AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಡೈನೋಸಾರ್ ನೋಡಿ ಮಗು ಹೆದರಿದ್ದಕ್ಕೆ ಅರ್ಥವಿದೆ, ಆದರೆ ಅಮ್ಮ?

Scary Video : ಇಂಥ ಯಾವುದೇ ಜಾಗಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಪೋಷಕರು ಅವರಿಗೆ ಸ್ಥೂಲವಾಗಿ ಒಂದು ಚಿತ್ರಣವನ್ನು ಕಟ್ಟಿಕೊಡಬೇಕು. ಇಲ್ಲವಾದರೆ ಈಗ ವಿಡಿಯೋದಲ್ಲಿ ಆದ ಆಘಾತವೇ ಸಂಭವಿಸುತ್ತದೆ. ಈ ಮಗು ಜೀವನಪೂರ್ತಿ ಆಘಾತದಲ್ಲೇ ಇರುತ್ತದೆ ಎಂದು ಕೆಲವರು. ಹಾಗೇನಿಲ್ಲ ದೊಡ್ಡದಾದ ಮೇಲೆ ಈ ವಿಡಿಯೋ ನೋಡಿ ನಗುತ್ತದೆ ಎಂದು ಕೆಲವರು.

Viral Video: ಈ ಡೈನೋಸಾರ್ ನೋಡಿ ಮಗು ಹೆದರಿದ್ದಕ್ಕೆ ಅರ್ಥವಿದೆ, ಆದರೆ ಅಮ್ಮ?
ನಕಲಿ ಡೈನೋಸಾರ್​​ ನೋಡಿ ಆಘಾತಕ್ಕೆ ಒಳಗಾದ ಅಮ್ಮ ಮಗಳು
Follow us
ಶ್ರೀದೇವಿ ಕಳಸದ
|

Updated on: Aug 23, 2023 | 10:44 AM

Dinosaurs: ಈ ಘಟನೆಯಿಂದ ಮಗು (kid) ಶಾಶ್ವತವಾಗಿ ಆಘಾತಕ್ಕೆ ಒಳಗಾಗುತ್ತದೆ ಎಂದು ಕೆಲವರು. ನಾಳೆ ಅದು ಬೆಳೆದು ದೊಡ್ಡದಾದ ಮೇಲೆ ನಗುತ್ತದೆ ಎಂದು ಕೆಲವರು. ಇದು ನಿಜವಾದ ಡೈನೋಸರ್? ಎಂದು ಗೊಂದಲಕ್ಕೆ ಬಿದ್ದು ಭಯಪಡುವುದು ಮಗುವಿಗೆ ಸಹಜ. ಆದರೆ ಅಮ್ಮ? ಆಕೆ ಮಗುವಿನ ಮೇಲೆಯೇ ಬಿದ್ದಿದ್ದಾರೆ. ಅರೆ, ಆ ಡೈನೋಸಾರ್ ಪಾತ್ರಧಾರಿ ಸ್ವಲ್ಪ ಯೋಚಿಸಬೇಕಿತ್ತಲ್ಲವಾ, ಅವರಿಬ್ಬರೂ ಹೆದರಿ ಚೀರಾಡುತ್ತಿದ್ದಾಗ ಹಿಂದೆ ಸರಿದು ಸುಮ್ಮನಿರಬೇಕಿತ್ತು ಎಂದಿದ್ದಾರೆ ನೆಟ್ಟಿಗರು. ಈ ವಿಡಿಯೋ ಅನ್ನು ಜು. 18ರಂದು ಪೋಸ್ಟ್ ಮಾಡಲಾಗಿದ್ದು, ಸುಮಾರು 3.4 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ತೋಳ್ಬಲದ ಹಕೀಕತ್ತು; ಮುಂಬೈನಲ್ಲಿ ಬಹುಮಹಡಿಯಿಂದ ಪೀಠೋಪಕರಣ ಇಳಿಸುವ ದೃಶ್ಯ ವೈರಲ್ ಆಗಿದ್ದೇಕೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಕಲಿ ಡೈನೋಸಾರ್​​ ನೋಡಿಯೇ ಹೀಗೆ ಹೆದರಿದರೆ ಗತಿ ಏನು? ತಾಯಿಗೆ ವಿವೇಚನೆ ಬೇಡವೆ, ಡೈನೋಸಾರ್ ನಾಶವಾಗಿ ಎಷ್ಟು ವರ್ಷಗಳಾದವು? ಎಂದು ಕೇಳಿದ್ದಾರೆ ಒಬ್ಬರು. ತನ್ನನ್ನು ತಾನು ಸಂಭಾಳಿಸಿಕೊಳ್ಳಲೂ ಆ ತಾಯಿಗೆ ಕಷ್ಟವಾಗಿದೆ ನಿಜ. ಆದರೆ ಮಗು, ಡೈನೋಸಾರ್ ನೋಡಿ ಆಘಾತಕ್ಕೆ ಒಳಗಾಗಿದ್ದು ಒಂದೆಡೆ ದಪ್ಪದೇಹದ ಅಮ್ಮ ತನ್ನ ಮೇಲೆ ಬಿದ್ದಿದ್ದರೆ! …ನಿಜಕ್ಕೂ ಅವರಿಬ್ಬರೂ ಬಿದ್ದಿದ್ದನ್ನು ನೋಡಿಯೇ ಭಯವಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ನಕಲಿ ಡೈನೋಸಾರ್​ಗೆ ಹೆದರಿ ಬಿದ್ದ ಅಮ್ಮ ಮಗಳು

ಮಕ್ಕಳನ್ನು ಇಂಥ ಜಾಗಗಳಿಗೆ ಕರೆದುಕೊಂಡು ಹೋಗುವಾಗ ಪೋಷಕರು ಮೊದಲೇ ಒಂದು ಚಿತ್ರಣವನ್ನು ನೀಡಿರಬೇಕು. ಬಹುಶಃ ತಾಯಿ ಮಗುವಿಗೆ ಈ ಬಗ್ಗೆ ಹೇಳಿರಲಿಲ್ಲವೇನೋ ಅಥವಾ ಆಕೆಗೇ ಇದರ ಬಗ್ಗೆ ಅರಿವಿರಲಿಲ್ಲವೇನೋ. ಅಂತೂ ಮಗು ಬೆಚ್ಚಿಬಿದ್ದು ಚೀರಾಡಿ ಅತ್ತಿದೆ. ವಿಡಿಯೋದಲ್ಲಿ ಮಗುವಿನ ಮೇಲೆ ಬಿದ್ದಿದ್ದಾಳೆ ಎನ್ನಿಸುತ್ತದೆ, ಸದ್ಯ ಆಕೆ ಬಿದ್ದಿಲ್ಲ!

ಇದನ್ನೂ ಓದಿ : Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?

ಅಮ್ಮ ಹೆದರದಿದ್ದರೆ ಮಗು ಹೀಗೆ ಬೀಳುತ್ತಿರಲಿಲ್ಲ, ಪೋಷಕರು ಬಹಳ ಗಟ್ಟಿಯಾಗಿರಬೇಕು, ಮನೋಸ್ಥೈರ್ಯ ಉಳ್ಳವರಾಗಬೇಕು. ನಿಜವಾಗಲೂ ಭಯಾನಕ ಅಥವಾ ಘೋರ ಪ್ರಸಂಗಗಗಳು ಬದುಕಿನಲ್ಲಿ ಎದುರಾದರೆ? ಆಗ ಪೋಷಕರೇ ಆಘಾತಕ್ಕೆ ಒಳಗಾದರೆ ಮಕ್ಕಳನ್ನು ಸಂಭಾಳಿಸುವವರು ಯಾರು? ಪುಟ್ಟ ಮೆದುಳು, ಪುಟ್ಟ ಹೃದಯ, ಬಟ್ಟಲುಗಣ್ಣುಗಳಲ್ಲಿ ಭಯ ಹೆಪ್ಪುಗಟ್ಟಬಾರದಲ್ಲ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು