AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾವಾಲಾಗೆ ರಿವಾಪುಟ್ಟಿಯ ರೀಲ್​; ಭಾವಾಭಿನಯಕ್ಕೆ ಮನಸೋತ ನೆಟ್ಟಿಗರು

Jailer : ತಮನ್ನಾಳ ಈ ಡ್ಯಾನ್ಸ್​ಗೆ ಜಗತ್ತಿನಾದ್ಯಂತ ಸ್ಪಂದನೆ ಸಿಗುತ್ತಿದೆ. ಅತ್ಯಂತ ಉತ್ಸಾಹದಿಂದ ಮಕ್ಕಳಿಂದ ಮುದುಕರವರೆಗೂ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಮುದ್ದುಮರಿಯೊಂದು ಈ ಟ್ರೆಂಡಿಂಗ್​ ಹಾಡಿಗೆ ಹೆಜ್ಜೆ ಹಾಕಿದೆ. ಈಕೆಯ ಕೌಶಲವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಈ ವಿಡಿಯೋ ಅನ್ನು ನೀವು ಬಹುಶಃ ಒಂದೇ ಸಲ ನೋಡಲಾರಿರಿ!

Viral Video: ಕಾವಾಲಾಗೆ ರಿವಾಪುಟ್ಟಿಯ ರೀಲ್​; ಭಾವಾಭಿನಯಕ್ಕೆ ಮನಸೋತ ನೆಟ್ಟಿಗರು
ಕಾವಾಲಾಗೆ ಹೆಜ್ಜೆ ಹಾಕುತ್ತಿರುವ ಪುಟ್ಟ ರಿವಾ
ಶ್ರೀದೇವಿ ಕಳಸದ
|

Updated on: Aug 21, 2023 | 3:00 PM

Share

Kaavaalaa : ಕೊರಿಯಾದ ರೀಲಿಗರು, ಜಪಾನಿನ ರಾಯಭಾರಿಗಳು, ಕೇರಳದ ರೂಪದರ್ಶಿ, ವೃತ್ತಿಪರ ನೃತ್ಯ ಕಲಾವಿದರು ಮತ್ತು ಮುಂಬೈ ಪೊಲೀಸರೊಬ್ಬರು (Mumbai Police) ಜೈಲರ್​ನ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದನ್ನು ನೋಡಿದಿರಿ. ಇದೀಗ ರಿವಾ ಎಂಬ ಪುಟ್ಟಿ ಕಾವಾಲಾ ಹಾಡಿಗೆ ಮುದ್ದಾಗಿ ಹೆಜ್ಜೆ ಹಾಕಿದ್ದಾಳೆ. ಈ ಟ್ರೆಂಡಿಂಗ್​ ಹಾಡು ನಿಮಿಷನಿಮಿಷಕ್ಕೆ ಹೊಸ ರೀಲ್​​​​ಗಳ ಸೃಷ್ಟಿಗೆ ಕಾರಣವಾಗುತ್ತಿದೆ. ನೆಟ್ಟಿಗರಂತೂ ಮತ್ತೆ ಯಾರೆಲ್ಲ ರೀಲ್​ ಮಾಡುತ್ತಾರೆ ಎಂದು ಬಿಟ್ಟ ಕಣ್ಣುಗಳಿಂದ ಕಾಯುತ್ತಿದ್ದಾರೆ. ಯಾರಿಗೆಲ್ಲ ಈ ಹಾಡು ಹುಚ್ಚು ಹಿಡಿಸಿದೆ? ತಮನ್ನಾಳ ಸ್ಟೆಪ್ಸ್​ ಅನ್ನು ಯಾರು ಹೇಗೆಲ್ಲ ಅನುಕರಿಸುತ್ತಿದ್ದಾರೆ ಎಂದು ನೋಡುತ್ತ ಕುಳಿತಿದೆ. ಅಂತೂ ತಮನ್ನಾ ಮತ್ತು ಕಾವಾಲಾ ಹಾಡು, ನೃತ್ಯ ಜಗತ್ತಿಗೇ ಕಾವು ಏರಿಸಿದೆ!

ಇದನ್ನೂ ಓದಿ : Viral Video: ಹೀಗೊಬ್ಬ ಅಸಿಸ್ಟಂಟ್​ ಮಿ. ಮಾರುತಿ; ನೆಟ್ಟಿಗರ ಕೋಪವೇಕೆ ನೆತ್ತಿಗೇರಿದೆ? 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಂಥ ಮುದ್ದಾದ ಗೊಂಬೆ ಇದು! ಈತನಕ ಈ ಹಾಡಿಗೆ ಇಷ್ಟೊಂದು ಮುದ್ದಾಗಿ ಯಾರೂ ಡ್ಯಾನ್ಸ್ ಮಾಡಿದ್ದನ್ನು ನೋಡಿರಲಿಲ್ಲ ಎಂದು ಅನೇಕರು ಶ್ಲಾಘಿಸಿದ್ದಾರೆ. ತಮನ್ನಾಳ ಹೆಜ್ಜೆಗಳನ್ನು, ಭಾವಾಭಿನಯವನ್ನು ಎಷ್ಟು ಛಂದ ಅನುಸರಿಸಿದ್ದಾಳೆ ಈ ಮುದ್ದು ಎಂದು ಅಚ್ಚರಿಗೊಂಡಿದ್ದಾರೆ. ಈ ವಿಡಿಯೋ ಅನ್ನು ಜು. 17ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದೆ. ಈತನಕ ಸುಮಾರು 9.2 ಲಕ್ಷ ಜನರು ಲೈಕ್ ಮಾಡಿದ್ದಾರೆ. 10 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ.

ನೋಡಿ ರಿವಾ ಕಾವಾಲಾಗೆ ಹೆಜ್ಜೆ ಹಾಕಿದ ವಿಡಿಯೋ

ರಜನಿಕಾಂತ್ ಮತ್ತು ತಮನ್ನಾ ಭಾಟಿಯಾ, ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ನಟಿಸಿರುವ ಜೈಲರ್ ಸಿನೆಮಾ ಅನ್ನು ಜಗತ್ತಿನಾದ್ಯಂತ ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾವಾಲಾ ಹಾಡು ಸುಮಾರು ಒಂದು ತಿಂಗಳಿನಿಂದ ಟ್ರೆಂಡಿಂಗ್​ನಲ್ಲಿದೆ. ತಮನ್ನಾನೇ ಈ ಮಗುವಿನಿಂದ ಡ್ಯಾನ್ಸ್​ ಕಲಿಯಬೇಕು ಅನ್ನಿಸುತ್ತೆ! ಎಂದು ಆಪ್ತವಾಗಿ ಹೇಳಿದ್ದಾರೆ ಕೆಲವರು. ಈ ಡ್ರೆಸ್​ ಮತ್ತು ನಿನ್ನ ಎಕ್ಸ್ಪ್ರೆಷನ್ಸ್​ ಅದ್ಭುತ. ನೀನು ದೊಡ್ಡ ನೃತ್ಯ ಕಲಾವಿದೆಯಾಗು ಎಂದು ಅನೇಕರು ಹಾರೈಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ