Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ
Giraffe : ಅಮೆರಿಕದ ಬ್ರೈಟ್ ಮೃಗಾಲಯದಲ್ಲಿ ಜು. 31ರಂದು ಜನಿಸಿದ ಈ ಅಪರೂಪದ ಜಿರಾಫೆ ಇದೀಗ ಸಾರ್ವಜನಿಕರ ವೀಕ್ಷಣೆಗೆ ತೆರವುಗೊಂಡಿದೆ. ಈ ಮರಿಗೆ ಹೆಸರನ್ನು ಸೂಚಿಸಲು ಮೃಗಾಲಯವು ಸಾರ್ವಜನಿಕರಲ್ಲಿ ಕೇಳಿಕೊಂಡಿತ್ತು. ಅಂತಿಮಪಟ್ಟಿಯಲ್ಲಿ ನಾಲ್ಕು ಹೆಸರುಗಳಿದ್ದು, ಇವುಗಳಲ್ಲಿ ಯಾವುದನ್ನು ಅಂತಿಮವಾಗಿ ಆಯ್ಕೆ ಮಾಡಬಹುದು ಎನ್ನುವ ಕುತೂಹಲ ಉಂಟಾಗಿದೆ.
America : ಅಮೆರಿಕದ ಬ್ರೈಟ್ಸ್ ಮೃಗಾಲಯದಲ್ಲಿ ಇತ್ತೀಚೆಗೆ ಜನಿಸಿದ ಅಪರೂಪದ ಪಟ್ಟೆರಹಿತ ಜಿರಾಫೆಯನ್ನು ಇದೀಗ ಸಾರ್ವಜನಿಕರು ನೋಡಬಹುದಾಗಿದೆ. ಸದ್ಯ ತನ್ನ ತಾಯಿಯ ಪೋಷಣೆಯಲ್ಲಿರುವ ಈ ಜಿರಾಫೆಯು (Giraffe) ಜು. 31ರಂದು ಜನಿಸಿತ್ತು. ಸದ್ಯ 6 ಅಡಿ ಎತ್ತರವನ್ನು ಇದು ಹೊಂದಿದೆ. ಇದು ಜನಿಸಿದ ದಿನದಿಂದಲೂ ವಿವಿದ ದೇಶಗಳಲ್ಲಿರುವ ಮೃಗಾಲಯದ ಜಿರಾಫೆ ತಜ್ಞರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಸಲಹೆ ಮಾರ್ಗದರ್ಶನದಲ್ಲಿ ಪೋಷಿಲಾಗುತ್ತಿದೆ ಎಂದು ಮೃಗಾಲಯ ಸಿಬ್ಬಂದಿಯು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದೆ. ನೆಟ್ಟಿನಲ್ಲಿ ಈ ಮರಿಯ ವಿಡಿಯೋ, ಫೋಟೋ ನೋಡಿದ ಮಂದಿ ಇಂಥ ಮರಿಯನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ಕೋಳಿಮೊಟ್ಟೆಗಳಿಗೆ ಕಾವು ಕೊಟ್ಟದ್ದಲ್ಲದೇ ಮರಿಗಳನ್ನೂ ಪೋಷಿಸುತ್ತಿರುವ ಬೆಕ್ಕಮ್ಮ
‘ಜಿರಾಫೆ ಕನ್ಸರ್ವೇಶನ್ ಫೌಂಡೇಶನ್ (GCF) ಪ್ರಕಾರ, ಈ ಜಿರಾಫೆಯು ನಾಲ್ಕು ವಿಶಿಷ್ಟ ಜಾತಿಗಳಲ್ಲಿ ಒಂದಾಗಿದೆ. ಇದನ್ನು ರಕ್ಷಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ. 2018ರಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಈ ಮರಿಯನ್ನು ಅಳಿವಿನಂಚಿನಲ್ಲಿರುವ ತಳಿ ಎಂದು ಗುರುತಿಸಿದೆ. ಕಳೆದ ಮೂರು ದಶಕಗಳಲ್ಲಿ ಶೇ 40 ಜಿರಾಫೆಗಳು ಕಾಡಿನಲ್ಲಿ ಕಾಣೆಯಾಗಿವೆ. ಹಾಗಾಗಿ ಜಿರಾಫೆಗಳನ್ನು ರಕ್ಷಿಸುವ ತುರ್ತು ಇದೆ’ ಎಂದು ಮೃಗಾಲಯದ ಸಂಸ್ಥಾಪಕ ಟೋನಿ ಬ್ರೈಟ್ ಹೇಳಿದ್ದಾರೆ.
ಈ ಜಿರಾಫೆಮರಿ ಅಮ್ಮನೊಂದಿಗೆ ಒಡನಾಡುತ್ತಿರುವ ವಿಡಿಯೋ ನೋಡಿ
ಬ್ರೈಟ್ಸ್ ಮೃಗಾಲಯವು ಜಿರಾಫೆಗೆ ಮುದ್ದಾದ ಹೆಸರನ್ನು ಹುಡುಕುತ್ತಿದೆ. ತನ್ನ ಫೇಸ್ಬುಕ್ ಪುಟದಲ್ಲಿ ಹೆಸರುಗಳನ್ನು ಸೂಚಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಈತನಕ ಶಾರ್ಟ್ಲಿಸ್ಟ್ ಮಾಡಿದ ಪಟ್ಟಿಯಲ್ಲಿ ಕಿಪೆಕೀ, ಫಿರ್ಯಾಲಿ, ಶಾಕಿರಿ ಮತ್ತು ಜಮೆಲ್ಲಾ ಎಂಬ ಹೆಸರುಗಳು ಸೇರಿವೆ.
ಇದನ್ನೂ ಓದಿ : Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಸಿ ಸವಿದ ಗಗನಯಾತ್ರಿ
ತುಂಬಾ ಮುದ್ದಾಗಿದೆ, ಇಂಥ ಮರಿಯನ್ನು ಈತನಕ ನೋಡಿದ್ದೇ ಇಲ್ಲ, ನಾನು ಆದಷ್ಟು ಬೇಗ ಈ ಮೃಗಾಲಯಕ್ಕೆ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದು ಒಬ್ಬರು ಹೇಳಿದ್ದಾರೆ. ಇನ್ನೂ ಒಮದು ತಿಂಗಳಾಗಿಲ್ಲ, ಈಗಲೇ 6 ಅಡಿ! ಆಕರ್ಷಕವಾಗಿ ಕಾಣುತ್ತಿದೆ ಈ ಮರಿ ಎಂದಿದ್ದಾರೆ ಮತ್ತೊಬ್ಬರು. ಅಮ್ಮನೊಂದಿಗೆ ಎಷ್ಟು ನಿರುಮ್ಮಳವಾಗಿ ಆಡಿಕೊಂಡಿದೆ ನೋಡಿ ಇದು ಎಂದು ಮಗದೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ