Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?

Flat Holm Island : ಕಾರ್ಡಿಫ್ ಹಾರ್ಬರ್ ಅಥಾರಿಟಿಯು ಸೈಮನ್​ ಪಾರ್ಕರ್ ಇವರಿಗೆ ಇಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತು. ತಮ್ಮ ಆಪ್ತಸ್ನೇಹಿತರ ಅಗಲಿಕೆಯಿಂದಾಗಿ ಕುಗ್ಗಿಹೋದ ಸಂದರ್ಭದಲ್ಲಿ ಇಲ್ಲಿ ವಾಸಿಸುವ ನಿರ್ಧಾರವನ್ನು ತೆಗೆದುಕೊಂಡರು. ಇಡೀ ದಿನ ಇವರು ದ್ವೀಪದಲ್ಲಿ ಇವರು ಹೇಗೆ ಸಮಯ ಕಳೆಯುತ್ತಾರೆ? ಗೊತ್ತಾದರೆ ನಿಮಗೆ ಅಚ್ಚರಿಯಾಗುತ್ತದೆ.

Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?
ಲಂಡನ್ ಬಳಿ ಇರುವ ಫ್ಲ್ಯಾಟ್ ಹೋಮ್​ ದ್ವೀಪದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಸೈಮನ್ ಪಾರ್ಕರ್
Follow us
|

Updated on:Aug 22, 2023 | 5:48 PM

London : 38 ವರ್ಷದ ಸೈಮನ್ ಪಾರ್ಕರ್ (Simon Parker) ಲಂಡನ್ನಿನ ವೆಲ್ಷ್ ಕರಾವಳಿಯಲ್ಲಿರುವ ಫ್ಲ್ಯಾಟ್​ ಹೋಮ್​ ದ್ವೀಪದ (Flat Holm Island) ವಾರ್ಡನ್ ಎನ್ನಿಸಿಕೊಂಡಿದ್ದಾರೆ. ಇಷ್ಟೆ ಅಲ್ಲ, ಇದೇ ದ್ವೀಪದಲ್ಲಿರುವ ಏಕೈಕ ಪಬ್​ನ ಮಾಲಿಕರೂ ಕೂಡ. ಎಲ್ಲಕ್ಕಿಂಥ ಮುಖ್ಯವಾಗಿ ಇವರು ಈ ದ್ವೀಪದಲ್ಲಿ ವಾಸಿಸುವ ಏಕೈಕ ಮನುಷ್ಯಜೀವಿ. ಅಲ್ಲದೇ ಇವರು ವಾಸಿಸುವ ಈ ದ್ವೀಪದಲ್ಲಿ ವಿದ್ಯುತ್ ಕೂಡ ಇಲ್ಲ. ಇವರು ಇಲ್ಲಿದ್ದುಕೊಂಡು ದಿನವಿಡೀ ಏನು ಮಾಡುತ್ತಾರೆ, ಹೇಗೆ ಬದುಕುತ್ತಾರೆ, ಅವರಿಗೆ ಬೇಸರವಾಗುವುದಿಲ್ಲವೆ? ಎಂಬ ಪ್ರಶ್ನೆಗಳು ಯಾರಲ್ಲಿಯೂ ಹುಟ್ಟಿಕೊಳ್ಳುತ್ತವೆ. ಇವರೊಬ್ಬ ರಾಯಲ್​ ಏರ್​ಫೋರ್ಸ್​ನ ಮಾಜಿ ಏರ್​ಕ್ರಾಫ್ಟ್​ ಎಂಜಿನಿಯರ್​. ಬಿಬಿಸಿ ಇವರೊಂದಿಗೆ ನಡೆಸಿದ ಸಂದರ್ಶನದ ಆಧಾರದ ಮೇಲೆ ಇವರ ಕಥೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; ಸೀರೆಯುಟ್ಟು ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ ಮತ್ತು ಸೃಷ್ಟಿ ಶುಕ್ಲಾ

ಕಾರ್ಡಿಫ್ ಹಾರ್ಬರ್ ಅಥಾರಿಟಿ ಸೈಮನ್​ ಪಾರ್ಕರ್ ಅವರಿಗೆ ಇಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತು. ತಮ್ಮ ಆಪ್ತ ಸ್ನೇಹಿತರ ಅಗಲಿಕೆಯಿಂದಾಗಿ ಅವರು ಬಹಳ ಕುಗ್ಗಿಹೋದ ಸಂದರ್ಭದಲ್ಲಿ ಅವರು ಇಲ್ಲಿ ವಾಸಿಸುವ ನಿರ್ಧಾರವನ್ನು ತೆಗೆದುಕೊಂಡರು. ವಿದ್ಯುತ್ ಇಲ್ಲದ ದ್ವೀಪದಲ್ಲಿ ಅವರು ವಾಸಿಸುವ ಸಾಹಸಕ್ಕೆ ತೆರೆದುಕೊಂಡರು. ‘ಇಲ್ಲಿಗೆ ಬಂದಮೇಲೆ ಜೀವನವು ಸುಂದರವೂ ಶಾಂತರೀತಿಯಿಂದಲೂ ಕೂಡಿದೆ. ಆಹಾರ ಬೇಕಾದರೆ ಅಂಗಡಿಗೆ ಹೋಗುತ್ತೀರಿ, ನೀರು ಬೇಕಾದರೆ ನಲ್ಲಿ ತಿರುಗಿಸುತ್ತೀರಿ. ಆದರೆ ಇಲ್ಲಿ ಹಾಗಿಲ್ಲ ಎಲ್ಲದಕ್ಕೂ ಅದರದೇ ಆದ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ನಾನು ಜಗತ್ತನ್ನು ಹೇಗೆ ನೋಡುತ್ತೇನೆ ಎನ್ನುವುದಕ್ಕೆ ಫ್ಲ್ಯಾಟ್​ ಹೋಮ್​ ಸೂಕ್ಷ್ಮದರ್ಶಕದಂತೆ ಸಹಾಯ ಮಾಡುತ್ತದೆ’ ಎಂದಿದ್ದಾರೆ.

Simon Parker is the warden of the island Flat Holm He lives alone read viral story

ಸೈಮನ್ ಪಾರ್ಕರ್​ಗೆ ಪಕ್ಷಿಗಳೇ ಗೆಳೆಯರು

ಇಡೀ ದಿನ ಇವರು ದ್ವೀಪದಲ್ಲಿ ಸಮಯವನ್ನು ಹೇಗೆ ಕಳೆಯುತ್ತಾರೆ? ಗೊತ್ತಾದರೆ ನಿಮಗೆ ಅಚ್ಚರಿಯಾಗುತ್ತದೆ. ದಿನವೂ ಅವರು ದ್ವೀಪದ ಸಂರಕ್ಷಣೆಯ ಕೆಲಸದಲ್ಲಿ ಮುಳುಗಿರುತ್ತಾರೆ. ಬೇಸರವಾದಾಗ ಪಕ್ಷಿವೀಕ್ಷಣೆಯಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ವಿವಿಧ ಋತುಮಾನಗಳಲ್ಲಿ ದ್ವೀಪದಲ್ಲಿ ವಾಸಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಸಾಂದರ್ಭಿಕವಾಗಿ ಪ್ರವಾಸಿಗರಿಗೆ ಮಾರ್ಗದರ್ಶಿಯೂ ಆಗುತ್ತಾರೆ! ‘ನಾನಿಲ್ಲಿ ತುಂಬಾ ಆರಾಮಾಗಿದ್ದೇನೆ ಎಂದು ಜನ ಅಂದುಕೊಳ್ಳಬಹುದು. ಆದರೆ ಕೆಲ ಆತಂಕಗಳ ಮಧ್ಯೆ ನನ್ನದೇ ಆದ ರೀತಿಯಲ್ಲಿ ಬದುಕುತ್ತಿದ್ದೇನೆ. ಆದರೆ ಸಮಾಧಾನವೂ ಇದೆ, ಏಕೆಂದರೆ ನಾನು ಸವಾಲುಗಳನ್ನು ಪ್ರೀತಿಸುತ್ತೇನೆ.’

ಫ್ಲ್ಯಾಟ್​ ಹೋಮ್ ದ್ವೀಪಕ್ಕೆ​ ಪ್ರವಾಸಿಗರೊಬ್ಬರು ಭೇಟಿ ನೀಡಿದಾಗಿನ ವಿಡಿಯೋ

‘ನನ್ನ ಒಂಟಿತನಕ್ಕೆ ಇಲ್ಲಿಯ ಪಕ್ಷಿಗಳು ಸಾಥ್​ ಕೊಡುತ್ತವೆ ಮತ್ತು ಬದುಕಲು ಉತ್ತೇಜನವನ್ನು ತುಂಬುತ್ತವೆ. ನನ್ನ ಮನಸ್ಸು ಸರಿ ಹೋಗಲು ಮತ್ತಷ್ಟು ನಾನು ಇನ್ನೂ ಪ್ರಕೃತಿಯಲ್ಲಿ ಕಳೆದುಹೋಗಬೇಕು. ನಾನು ಯಾವಾಗಲೂ ದೂರದ ಸ್ಥಳಗಳಲ್ಲಿ ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತೇನೆ. ಇದೇನು ಅಂಥಾ ದೂರವಲ್ಲ, ಕಾರ್ಡಿಫ್​ನಿಂದ ಕೇವಲ ನಾಲ್ಕು ಮೈಲಿಗಳ ಅಂತರದಲ್ಲಿದ್ದೇನೆ. ಕೆಲವೊಮ್ಮೆ ನನಗಿದು ಮಿಲಿಯನ್​ ಮೈಲಿ ದೂರದಂತೆ ಅನ್ನಿಸಿದ್ದೂ ಉಂಟು. ಇಲ್ಲಿಗೆ ಭೇಟಿ ನೀಡುವ ಜನರು ಮತ್ತವರ ಕಥೆಗಳನ್ನು ಕೇಳಲು ಉತ್ಸುಕನಾಗಿರುತ್ತೇನೆ. ಇದೆಲ್ಲದರೊಂದಿಗೆ ವನ್ಯಜೀವಿಗಳು, ಬದಲಾಗುವ ಋತುಮಾನಗಳು ಬದುಕನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಬದುಕಿನ ವೇಗವನ್ನು ನಿಧಾನಗೊಳಿಸುತ್ತವೆ’ ಎಂದು ಪಾರ್ಕರ್ ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:47 pm, Tue, 22 August 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ