AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೀಗೊಬ್ಬ ಅಸಿಸ್ಟಂಟ್​ ಮಿ. ಮಾರುತಿ; ನೆಟ್ಟಿಗರ ಕೋಪವೇಕೆ ನೆತ್ತಿಗೇರಿದೆ?

Monkey : ಕೆಲವರಿಗೆ ಗುಲಾಮಗಿರಿಯನ್ನು ಆಸ್ವಾದಿಸುವ ಖಯಾಲಿ ಇರುತ್ತದೆ. ಹಣ ಕೊಟ್ಟು ಮನುಷ್ಯ ಸಹಾಯಕರನ್ನು ನೇಮಿಸಿಕೊಳ್ಳಲು ಈಕೆಗೆ ಏನು ಸಮಸ್ಯೆ? ಜೀತಕ್ಕೆ ಬೇಕೆಂದರೆ ರೋಬೋಟ್​ ಖರೀದಿಸಲಿ... ಅಂತೆಲ್ಲ ಕಿಡಿಕಾರಿದ್ದಾರೆ ಕೆಲವರು. ಆದರೆ ಇನ್ನೂ ಕೆಲವರು ಈ ಕೋತಿಯ ಚಾಣಾಕ್ಷತೆ ನೋಡಿ ಬೆರಗಾಗಿದ್ದಾರೆ. ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?

Viral Video: ಹೀಗೊಬ್ಬ ಅಸಿಸ್ಟಂಟ್​ ಮಿ. ಮಾರುತಿ; ನೆಟ್ಟಿಗರ ಕೋಪವೇಕೆ ನೆತ್ತಿಗೇರಿದೆ?
ಮಗುವಿಗೆ ಸ್ನಾನಕ್ಕೆ, ನಿದ್ದೆಗೆ ಸಹಾಯ ಮಾಡುತ್ತಿರುವ ಕೋತಿ
ಶ್ರೀದೇವಿ ಕಳಸದ
|

Updated on:Aug 21, 2023 | 2:01 PM

Share

Animals : ಇನ್ನೇನು ಸ್ವಲ್ಪ ದಿನಗಳಲ್ಲಿ ಈ ಕೋತಿಗಳು ಬರೀ ತಿಂಡಿ ತೀರ್ಥ ಕೊಟ್ಟು ನಮ್ಮಿಂದ ಕೆಲಸ ಮಾಡಿಸಿಕೊಳ್ಳಬೇಡಿ, ನಮಗೂ ಕೆಲ ಕೌಶಲಗಳು (Skills) ಗೊತ್ತು, ತಿಳಿವಳಿಕೆಯೂ ಇದೆ, ಸೂಕ್ಷ್ಮತೆಯೂ ಇದೆ. ನೀವು ಏನು ಕಲಿಸುತ್ತೀರೋ ಅದೆಲ್ಲ ಕಲಿಯುತ್ತೇವೆ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಹಾಗಾಗಿ ನಮಗೂ ಸಂಬಳ ಕೊಡಿ ಎಂದು ಕೆಲ ಸಾಕುಪ್ರಾಣಿಗಳು ಕೇಳಬಹುದಾದ ಕಾಲ ಬರಬಹುದೇ? ಅಥವಾ ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ, ಇವುಗಳಿಗೇ ತರಬೇತಿ ಕೊಟ್ಟು ಮನೆಯಲ್ಲಿ ಸಹಾಯಕ್ಕೆ ಇಟ್ಟುಕೊಳ್ಳಬಹುದು ಎಂದು ಮನುಷ್ಯರು ಲೆಕ್ಕಾಚಾರ ಹಾಕಬಹುದೆ?

ಇದನ್ನೂ ಓದಿ : Viral Video: ‘ಕಾವಾಲಾ ಕಾವು’ ಇದೀಗ ಮುಂಬೈ ಪೊಲೀಸರೊಬ್ಬರಿಗೆ; ಭಲೇ ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಗುವನ್ನು ನೋಡಿಕೊಳ್ಳಲು ತಾಯಿಯೊಬ್ಬಳಿಗೆ ಸಹಾಯ ಮಾಡುತ್ತಿದೆ ಅಸಿಸ್ಟೆಂಟ್​ ಮಿ. ಮಾರುತಿ! ನೆಟ್ಟಿಗರಲ್ಲಿ ಕೆಲವರು ಈ ವಿಡಿಯೋ ನೋಡಿ ಮೆಚ್ಚಿದ್ದಾರೆ ಇನ್ನೂ ಕೆಲವರು ಗರಂ ಆಗಿದ್ಧಾರೆ. ಎಂಥ ಬುದ್ಧಿವಂತಿಕೆಯಿಂದ ಕೂಡಿದೆ ಈ ಕೋತಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನಿಮ್ಮ ಸ್ವಾರ್ಥಕ್ಕೆ ಪ್ರಾಣಿಗಳಿಗೆ ಹಿಂಸೆ ಮಾಡುತ್ತಿದ್ದೀರಾ? ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಅಸಿಸ್ಟೆಂಟ್​ ಮಿ. ಮಾರುತಿಯವರ ಈ ವಿಡಿಯೋ ಇಲ್ಲಿದೆ

ಕಾಡಿನಲ್ಲಿ ಟೊಂಗೆಯಿಂದ ಟೊಂಗೆಗೆ ಜೀಕುತ್ತ ಬೇಕಾದ್ದನ್ನು ತಿಂದುಂಡು ಜೀವಿಸುವ ಹಕ್ಕು ಇವನಿಗಿದೆ, ಎಂದೂ ಅವನು ಹೀಗೆ ಮನುಷ್ಯರಿಗೆ ಸಹಾಯ ಮಾಡಬಾರದು, ಅವ ಎಷ್ಟೇ ತರಬೇತಿ ಪಡೆದುಕೊಂಡು ಕೆಲಸ ಕಲಿತರೂ ಇದು ಅವನ ವಾಸಸ್ಥಾನವಲ್ಲ ಎಂದಿದ್ದಾರೆ ಒಬ್ಬರು. ನಿಮಗೆ ಸಹಾಯ ಮಾಡಲು ಮನುಷ್ಯರಿಲ್ಲವೆ? ಯಾಕೆ ಪ್ರಾಣಿಯನ್ನು ಹಿಂಸಿಸುತ್ತಿದ್ದೀರಿ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ

ಈ ಮಹಿಳೆಗೆ ಹುಚ್ಚು ಹಿಡಿದಿದೆ, ಈಕೆ ಮನುಷ್ಯಳೇ ಅಲ್ಲ, ಪ್ರಾಣಿಗಳನ್ನೂ ಜೀತಕ್ಕಿಟ್ಟುಕೊಂಡಿದ್ದಾಳೆ ಎಂದು ಬೈದಿದ್ದಾರೆ ಇನ್ನೊಬ್ಬರು. ಗುಲಾಮಗಿರಿಯನ್ನು ಬಯಸುವವರು ರೋಬೋಟ್​​ಗಳನ್ನು ಬಳಸಿಕೊಳ್ಳಿ ಎಂದಿದ್ದಾರೆ ಮತ್ತೊಬ್ಬರು. ಅರೆ, ಹಿಂದೆ ಎತ್ತುಗಳನ್ನು, ಕುದುರೆಗಳನ್ನು ಪ್ರಯಾಣಕ್ಕಾಗಿ ಉಪಯೋಗಿಸುತ್ತಿದ್ದರಲ್ಲವೆ? ಈಗ ಈ ಕೋತಿ ಕೆಲಸದಲ್ಲಿ ತೊಡಗಿರುವುದು ಕ್ರೌರ್ಯ ಎಂದು ಹೇಗೆ ಹೇಳುತ್ತೀರಿ? ಎಂದು ಕೇಳಿದ್ದಾರೆ ಮಗದೊಬ್ಬರು. ಒಂದುವೇಳೆ ಮುಂದಿನ ದಿನಗಳಲ್ಲಿ ಪೆಟ್ರೋಲ್​ ಬಂಕ್​​ಗಳಲ್ಲಿ, ಅಂಗಡಿಗಳಲ್ಲಿ, ಹೋಟೆಲ್​​ಗಳಲ್ಲಿ ಹಾಗೂ ಇನ್ನಿತರೇ ಸಾರ್ವಜನಿಕ ಸ್ಥಳಗಳಲ್ಲಿ ಮಿ. ಮಾರುತಿ ಬಳಗದವರು ಕೆಲಸ ಕೇಳಿಕೊಂಡು ಬಂದರೆ ಏನು ಮಾಡಬೇಕು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:59 pm, Mon, 21 August 23

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ