Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಸಿ ಸವಿದ ಗಗನಯಾತ್ರಿ
Sandwich : ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಜೀವನವಿಧಾನದ ಬಗ್ಗೆ ಆಗಾಗ ವಿಡಿಯೋಗಳನ್ನು ಕುತೂಹಲದಿಂದ ನೋಡುತ್ತಿರುತ್ತೀರಿ. ಆದರೆ ಇದೀಗ ಅರಬ್ನ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಸಿದ ತಿಂದ ಈ ವಿಡಿಯೋ ಅನ್ನು ಮಾತ್ರ ಮತ್ತೆಮತ್ತೆ ನೋಡುತ್ತೀರಿ! ನೆಟ್ಟಿಗರಂತೂ ಸಾಕಷ್ಟು ಪ್ರಶ್ನೆಗಳನ್ನು ಇವರಿಗೆ ಕೇಳಿದ್ದಾರೆ. ನೀವು?
UAE : ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ನಡೆಸುವ ಜೀವನಶೈಲಿಯ ಬಗ್ಗೆ ಸಾಮಾನ್ಯರಿಗೆ ಕುತೂಹಲ ಇದ್ದೇ ಇರುತ್ತದೆ. ಆಗಾಗ ಈ ಕುತೂಹಲವನ್ನು ತಣಿಸುವ ಅಥವಾ ಹೆಚ್ಚಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗಗನಯಾತ್ರಿಯೊಬ್ಬರು ಹನಿ ಸ್ಯಾಂಡ್ವಿಚ್ (Honey Sandwich) ಎಂಬ ಕ್ವಿಕ್ ಬ್ರೇಕ್ಫಾಸ್ಟ್ ತಯಾರಿಸಿಕೊಂಡಿದ್ದಾರೆ. ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾದಿ (Sultan Al Neyadi) ಈ ಬ್ರೇಕ್ಫಾಸ್ಟ್ ಅನ್ನು ತಯಾರಿಸಿದ್ದಲ್ಲದೆ ತಿನ್ನುವ ವಿಡಿಯೋ ಅನ್ನು ಕೂಡ X (Twitter) ನಲ್ಲಿ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ಅನ್ನು ಕುತೂಹಲದಿಂದ ನೋಡುತ್ತಿದ್ದಾರೆ ಮತ್ತು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಬಾಂಗ್ಲಾಭಕ್ಷ್ಯ; ಅವಲಕ್ಕಿಯ ಕೊಲೆಯಾಗಿದೆ ಇಲ್ಲಿ! ಆಕ್ರೋಶಗೊಂಡ ನೆಟ್ಟಿಗರು
ಗುರುತ್ವಾಕರ್ಷಣೆ ಇಲ್ಲದೆ ತೇಲುವ ಬ್ರೆಡ್, ಮತ್ತು ಮೇಲ್ಮುಖವಾಗಿ ಚಿಮ್ಮಿ ಬ್ರೆಡ್ಡಿಗೆ ಅಂಟಿಕೊಳ್ಳುವ ಜೇನು, ತಯಾರಾದ ಸ್ಯಾಂಡ್ವಿಚ್ ಅನ್ನು ತಿನ್ನುವ ನೆಯಾದಿ… ಈ ಸುಂದರವಾದ ದೃಶ್ಯ ಅನೇಕ ನೆಟ್ಟಿಗರನ್ನು ಬೆರಗಿಗೆ ತಳ್ಳಿದೆ. ಆ. 20ರಂದು ಹಂಚಿಕೊಂಡಿ ಈ ವಿಡಿಯೋ ಅನ್ನು ಈತನಕ 1.7 ಲಕ್ಷ ಜನರು ನೋಡಿದ್ದಾರೆ. 300ಕ್ಕೂ ಹೆಚ್ಚು ಜನರು ರೀಪೋಸ್ಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಕೆ
Have you ever wondered how honey forms in space? 🍯 I still have some Emirati honey left that I enjoy from time to time. Honey has many benefits, especially for the health of astronauts. pic.twitter.com/RrjQYlNvLD
— Sultan AlNeyadi (@Astro_Alneyadi) August 20, 2023
ಇದು ನಿಜಕ್ಕೂ ಬಹಳ ಆಕರ್ಷಕವಾಗಿದೆ. ಇಂಥ ವಿಡಿಯೋಗಳನ್ನು ಹುಡುಕಿ ನೋಡುತ್ತೇವೆ, ಮಕ್ಕಳಿಗೂ ತೋರಿಸುತ್ತೇವೆ ಎಂದಿದ್ದಾರೆ ಕೆಲವರು. 42 ವರ್ಷದ ಗಗನಯಾತ್ರಿ ನೆಯಾದಿ ಆರು ತಿಂಗಳ ಸಂಶೋಧನೆಯನ್ನು ಮುಗಿಸಿ ಸೆ. 1ರಂದು ಭೂಮಿಗೆ ಮರಳಲಿದ್ದಾರೆ. ನಿಮ್ಮ ತೂಕ ಮೊದಲು ಎಷ್ಟಿತ್ತು ಈ ಆರುತಿಂಗಳಲ್ಲಿ ಎಷ್ಟಕ್ಕೆ ಇಳಿದಿದೆ ಎಂದು ಕೇಳಿದ್ದಾರೆ ಕೆಲವರು. ನೀವು ಜಗತ್ತಿನ ಒಳಿತಿಗಾಗಿ ಶ್ರಮಿಸುತ್ತಿದ್ದೀರಿ, ನಿಮ್ಮನ್ನು ನಾವು ಪ್ರೀತಿಸುತ್ತೇವೆ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : Viral Video: ಹೀಗೊಬ್ಬ ಅಸಿಸ್ಟಂಟ್ ಮಿ. ಮಾರುತಿ; ನೆಟ್ಟಿಗರ ಕೋಪವೇಕೆ ನೆತ್ತಿಗೇರಿದೆ?
ಅಯ್ಯೋ ಒಂದು ಸ್ಯಾಂಡ್ವಿಚ್ ತಿಂದರೆ ಸಾಕಾಗುತ್ತದೆಯೇ? ಎಂದು ಕೇಳಿದ್ದಾರೆ ಒಬ್ಬರು. ಅಲ್ಲಿ ಮೈಕ್ರೋಆರ್ಗ್ಯಾನಿಸಂ ತೇಲುತ್ತಿರುತ್ತವೆಯೇ? ಎಂದು ಕೇಳಿದ್ದಾರೆ ಮತ್ತೊಬ್ಬರು. ಬಾಹ್ಯಾಕಾಶ ಪ್ರಯಾಣದಲ್ಲಿ ಉಪಯೋಗಿಸಲು ವಿಶೇಷವಾದ ಜೇನನ್ನು ತಯಾರಿಸಲಾಗುತ್ತದೆಯೆ? ಎಂದು ಕೇಳಿದ್ದಾರೆ ಇನ್ನೊಬ್ಬರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:28 pm, Mon, 21 August 23