Viral Brain Teaser: ಬಾತುಕೋಳಿಗಳ ನಡುವೆ ಕೋಳಿಮರಿಯೊಂದು ಅಡಗಿದೆ, ಹುಡುಕುವಿರಾ?
Brain Activity : ಅನೇಕ ನೆಟ್ಟಿಗರು ಇಲ್ಲಿ ಕೋಳಿಮರಿಯನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಬಹಳ ಕಷ್ಟಕರವೂ ಮತ್ತು ಸೂಕ್ಷ್ಮವೂ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸಮಸ್ಯೆಯಾಗಿರುವುದೇನೆಂದರೆ ಇಲ್ಲಿರುವ ರಾಶಿಬಾತುಕೋಳಿಗಳ ಬಣ್ಣವೂ ಮತ್ತು ಆ ಒಂದು ಮರಿಯ ಬಣ್ಣವೂ ಒಂದೇ ಆಗಿದೆ. ಹಾಗಾಗಿ ತುಸು ಕಷ್ಟವಾಗಿದೆ. ನಿಮಗೆ?
Brain Teaser : ನೀಲಿ ಸರೋವರದ ಬಳಿ ರಾಶಿ ಬಾತುಕೋಳಿಗಳು ವಿಹರಿಸುತ್ತಿವೆ. ಹಳದಿ ಬಣ್ಣದ ಇವುಗಳ ನಡುವೆ ಕೋಳಿಮರಿಯೊಂದು (Chick) ಅಡಗಿ ಕುಳಿತಿದೆ. ಆ ಮರಿಯನ್ನು ಹುಡುಕುವ ಕೆಲಸ ನಿಮಗೀಗ. ಸಮಯ ಮಿತಿ ಏನೊಂದೂ ಇಲ್ಲ. ಬೇಕಾದಷ್ಟು ಸಮಯವನ್ನು ತೆಗೆದುಕೊಂಡು ನೀವು ಆ ಮರಿಯನ್ನು ಹುಡುಕಬಹುದು. ಅರೆ, ಸಮಯದ ಮಿತಿ ಏಕಿಲ್ಲ ಎಂದು ಕೇಳುತ್ತಿದ್ದೀರೆ? ಏಕೆಂದರೆ ಇದು ಸ್ವಲ್ಪ ಕಷ್ಟಕರವಾದ ಬ್ರೇನ್ ಟೀಸರ್ ಆಗಿದೆ. ಎಂದಿನಂತೆ ಗೆರ್ಗೆಲಿ ಡುಡಾಸ್ ಇದನ್ನು ಚಿತ್ರಿಸಿ ಫೇಸ್ಬುಕ್ನ ತಮ್ಮ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಇದು ತೀರಾ ಸೂಕ್ಷ್ಮ ಮತ್ತು ಕಷ್ಟಕರವಾದದ್ದು ಎನ್ನುತ್ತಿದ್ದಾರೆ. ನೀವೇನಂತೀರಿ?
ಇದನ್ನೂ ಓದಿ : Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್ವಿಚ್ ತಯಾರಿಸಿ ಸವಿದ ಗಗನಯಾತ್ರಿ
ನಿಮ್ಮ ಕಣ್ಣುಗಳು ತೀಕ್ಷ್ಣ ದೃಷ್ಟಿಯನ್ನು ಹೊಂದಿವೆ. ಇಲ್ಲಿರುವ ಸವಾಲು ಏನೆಂದರೆ, ಬಾತುಕೋಳಿಗಳ ಮತ್ತು ಕೋಳಿಮರಿಗಳ ಬಣ್ಣ ಒಂದೇಯಾಗಿದೆ, ಹಾಗಾಗಿ ಹಳದಿ ಬಣ್ಣದ ಬಾತುಗಳ ಮಧ್ಯೆ ಅದೇ ಬಣ್ಣದ ಒಂದೇ ಒಂದು ಕೋಳಿಮರಿ ಹುಡುಕುವುದು ಚೂರು ಕಷ್ಟಕರವೇ. ಆದರೆ, ನೀವು ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವವರಲ್ಲ. ಈಸಲ ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಂಡರೂ ಸರಿ ಉತ್ತರವನ್ನು ಕಂಡುಕೊಳ್ಳುತ್ತೀರಿ.
ಬಾತುಕೋಳಿಗಳ ಮಧ್ಯೆ ಅಡಗಿರುವ ಕೋಳಿಮರಿಯನ್ನು ಹುಡುಕಿ
ಈ ಬ್ರೇನ್ ಟೀಸರ್ ಅನ್ನು ಆ. 18 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅನೇಕ ಉತ್ಸಾಹಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಕೋಳಿ ಹುಡುಕಿದೆ, ಆದರೆ ಮರಿಯಂತೆ ಅದು ಕಾಣಲಿಲ್ಲ ಎಂದಿದ್ದಾರೆ ಒಬ್ಬರು. ನನಗೆ ಇಲಿ ಕಂಡಿತು ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ನನಗೆ ಒಂದು ನಿಮಿಷ ಬೇಕಾಯಿತು, ಆದರೆ ನನ್ನ ಕಲ್ಪನೆಯಲ್ಲಿ ಅರಳಿದ್ದ ಕೋಳಿಮರಿಯನ್ನು ನಾನು ಕೈಬಿಡಬೇಕಾಯಿತು ಎಂದಿದ್ದಾರೆ ಮತ್ತೊಬ್ಬರು.
ಇಲ್ಲಿದೆ ನೋಡಿ ಕೋಳಿಮರಿ!
ನನ್ನ ಮೊಬೈಲ್ ಅನ್ನು ತಿರುಗಿಸಿ ನೋಡಿದೆ ಎರಡು ನಿಮಿಷಗಳ ನಂತರ ನನಗೆ ಕೋಳಿಮರಿ ಸಿಕ್ಕಿತು ಎಂದಿದ್ದಾರೆ ಮಗದೊಬ್ಬರು. ನನಗೆ ಮೊದಲು ಮುದ್ದಾದ ಇಲಿ ಕಂಡಿತು, ಅದಕ್ಕೇನೂ ಕೇಳಲಿಲ್ಲ. ನಾನಾಗಿಯೇ ಕೋಳಿಮರಿಯನ್ನು ಹುಡುಕಿದೆ ಎಂದಿದ್ದಾರೆ ಮತ್ತೊಬ್ಬರು.
ನಿಮಗೆ ಸಿಕ್ಕಿತಾ ಕೋಳಿಮರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:41 am, Tue, 22 August 23