Viral Video: ಇಟಲಿ; ಮದುವೆಗೆ ಮೊದಲೇ ವರನ ಪಾಸ್​ಪೋರ್ಟ್​ ಜಗಿದಿಟ್ಟ ಗೋಲ್ಡನ್​ ರಿಟ್ರೈವರ್!

Passport : ಇನ್ನೇನು ಕೆಲ ದಿನಗಳಲ್ಲೇ ಮದುವೆಯಾಗುತ್ತೇವೆಂದು ತಯಾರಿ ನಡೆಸಿದ್ದರು ಮತ್ತು ಕನಸುಗಳಲ್ಲಿ ಮುಳುಗೇಳುತ್ತಿದ್ದರು ಇಟಲಿಯ ವಧುವರರು. ಆದರೆ ಅಷ್ಟರಲ್ಲಿಯೇ ವರನ ಸಾಕುನಾಯಿ ಗೋಲ್ಡನ್ ರಿಟ್ರೈವರ್ ಅವನ ಪಾಸ್​ಪೋರ್ಟ್ ಅನ್ನೇ ಜಗಿದು ಚಿಂದಿ ಮಾಡಿಟ್ಟುಬಿಟ್ಟಿದೆ. ಕಂಗಾಲಾದ ವರ ಹೊಸ ಪಾಸ್​ಪೋರ್ಟ್​​ಗಾಗಿ ಅಲೆಯುವಂತಾಗಿದೆ!

Viral Video: ಇಟಲಿ; ಮದುವೆಗೆ ಮೊದಲೇ ವರನ ಪಾಸ್​ಪೋರ್ಟ್​ ಜಗಿದಿಟ್ಟ ಗೋಲ್ಡನ್​ ರಿಟ್ರೈವರ್!
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on:Aug 21, 2023 | 4:41 PM

Golden Retriever: ಗೋಲ್ಡನ್​ ರಿಟ್ರೈವರ್​ನಷ್ಟು ಮುದ್ದಾದ ಮತ್ತು ಕೇಡಿಯಾದ ನಾಯಿಯೂ ಇಲ್ಲ. ಕಂಡದ್ದನ್ನೆಲ್ಲ ನೋಡನೋಡುತ್ತಿದ್ದಂತೆ ತಿನ್ನುವುದು, ಜಗಿಯುವುದು ಅನೇಕ ಸಲ ನುಂಗೇಬಿಡುವುದು! ಮಕ್ಕಳನ್ನು ಬೇಕಿದ್ದರೆ ಒಂದು ಹಂತದ ತನಕ ಸಂಭಾಳಿಸಬಹುದು ಆದರೆ ಈ ನಾಯಿಯನ್ನು? ಮದುವೆಗೆ ಕೆಲವೇ ದಿನಗಳಿರುವಾಗ ಇಟಲಿಯಲ್ಲಿ ವರನ ಪಾಸ್​ಪೋರ್ಟ್ (Passport) ಅನ್ನು ಗೋಲ್ಡನ್​ ರಿಟ್ರೈವರ್ ನಾಯಿಯೊಂದು ಸರಿಯಾಗಿ ಜಗಿದಿಟ್ಟುಬಿಟ್ಟಿದೆ. ಬೋಸ್ಟನ್​ ನಿವಾಸಿ ಡೊನಾಟೋ ಫ್ರಾಟೋಲಿಯವರ ಮದುವೆ ಆ.​ 31 ಏರ್ಪಾಡಾಗಿದ್ದು, ಈ ಜೋಡಿ ಹೊಸ ಪಾಸ್​ಪೋರ್ಟ್​ಗಾಗಿ ಅಧಿಕಾರಿಗಳಿಂದ ತುರ್ತು ಸಹಾಯ ಕೋರಿದೆ.

ಇದನ್ನೂ ಓದಿ : Viral Video: ಕಾವಾಲಾಗೆ ರಿವಾಪುಟ್ಟಿಯ ರೀಲ್​; ಭಾವಾಭಿನಯಕ್ಕೆ ಮನಸೋತ ನೆಟ್ಟಿಗರು

ಡೊನಾಟೋ ತಮ್ಮ ಮದುವೆಗೆ ಕೆಲವೇ ದಿನಗಳಿರುವಾಗ ಈ ಸಮಸ್ಯೆಗೆ ಬಿದ್ದಿದ್ದಾರೆ. ಒಂದೂವರೆ ವರ್ಷದ ಅವರ ಗೋಲ್ಡನ್​ ರಿಟ್ರೈವರ್​ ಕಣ್ಣಿಗೆ ಅಕಸ್ಮಾತ್ ಆಗಿ ಪಾಸ್​ಪೋರ್ಟ್​ ಬಿದ್ದು, ಈ ಅಚಾತುರ್ಯ ನಡೆದಿದೆ. ನಾಯಿ ಮಾಡಿದ ಈ ಕೆಲಸದಿಂದಾಗಿ ಆ. 31ರೊಳಗೆ ಹೊಸ ಪಾಸ್​ಪೋರ್ಟ್​ ಪಡೆಯಲು ಅವರು ಪರದಾಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಹೀಗೊಬ್ಬ ಅಸಿಸ್ಟಂಟ್​ ಮಿ. ಮಾರುತಿ; ನೆಟ್ಟಿಗರ ಕೋಪವೇಕೆ ನೆತ್ತಿಗೇರಿದೆ?

‘ನಾನು ಸ್ವಲ್ಪ ಒತ್ತಡದಲ್ಲಿದ್ದೇನೆ. ಹೊಸ ಪಾಸ್​ಪೋರ್ಟ್ ಪಡೆಯುವ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಅದೃಷ್ಟಕ್ಕೆ ಎಲ್ಲವೂ ಬೇಗಬೇಗನೆ ಕೆಲಸ ಕಾರ್ಯಗಳು ನಡೆಯುತ್ತಿವೆ ಆದಷ್ಟು ಬೇಗ ಎಲ್ಲ ಪ್ರಕ್ರಿಯೆ ಮುಗಿದು ಹೊಸ ಪಾಸ್​ಪೋರ್ಟ್ ಕೈಗೆ ಬರಬಹುದು ಎಂಬ ಭರವಸೆ ಇದೆ’ ಎಂದಿದ್ದಾರೆ ವರ ಡೊನಾಟೋ.

ಇದನ್ನೂ ಓದಿ : Viral Video: ಕಾವಾಲಾ ಕಾವು; ಇದೀಗ ಮುಂಬೈ ಪೊಲೀಸರೊಬ್ಬರಿಗೆ; ಭಲೇ ಎಂದ ನೆಟ್ಟಿಗರು

ಮದುವೆ ನಡೆಯುವುದರೊಳಗೆ ಹೊಸ ಪಾಸ್‌ಪೋರ್ಟ್ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಇಟಲಿಯಲ್ಲಿಯೇ ಉಳಿಯುವುದಾಗ ಅವರು ತಿಳಿಸಿದ್ದಾರೆ. ಪಾಸ್​ಪೋರ್ಟ್​ ಕೈಗೆ ಸಿಕ್ಕಮೇಲೆ ಅಮೆರಿಕಕ್ಕೆ ಹಿಂದಿರುಗಿ ಮದುವೆಯ ಔತಣಕೂಟವನ್ನು ಏರ್ಪಡಿಸಲು ಯೋಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಗೋಲ್ಡನ್​ ರಿಟ್ರೈವರ್ ನಾಯಿಗಳಿಗೆ ಕಂಡಿದ್ದನ್ನೆಲ್ಲ ತಿನ್ನುವ ಚಟ, ಹರಿಯುವ ಚಟ, ಹಾಳುಮಾಡುವ ಚಟ, ಎಷ್ಟೋ ಸಲ ನುಂಗುವ ಚಟವೂ. ದಿನವಿಡೀ ಸಾಕಿದವರ ಕಣ್ಗಾವಲಿನಲ್ಲಿಯೇ ಈ ನಾಯಿ ಇರಬೇಕಾಗುತ್ತದೆ. ನಾಯಿಯನ್ನು ನೋಡಿಕೊಳ್ಳಲೆಂದೇ ಎಲ್ಲಾ ಕೆಲಸವನ್ನು ಬಿಟ್ಟು ಪೋಷಕರು ಮನೆಯಲ್ಲಿರಬೇಕಾಗುತ್ತದೆ!

ಇದನ್ನೂ ಓದಿ : Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ

ಅಂಥಾ ಭಯಂಕರ ನಾಯಿ ಇದು. ಮಾಡುವುದನ್ನೆಲ್ಲ ಮಾಡಿ ತನಗೇನೂ ಗೊತ್ತಿಲ್ಲವೆಂಬಂತೆ ಬೀರುವ ಆ ನೋಟ ಇದೆಯಲ್ಲ, ಅದು ಎಲ್ಲವನ್ನೂ ಮರೆಸಿಬಿಡುತ್ತದೆ. ಸಣ್ಣಪುಟ್ಟ ವಸ್ತುಗಳನ್ನು ಹಾಳು ಮಾಡಿದರೆ ಸರಿ, ಆದರೆ ಮುಖ್ಯವಾದ ದಾಖಲೆಪತ್ರಗಳನ್ನು? ಹೋಗಲಿ ತನ್ನ ಜೀವಕ್ಕೇ ಅಪಾಯ ತಂದುಕೊಂಡರೆ?

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:35 pm, Mon, 21 August 23