Viral Video: ತೋಳ್ಬಲದ ಹಕೀಕತ್ತು; ಮುಂಬೈನಲ್ಲಿ ಬಹುಮಹಡಿಯಿಂದ ಪೀಠೋಪಕರಣ ಇಳಿಸುವ ದೃಶ್ಯ ವೈರಲ್ ಆಗಿದ್ದೇಕೆ?

Furniture : ಯಂತ್ರೋಪಕರಣಗಳಿಂದ ಕೂಡಿದ ಆಧುನಿಕ ಕಾಲದಲ್ಲಿಯೂ ಶ್ರಮಿಕವರ್ಗ ಈಗಲೂ ತನ್ನ ತೋಳ್ಬಲವನ್ನೇ ನೆಚ್ಚಿಕೊಂಡು ಬದುಕುತ್ತಿದೆ. ಮುಂಬೈನಲ್ಲಿ ಬಹುಮಹಡಿಯಿಂದ ಪೀಠೋಪಕರಣವನ್ನು ಕೆಳಗಿಳಿಸಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಯಾಕೆ ಈ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ? ನೀವೇ ನೋಡಿ, ಓದಿ.

Viral Video: ತೋಳ್ಬಲದ ಹಕೀಕತ್ತು; ಮುಂಬೈನಲ್ಲಿ ಬಹುಮಹಡಿಯಿಂದ ಪೀಠೋಪಕರಣ ಇಳಿಸುವ ದೃಶ್ಯ ವೈರಲ್ ಆಗಿದ್ದೇಕೆ?
ಮುಂಬೈನಲ್ಲಿ ಮೂರನೇ ಮಹಡಿಯಿಂದ ಪೀಠೋಪಕರಣವನ್ನು ಕೆಳಗಿಳಿಸುವ ತಂತ್ರ
Follow us
ಶ್ರೀದೇವಿ ಕಳಸದ
|

Updated on:Aug 22, 2023 | 6:33 PM

Mumbai: ಇದೆಲ್ಲವೂ ರಟ್ಟೆಬಲದ ಮೇಲೆಯೇ ಸಾಗುವಂಥ ‘ನಾಜೂಕಿನ ಕೆಲಸ’. ಭಾನುವಾರ ಬಂದರೆ ಮುಂಬೈನಲ್ಲಿ ಇಂಥ ದೃಶ್ಯಗಳು ಅತೀ ಸಾಮಾನ್ಯ. ಏಕೆಂದರೆ ಮನೆಗೆ ಸಂಬಂಧಿಸಿದ ಯಾವ ಕೆಲಸಗಳನ್ನು ಮಾಡಲೂ ಆ ದಿನ ಮಾತ್ರ ಸೂಕ್ತ. ಉಳಿದಂತೆ ಆರು ದಿನವೂ ಕತ್ತಿನ ಮೇಲೆ ಬದುಕಿನ ಬಂಡಿಯನ್ನು ಹೊತ್ತು ಓಡಲೇಬೇಕಾದಂಥ ಅನಿವಾರ್ಯತೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಬಹುಮಹಡಿ ಕಟ್ಟಡದಿಂದ ಪೀಠೋಪಕರಣವನ್ನು (Furnitures) ಕೆಳಗೆ ಇಳಿಸಿಕೊಳ್ಳಲಾಗುತ್ತಿದೆ. ಮೈಯೆಲ್ಲ ಕಣ್ಣಾಗಿ, ತೋಳ್ಬಲದಲ್ಲಿ ನಿಯಂತ್ರಣವನ್ನಿಟ್ಟುಕೊಂಡು ಜಾಗರೂಕತೆಯಿಂದ ನಿಭಾಯಿಸುವ ಕೆಲಸ ಇದಾಗಿದೆ.

ಇದನ್ನೂ ಓದಿ : Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ನೋಡುತ್ತಿದ್ದರೆ ಆತಂಕ ಉಂಟಾಗುತ್ತಿದೆ ಎಂದಿದ್ದಾರೆ ಕೆಲ ನೆಟ್ಟಿಗರು. ಎಷ್ಟು ಚಾಣಾಕ್ಷತೆಯಿಂದ ಇದೆಲ್ಲವನ್ನೂ ಇವರು ನಿಭಾಯಿಸುತ್ತಾರಲ್ಲವೆ? ಇವರಿಗೆ ನನ್ನ ನಮಸ್ಕಾರ ಎಂದಿದ್ದಾರೆ ಒಂದಿಷ್ಟು ಜನ. ಈ ವಿಡಿಯೋವನ್ನು ಅದಿತಿ ಪ್ರಭು ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಜೂ. 25ದು ಹಂಚಿಕೊಂಡಿದ್ದು ಈತನಕ ಸುಮಾರು 8,000 ಜನರು ನೋಡಿದ್ಧಾರೆ.

ಮುಂಬೈನ ಈ ದೃಶ್ಯ

ಇವರ ಈ ಕೌಶಲದ ಹಿಂದೆ ಭೌತಶಾಸ್ತ್ರದ ಕೊಡುಗೆ ಇದೆ ಎಂದಿದ್ಧಾರೆ ಒಬ್ಬರು. ಇದು ಅಸಾಧಾರಣ ತೋಳ್ಬಲ ಇದ್ವರು ಮಾತ್ರ ನಿರ್ವಹಿಸುವಂಥದ್ದು ಎಂದಿದ್ದಾರೆ ಮತ್ತೊಬ್ಬರು. ದೇವರೇ, ನನಗಿದು ಯಾಕೋ ಅಪಾಯಕಾರೀ ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ಇಂಥ ಯಂತ್ರಗಳ ಕಾಲದಲ್ಲಿಯೂ ತೋಳ್ಬಲವನ್ನೇ ನೆಚ್ಚಿಕೊಂಡು ಬದುಕುವ ಇಂಥ ಜೀವಿಗಳಿದ್ದಾರಲ್ಲ ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : Viral Video: ಕಾವಾಲಾ ಕಾವು; ಸೀರೆಯುಟ್ಟು ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ ಮತ್ತು ಸೃಷ್ಟಿ ಶುಕ್ಲಾ

ಕೆಳಗಿರು ನಾವೆಲ್ಟಿ ಅಂಗಡಿಗೆ ನಷ್ಟವಾದರೆ ಏನು ಮಾಡುವುದು? ಎಂದು ನಾನೊಬ್ಬಳೇ ಯೋಚಿಸುತ್ತಿದ್ದೇನೆಯೆ?  ಆದರೂ ಇವರ ಕೆಲಸಕ್ಕೆ ಮೆಚ್ಚುಗೆ ಇದೆ ಎಂದ್ದಾರೆ ಇನ್ನೊಬ್ಬರು. ಬಾಲ್ಯದಲ್ಲಿ ಹೀಗೆಯೇ ನಮ್ಮ ಮನೆಯ ಸಾಮಾನುಗಳನ್ನು ಶಿಫ್ಟ್ ಮಾಡಿದ ನೆನಪಾಯಿತು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:31 pm, Tue, 22 August 23