Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಂಗ್ಲಾಭಕ್ಷ್ಯ; ‘ಅವಲಕ್ಕಿಯ ಕೊಲೆಯಾಗಿದೆ ಇಲ್ಲಿ!’ ಆಕ್ರೋಶಗೊಂಡ ನೆಟ್ಟಿಗರು

Bangladesh : ಇವನಿಗೆ ಈ ಖಾದ್ಯವನ್ನು ತಯಾರಿಸುವುದನ್ನು ದಯವಿಟ್ಟು ನಿಲ್ಲಿಸಲು ತಿಳಿಸಿ ಎಂದು ಅನೇಕ ನೆಟ್ಟಿಗರು ಮುಖ ಕಿವುಚಿದ್ದಾರೆ. ಇಡೀ ಭಾರತದಾದ್ಯಂತ ಅವಲಕ್ಕಿಯನ್ನು ಪ್ರೀತಿಸುವ ಕೋಟ್ಯಂತರ ಜನರಿದ್ದಾರೆ, ಅವರೆಲ್ಲ ಈ ವಿಡಿಯೋ ನೋಡಿದರೆ ಖಂಡಿತ ಸಂಕಟಪಟ್ಟುಕೊಳ್ಳುತ್ತಾರೆ ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋ ನೋಡಿದ ನೀವೇನಂತೀರಿ?

Viral Video: ಬಾಂಗ್ಲಾಭಕ್ಷ್ಯ; 'ಅವಲಕ್ಕಿಯ ಕೊಲೆಯಾಗಿದೆ ಇಲ್ಲಿ!' ಆಕ್ರೋಶಗೊಂಡ ನೆಟ್ಟಿಗರು
ಬಾಂಗ್ಲಾದೇಶದ ಬೀದಿಬಿದಿಯ ಅವಲಕ್ಕಿ ಖಾದ್ಯ
Follow us
ಶ್ರೀದೇವಿ ಕಳಸದ
|

Updated on: Aug 21, 2023 | 5:42 PM

Street Food: ಬೀದಿಬದಿಯ ವ್ಯಾಪಾರಿಗಳು ಪ್ರಚಾರಕ್ಕೆ ಮಾಡುವಂಥ ವಿಚಿತ್ರ ಪಾಕಪ್ರಯೋಗಗಳನ್ನು ವ್ಲಾಗರ್​​ಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ (Social Media) ಹಾಕುವುದು ಮತ್ತವುಗಳನ್ನು ನೆಟ್ಟಿಗರು ಕೋಪ ನೆತ್ತಿಗೇರಿಸಿಕೊಂಡು ಬಯ್ಯುವುದನ್ನು ನೋಡುತ್ತಲೇ ಬಂದಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಈ ಲಿಸ್ಟಿಗೇ ಸೇರುತ್ತದೆ. ಬಾಂಗ್ಲಾದೇಶದ ಬೀದಿವ್ಯಾಪಾರಿಯೊಬ್ಬ ಅವಲಕ್ಕಿ ಖಾದ್ಯವನ್ನು ತಯಾರಿಸಿದ್ದಾರೆ. ಅವಲಕ್ಕಿಗೆ ಬಾಳೆಹಣ್ಣು, ರಸಗುಲ್ಲಾ ಮತ್ತು ಮೊಸರನ್ನು ಸೇರಿಸಿ ತಯಾರಿಸಿದ ಈ ತಿಂಡಿಯ ಬಗ್ಗೆ ನೆಟ್ಟಿಗರು ದಯವಿಟ್ಟು ಈ ತಿಂಡಿ ತಯಾರಿಸುವುದನ್ನು ನಿಲ್ಲಿಸು ಮಾರಾಯಾ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಅವಲಕ್ಕಿ ಅನ್ನೋ ರುಚಿಕರವಾದ ಖಾದ್ಯಕ್ಕೆ ಏನೆಲ್ಲ ಅವಸ್ಥೆ ತಂದಿಟ್ಟಿದ್ದಾರೆ ಎಂದು ಖೇದವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಇಟಲಿ; ಮದುವೆಗೆ ಮೊದಲೇ ವರನ ಪಾಸ್​ಪೋರ್ಟ್​ ಜಗಿದಿಟ್ಟ ಗೋಲ್ಡನ್​ ರಿಟ್ರೈವರ್!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬಾಂಗ್ಲಾದೇಶದ ಬೀದಿಬದಿ ವ್ಯಾಪಾರಿಯೊಬ್ಬರು ಈ ವಿಡಿಯೋದಲ್ಲಿ ‘ದೋಯಿ ಚಿರೆ ಪೋಹಾ’ ಎನ್ನುವ ಈ ಖಾದ್ಯವನ್ನು ತಯಾರಿಸಿದ್ದಾರೆ. ಈ ವಿಡಿಯೋ ಅನ್ನು ಅಮರ್ ಸಿರೋಹಿ ಎನ್ನುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೂ. 24ರಂದು ಪೋಸ್ಟ್​ ಮಾಡಿದ ಈ ವಿಡಿಯೋ ಅನ್ನು ಈತನಕ 1.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ನೋಡಿ ಈ ಖಾದ್ಯವನ್ನು ತಯಾರಿಸುವ ಬಗೆ

ಈತನಕ ಈ ವಿಡಿಯೋ ಅನ್ನು 11ಮಿಲಿಯನ್​ ಜನರು ನೋಡಿದ್ದಾರೆ. ದಯವಿಟ್ಟು ಈತನಿಗೆ ಈ ಖಾದ್ಯವನ್ನು ತಯಾರಿಸುವುದನ್ನು ನಿಲ್ಲಿಸಲು ಹೇಳಿ ಎಂದು ನೆಟ್ಟಿಗರು ಗೋಗರಿಯುತ್ತಿದ್ದಾರೆ. ಈ ಮಿಶ್ರಣವು ಸಂಪೂರ್ಣ ವಿಷಯುಕ್ತವಾಗಿದೆ ಎಂದಿದ್ದಾರೆ ಒಬ್ಬರು. ಅವಲಕ್ಕಿಗೆ ಇಂಥ ಗತಿ ತರಬಾರದಿತ್ತು ಎಂದಿದ್ದಾರೆ ಮತ್ತೊಬ್ಬರು. ಇದು ಒಡಿಶಾ ಜನರ ನಿತ್ಯದ ಉಪಹಾರವಾಗಿದೆ. ಇದನ್ನು ತಿನ್ನಲು ಬೇರೆ ದೇಶಕ್ಕೆ ಹೋಗಬೇಕಿಲ್ಲ, ಭಾರತದಲ್ಲಿಯೇ ಸಿಗುತ್ತದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ

ಅಯ್ಯೋ ನನ್ನ ನೆಚ್ಚಿನ ಖಾದ್ಯ ಅವಲಕ್ಕಿಯನ್ನು ಇಲ್ಲಿ ಕೊಲೆಯನ್ನೇ ಮಾಡಿಬಿಟ್ಟರಲ್ಲ! ಎಂದು ಅನೇಕರು ಮರುಗಿದ್ದಾರೆ. ಎಂಥ ಜಾಗದಲ್ಲಿ ಎಂಥ ನೀರು, ಆಹಾರ ಪದಾರ್ಥಗಳನ್ನು ಉಪಯೋಗಿಸಿ ಈತ ತಯಾರಿಸುತ್ತಾನೆ ನೋಡಿ, ಹೊಟ್ಟೆ ತೊಳೆಸಿದಂತಾಗುತ್ತಿದೆ ಎಂದು ಹಲವಾರು ಜನ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!