ಪ್ರಾಣದ ಹಂಗು ತೊರೆದು ಹೀಗೆ ಕಾಪಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಅಗ್ನಿಶಾಮಕ ದಳದವರು ಎಷ್ಟೊಂದು ಆರಾಮಾಗಿ ನಿಂತಿದ್ದಾರಲ್ಲ? ಗಂಟೆ ಲೆಕ್ಕದಲ್ಲಿ ಅವರಿಗೆ ಹಣ ಪಾವತಿ ಮಾಡಲಾಗಿದೆಯೇ ಏನು ಕಥೆ? ಎಂದಿದ್ದಾರೆ ಒಬ್ಬರು. ಅಗ್ನಿಶಾಮಕದಳದವನರನು ನಾನೆಂದೂ ಕ್ಷಮಿಸಲಾರೆ, ಸದ್ಯ ಮನೆಯ ಮಾಲಿಕ ತನ್ನ ನಾಯಿಯನ್ನು ಕಾಪಾಡಿದನಲ್ಲ ಸಾಕು ಎಂದು ಇನ್ನೊಬ್ಬರು. ನಾಯಿ ಬಿಟ್ಟರೆ ನನಗೇ ಬದುಕೇ ಇಲ್ಲ ಎಂದು ಪ್ರೀತಿಸುವವರು ಮಾತ್ರ ಇಂಥ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ