Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ
Art : ಇದು ಅತ್ಯಂತ ನೈಜ ಕಲೆ. ಆಕಾಶ ಮತ್ತು ಪ್ರಕೃತಿಯೇ ಮನೆಯೊಳಗೆ ಬಂದು ಇಳಿದಂತಿದೆ. ಈ ಪೇಂಟಿಂಗ್ ನೋಡಿದಾಗ ಬಹಳ ಶಾಂತಭಾವ ಮೂಡುತ್ತಿದೆ. ನಮ್ಮ ಮನೆಯಲ್ಲಿಯೂ ಇಂಥ ಪೇಂಟಿಂಗ್ ಮಾಡಿಸಬೇಕು ಎನ್ನುವ ಉತ್ಸಾಹ ಉಂಟಾಗುತ್ತಿದೆ. ಕಲಾವಿದರಿಗೆ ಶರಣು! ಎನ್ನುತ್ತಿದ್ದಾರೆ ಅನೇಕ ನೆಟ್ಟಿಗರು. ಈ ವಿಡಿಯೋ ನೋಡಿದ ನೀವು?
Painting : ನಾಲ್ಕು ಗೋಡೆ, ಸೂರು, ಕಿಟಕಿ ಬಾಗಿಲು ಜೋಡಿಸಿಬಿಟ್ಟರೆ ಮನೆ ಆಯಿತೆ? ಛಂದ ಕಾಣಲು ಬಣ್ಣ ಹಚ್ಚಬೇಡವೆ? ಬಣ್ಣ ಹಚ್ಚಿದರೆ ಮುಗಿಯಿತೆ? ಅಭಿರುಚಿಗೆ ತಕ್ಕಂತೆ ಅಲಂಕರಿಸಬೇಡವೆ? ಹಾಗಿದ್ದರೆ ಈ ವಿಡಿಯೋ ನೋಡಿ, ಈ ಕಲಾವಿದರು ಸೀಲಿಂಗ್ ಮ್ಯೂರಲ್ಸ್ನಲ್ಲಿ (Ceiling Murals) ಏನೆಲ್ಲ ಅರಳಿಸಿದ್ದಾರೆ ಎಂದು. ನೆಟ್ಟಿಗರು ಇವರ ಕೌಶಲ ನೋಡಿ ಶ್ಲಾಘಿಸುತ್ತಿದ್ದಾರೆ. ಆಕಾಶವನ್ನು ಪ್ರಕೃತಿಯನ್ನು ಮನೆಯೊಳಗೆ ಇಳಿಸಿಕೊಂಡಿದ್ದಾರೆ ಇವರು ಎಂದು ಅಚ್ಚರಿಪಡುತ್ತಿದ್ದಾರೆ. ಬಹಳ ನೈಜತೆಯಿಂದ ಈ ಪೇಂಟಿಂಗ್ ಕೂಡಿದೆ, ಆ ಗಿಡಮರಗಳು, ಮೋಡ, ಹೂ, ಆ ನೀಲಾಕಾಶ ಆಹಾ ನಿಜಕ್ಕೂ ಇದೊಂದು ಸ್ವರ್ಗೃವೇ ಎನ್ನುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : Viral Video: ಸಲ್ಮಾನ್, ಕತ್ರೀನಾಳ ಮಾಶಾಅಲ್ಲಾಹ್ ಹಾಡಿಗೆ ಯುವತಿಯ ಬೆಲ್ಲೀ ಡ್ಯಾನ್ಸ್; ಬೆರಗಾದ ನೆಟ್ಟಿಗರು
ಈ ಪೇಂಟಿಂಗ್ ನೋಡಿದ ಮೇಲೆ ನನ್ನ ಮನೆಯ ಸೀಲಿಂಗ್ಗೂ ಕೂಡ ಮಾಡಬೇಕೆನ್ನಿಸುತ್ತಿದೆ ಎಂದಿದ್ದಾರೆ ಅನೇಕರು. ಇಂಥ ಪೇಂಟಿಂಗ್ಗಳು ಮನೆಯೊಳಗೆ ಇದ್ದರೆ ಮನಸ್ಸು ಎಂಥ ದಣಿವನ್ನೂ ಮರೆಯುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಇಂಥ ಆಹ್ಲಾದಕರ ವಾತಾವರಣ ಮನೆಯಲ್ಲಿ ಇರಬೇಕು, ಎಲ್ಲವೂ ನಮ್ಮ ಆಲೋಚನೆ ಮತ್ತು ಕೃತಿಯಲ್ಲಿದೆ ಅಲ್ಲವೆ? ಎಂದು ಕೇಳಿದ್ದಾರೆ ಇನ್ನೊಬ್ಬರು.
ಸೀಲಿಂಗ್ ಮ್ಯೂರಲ್ಸ್ನಲ್ಲಿ ತೊಡಗಿಕೊಂಡಿರುವ ಕಲಾವಿದರು
View this post on Instagram
ಈ ವಿಡಿಯೋ ಅನ್ನು ಈತನಕ 1.9 ಲಕ್ಷ ಜನರು ಲೈಕ್ ಮಾಡಿದ್ದಾರೆ. 7 ಮಿಲಿಯನ್ ಜನರು ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಾರೆ. ನನ್ನ ಮನೆಯ ಗೊಡೆಗೆ ನಾನು ಇದೇ ಥರದ ಪೇಂಟಿಂಗ್ ಮಾಡಿಸಿದ್ದೇನೆ, ಏನೋ ವಿಶೇಷವಾದ ಶಕ್ತಿ ನನ್ನ ಜೊತೆಗಿದೆ ಎಂದು ಭಾಸವಾಗುತ್ತದೆ ಅದನ್ನು ನೋಡಿದಾಗೆಲ್ಲ ಎಂದಿದ್ದಾರೆ ಒಬ್ಬರು. ಈ ಪೇಂಟಿಂಗ್ನಲ್ಲಿ ನಿರಂತರವಾಗಿ ತೊಡಗಿಕೊಂಡವರ ಕತ್ತುಗಳು ಏನಾಗಬಹುದು!? ಎಂದು ಪ್ರಶ್ನಿಸಿದ್ದಾರೆ ಇನ್ನೊಬ್ಬರು. ನಾನು ಇನ್ನುಮುಂದೆ ಸೀಲಿಂಗ್ ಪೇಂಟಿಂಗ್ ಮಾಡಕೂಡದು ಎಂದು ನನ್ನ ವೈದ್ಯರು ಹೇಳಿದ್ದಾರೆ ಎಂದು ಒಬ್ಬ ಕಲಾವಿದರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್ ಎರಚಿದ ಮಹಿಳೆಯ ಬಂಧನ
ಕಲೆ ಮತ್ತು ಕಷ್ಟ ಎರಡೂ ಒಂದೇ ನಾಣ್ಯದ ಮುಖಗಳಿದ್ದಂತೆ. ಆದರೆ ಕಲಾಸ್ವಾದಕರಿಗೆ? ಎಂದಿದ್ದಾರೆ ಒಬ್ಬರು. ಕಷ್ಟಗಳನ್ನು ಮರೆಯಲು ಕಲೆ ಬೇಕಲ್ಲ ಎಂದಿದ್ದಾರೆ ಇನ್ನೊಬ್ಬರು. ಹಾಗಿದ್ದರೆ ಕಲೆ ಮತ್ತು ಕಲಾವಿದರು ಎಲ್ಲರಿಗೂ ಬೇಕು, ಅವರಿಗೂ ಉಳಿದವರು ಬೇಕು, ಇದು ಪರಸ್ಪರ ಪ್ರಕ್ರಿಯೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ