AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 2004ರ ಹಿಟ್ ಸಾಂಗ್​ ‘ಗ್ಯಾಸೋಲಿನಾ’ ಇದೀಗ ಟ್ರೆಂಡಿಂಗ್​ನಲ್ಲಿ

Daddy Yankee : ಡ್ಯಾಡಿ ಯಂಕೀ 2004ರಲ್ಲಿ ಹಾಡಿದ ಈ ಹಾಡು ಇದೀಗ ಟ್ರೆಂಡ್​ನಲ್ಲಿದೆ. ಮಿಲಿಯನ್​ಗಟ್ಟಲೆ ವೀಕ್ಷಣೆ, ಮಿಲಿಯನ್​ಗಟ್ಟಲೆ ಲೈಕ್ಸ್​ ಈ ವಿಡಿಯೋಗೆ ದಕ್ಕಿದೆ. ಲಕ್ಷಾಂತರ ಜನರು ಒಟ್ಟಾರೆಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇವರ ನೃತ್ಯಕೌಶಲದಿಂದ ಹಿಡಿದು ಇದನ್ನು ಚಿತ್ರೀಕರಿಸಿದ ತಾಂತ್ರಿಕ ರೀತಿನೀತಿಯ ಬಗ್ಗೆ ಮಾತನಾಡಿದ್ದಾರೆ. ನೋಡಿ ಈ ವಿಡಿಯೋ, ನಿಮಗೇನು ಅನ್ನಿಸುತ್ತದೆ ತಿಳಿಸಿ.

Viral Video: 2004ರ ಹಿಟ್ ಸಾಂಗ್​ 'ಗ್ಯಾಸೋಲಿನಾ' ಇದೀಗ ಟ್ರೆಂಡಿಂಗ್​ನಲ್ಲಿ
ಗ್ಯಾಸೋಲಿನಾ ಹಾಡಿಗೆ ಹುಡುಗಿಯರ ನೃತ್ಯ
ಶ್ರೀದೇವಿ ಕಳಸದ
|

Updated on: Aug 23, 2023 | 11:49 AM

Share

Gasolina: ಡ್ಯಾಡೀ ಯಾಂಕೀಯವರ (Daddy Yankee) ಗ್ಯಾಸೋಲಿನಾ,  2004ರ ಹಿಟ್ ಹಾಡು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯುವತಿಯರ ಈ ಗುಂಪುನೃತ್ಯವನ್ನು ನೋಡಿದ ನೆಟ್ಟಿಗರು ಬಹುವಾಗಿ ಪ್ರಶಂಸಿಸುತ್ತಿದ್ದಾರೆ. ಜು. 23ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 8 ಮಿಲಿಯನ್​ ಜನರು ನೋಡಿದ್ದಾರೆ. 1.1 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿ, ವಾಹ್​ ಹುಡುಗಿಯರೇ! ಅದೆಷ್ಟು ಅದ್ಭುತವಾಗಿ ನರ್ತಿಸಿದ್ದೀರಿ. ಹಳೆಯ ಹಾಡಿಗೆ ನಿಮ್ಮ ಪ್ರತಿಭೆಯಿಂದ ಮೆರಗು ತುಂಬಿದ್ದೀರಿ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಈ ಡೈನೋಸಾರ್ ನೋಡಿ ಮಗು ಹೆದರಿದ್ದಕ್ಕೆ ಅರ್ಥವಿದೆ, ಆದರೆ ಅಮ್ಮ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿ ಶಕ್ತಿ, ಸೌಂದರ್ಯ, ಕಲೆ ಎಲ್ಲವೂ ಮೇಳೈಸಿದೆ, ನಿಮ್ಮಿಂದ ನನಗೆ ನನ್ನ ಯೌವನದ ಆ ದಿನಗಳು ನೆನಪಾದವು ಎಂದಿದ್ದಾರೆ ಒಬ್ಬರು. ನಾವು ನಿಮ್ಮೆಲ್ಲರನ್ನು ಪ್ರೀತಿಸುತ್ತೇವೆ, ಆದರೆ ದಯವಿಟ್ಟು ಕ್ಯಾಮರಾದ ಆ್ಯಂಗಲ್ ಅಥವಾ ಅದನ್ನಿಟ್ಟ ಜಾಗವನ್ನು ಬದಲಾಯಿಸಬಾರದೆ? ಇದರಿಂದಾಗಿ ನಿಮ್ಮ ಮುಖಗಳು ಸ್ಪಷ್ಟವಾಗಿ ಕಂಡಿಲ್ಲ, ಬೆಳಕಿನ ವ್ಯವಸ್ಥೆಯೂ ಸರಿ ಇಲ್ಲ. ವಿಡಿಯೋ ಉತ್ತಮ ಗುಣಮಟ್ಟದಲ್ಲಿ ಮಾಡಿದ್ದರೆ ನಿಜಕ್ಕೂ ಇದು ಮತ್ತಷ್ಟು ವೀಕ್ಷಕರನ್ನು ತಲುಪುತ್ತಿತ್ತು ಎಂದಿದ್ದಾರೆ ಇನ್ನೊಬ್ಬರು.

ಈ ಹಾಡಿನ ಸ್ಥೂಲ ಅರ್ಥವೇನು ಎಂದು ಕಲಾವಿದ ಡ್ಯಾಡಿ ಯಾಂಕೀಗೆ ಸಂದರ್ಶನವೊಂದರಲ್ಲಿ ಕೇಳಿದಾಗ, ಈ ಹಾಡಿನಲ್ಲಿ ಹುಡುಗಿಯರು ಬೀದಿಗಿಳಿಯಲು, ರಾತ್ರಿಜೀವನವನ್ನು ಆನಂದಿಸಲು ಇಷ್ಟಪಡುತ್ತಾರೆ ಎಂದರ್ಥ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಒಬ್ಬರು, ಈ ಎಲ್ಲ ಹುಡುಗಿಯರು ಬೆನ್ನಿನಭಾಗದ ನೃತ್ಯಕೌಶಲವನ್ನು ಚೆನ್ನಾಗಿ ಪ್ರದರ್ಶಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?

ಇದಕ್ಕೆ ಪ್ರತಿಯಾಗಿ, ಅಯ್ಯೋ ಇವರ ಬೆನ್ನು ಮತ್ತು ಸೊಂಟದ ಗತಿ ಏನು? ಇಷ್ಟು ಚೆಂದವಾಗಿ ಪ್ರದರ್ಶಿಸಬೇಕೆಂದರೆ ಇವರು ಬಹಳ ಅಭ್ಯಾಸ ಮಾಡಿದ್ದಾರೆ ಎನ್ನುವುದು ಅತ್ಯಂತ ಸ್ಪಷ್ಟ ಎಂದಿದ್ದಾರೆ ಇನ್ನೊಬ್ಬರು. ಅವರಷ್ಟಕ್ಕೆ ಅವರು ಡ್ಯಾನ್ಸ್ ಮಾಡಿ ಖುಷಿಯಿಂದ ರೀಲ್​ ಅಪ್​ಲೋಡ್ ಮಾಡಿದ್ದಾರೆ. ಇಷ್ಟವಾದರೆ ಇಷ್ಟಪಡಿ ಸುಮ್ಮನೆ ಏನೇನೆಲ್ಲ ಮಾತನಾಡಬೇಡಿ ಎಂದು ಗದರಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ​ನ್ಯೂಸ್​​ಗಾಗಿ ಕ್ಲಿಕ್ ಮಾಡಿ