AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾವಾಲಾ ಕಾವು; ಸೀರೆಯುಟ್ಟು ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ ಮತ್ತು ಸೃಷ್ಟಿ ಶುಕ್ಲಾ

Jailer : ಕನ್ನಡದ ಅದ್ವಿತಿ ಶೆಟ್ಟಿ, ಭೂಪಾಲದ ಸೃಷ್ಟಿ ಶುಕ್ಲಾ ಮತ್ತು ಕೇರಳದ ಆರ್ಯಾ ಅನಿಲ್​ ಕಾವಾಲಾ ಹಾಡಿಗೆ ಸೀರೆಯುಟ್ಟು ನರ್ತಿಸಿದ್ದಾರೆ. ಇಂಥ ಕ್ಲಿಷ್ಟಕರ ನೃತ್ಯಮಟ್ಟುಗಳನ್ನು ಇವರು ಸೀರೆಯಲ್ಲಿ ಸಲೀಸಾಗಿ ನರ್ತಿಸಿದ್ದು ನಿಜಕ್ಕೂ ಆಕರ್ಷಕವಾಗಿದೆ. ಮಿಲಿಯನ್ ಜನರ ಮನಸ್ಸನ್ನು ಗೆದ್ದ ಈ ವಿಡಿಯೋ ಅನ್ನು ನೀವಿಲ್ಲಿ ನೋಡಬಹುದಾಗಿದೆ.

Viral Video: ಕಾವಾಲಾ ಕಾವು; ಸೀರೆಯುಟ್ಟು ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ ಮತ್ತು ಸೃಷ್ಟಿ ಶುಕ್ಲಾ
ಸೀರೆಯಲ್ಲಿ ಕಾವಾಲಾ; ನಟಿಯರಾದ ಸೃಷ್ಟಿ ಶುಕ್ಲಾ, ಅದ್ವಿತಿ ಶೆಟ್ಟಿ, ಆರ್ಯಾ ಅನಿಲ್
Follow us
ಶ್ರೀದೇವಿ ಕಳಸದ
|

Updated on:Aug 22, 2023 | 4:32 PM

Kaavaalaa : ಕಾವಾಲಾದ ಕಾವು ದಿನೇದಿನೇ ಏರುತ್ತಿದೆ. ಅದು ಬಹುಶಃ ಋತುಮಾನಕ್ಕೂ ಆವರಿಸಿದೆಯೇನೋ. ಬೆಂಗಳೂರಿನಲ್ಲಿ ಮಳೆಯೂ ಇಲ್ಲ ಚಳಿಯೂ ಇಲ್ಲ ನಗರವೆಲ್ಲಾ ಬಿಸಿಬಿಸಿ. ಇದೀಗ ನಟಿಯರಾದ ಅದ್ವಿತಿ ಶೆಟ್ಟಿ (Advithi Sherry) ಮತ್ತು ಸೃಷ್ಟಿ ಶುಕ್ಲಾ (Srishti Shukla) ಕಾವಾಲಾ ಹಾಡಿಗೆ ಸೀರೆಯುಟ್ಟು ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಈ ಇಬ್ಬರೊಂದಿಗೆ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್​ ​ ಆರ್ಯಾ ಅನಿಲ್ (Arya Anil) ಕೂಡ ಸೀರೆಯುಟ್ಟು ನರ್ತಿಸಿದ್ದಾರೆ. ಈ ಮೂವರ ವಿಡಿಯೋಗಳು 6 ಮಿಲಿಯನ್​ಗಿಂತಲೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿವೆ. ಅದ್ವಿತಿ ವಿಡಿಯೋವನ್ನು 1.2 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸೃಷ್ಟಿ ವಿಡಿಯೋವನ್ನು 2.1 ಲಕ್ಷ ಜನರು ಲೈಕ್ ಮಾಡಿದ್ದಾರೆ. ಆರ್ಯಾ ವಿಡಿಯೋವನ್ನು 2.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇವರ ನೃತ್ಯಕೌಶಲಕ್ಕೆ ಮಾರುಹೋಗಿದ್ದಾರೆ.

ಇದನ್ನೂ ಓದಿ : Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಈ ವಿಡಿಯೋ ಅನ್ನು ಆನ್​ ಡಿಮ್ಯಾಂಡ್​ ಪ್ರಸ್ತುಪಡಿಸಲಾಗಿದೆ ಎಂದು ಕನ್ನಡದ ನಟಿ ಅದ್ವಿತಿ ಈ ವಿಡಿಯೋಗೆ ನೋಟ್ ಬರೆದಿದ್ದಾರೆ. ಕನ್ನಡ ಹಾಡಿಗೆ ರೀಲ್ಸ್ ಮಾಡಿ ಅದು ಬಿಟ್ಟು… ಎಂದು ಒಬ್ಬರು ಹೇಳಿದ್ದಾರೆ. ಈ ಚಳಿಯಲಿ ಬಿಸಿ ಬಿಸಿ ಕಾಫಿ ಚೆಂದ, ನಿನ್ನ ಚೆಂದದ ನಗುವೇ ಅಂದ. ನಿನ್ನ ಚೆಲುವದು ಮಕರಂದ. ಪ್ರೇಮಕಾವ್ಯ ಸೃಷ್ಟಿ ನಿನ್ನ ಸ್ಪೂರ್ತಿಯಿಂದ. ನಿನ್ನ ಸ್ವಾಗತಿಸಲು ಅಲಂಕರಿಸಿರುವೆ ಮನದ ಅರಮನೆಯ ಪ್ರೇಮದ ಹೂಗಳಿಂದ ಎಂದು ಮತ್ತೊಬ್ಬರು ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ಧಾರೆ.

ಸೀರೆಯಲ್ಲಿ ಅದ್ವಿತಿ ಶೆಟ್ಟಿ ಕಾವಾಲಾಗೆ ನರ್ತಿಸಿರುವ ವಿಡಿಯೋ

ಭೋಪಾಲ ಮೂಲದ ಸೃಷ್ಟಿ ​ ಶುಕ್ಲಾ ನೆಲೆಸಿರುವುದು ಹೈದರಾಬಾದಿನಲ್ಲಿ. ನಾಟ್ಯಂ ಎಂಬ ತೆಲುಗು ಸಿನೆಮಾದಲ್ಲಿ ಇವರು ನಟಿಸಿದ್ದಾರೆ. ಇಂಥ ಡ್ಯಾನ್ಸ್​ ಅನ್ನು ಈ ಮೊದಲು ನೊಡಿಯೇ ಇರಲಿಲ್ಲ ಬಹಳ ಅದ್ಭುತವಾಗಿದೆ ಎಂದಿದ್ದಾರೆ ಅವರ ಅಭಿಮಾನಿಗಳು. ಸೀರೆಯಲ್ಲಿ ನೀವು ಈ ಸ್ಟೆಪ್​ನಲ್ಲಿ ಅದೆಷ್ಟು ನಿರಾಯಾಸವಾಗಿ ಹಾಕಿದ್ದೀರಿ, ನಿಜಕ್ಕೂ ಚೆನ್ನಾಗಿದೆ ಎಂದು ಅನೇಕರು ಹೇಳಿದ್ದಾರೆ.

ಸೃಷ್ಟಿ ಶುಕ್ಲಾ ಕಾವಾಲಾಗೆ ಸೀರೆಯಲ್ಲಿ ನರ್ತಿಸಿರುವ ವಿಡಿಯೋ ನೋಡಿ

View this post on Instagram

A post shared by Srish Shukla (@sriiishh)

ಕೇರಳದ ಕಿರುತೆರೆ ನಟಿ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್ ಆರ್ಯಾ ಅನಿಲ್​ ಈ ಹಾಡಿಗೆ ವ್ಯಕ್ತಪಡಿಸಿರುವ ಭಾವಾಭಿನಯವನ್ನು ತುಂಬಾ ಆಕರ್ಷಕವಾಗಿದೆ ಎಂದು ಅಭಿಮಾನಿಗಳು ಬಹುವಾಗಿ ಕೊಂಡಾಡಿದ್ದಾರೆ. ತುಂಡುಬಟ್ಟೆ ಹಾಕದೇ ಮುಖದಲ್ಲಿಯೇ ಈ ಹಾಡಿನ ಭಾವವನ್ನು ಹಿಡಿದಿಟ್ಟಿದ್ದೀರಿ, ನಿಜಕ್ಕೂ ಅದ್ಭುತ ಎಂದಿದ್ದಾರೆ.

ಸೀರೆಯುಟ್ಟು ಕಾವಾಲಾಗೆ ಹೆಜ್ಜೆ ಹಾಕಿದ ಆರ್ಯಾ ಅನಿಲ

ಅನೇಕರು ತಮನ್ನಾ ಭಾಟಿಯಾ (Tamanna Bhatiya)ಳ ಹಾಗೆ ಕಾಸ್ಟ್ಯೂಮ್​ ಧರಿಸಿ ನರ್ತಿಸಿದ್ದಾರೆ. ಆದರೆ ಈ ಮೂರು ಜನರು ಸೀರೆಯುಟ್ಟು ಅದ್ಭುತವಾಗಿ ನರ್ತಿಸಿದ್ದಾರೆ. ಈ ಹಾಡಿಗೆ  ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:30 pm, Tue, 22 August 23

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್