Viral Video: ಕದ್ದ ವಜ್ರಗಳನ್ನು ಹುಡುಕಲು ಪತ್ತೆದಾರಿ ನರಿಗೆ ಸಹಾಯ ಮಾಡುವಿರಾ?

Diamond : ಸರ್ವರ್ ಬೆಕ್ಕೇಶ್ವರಿ ಮ್ಯೂಸಿಯಂನಿಂದ ವಜ್ರಗಳನ್ನು ಕದ್ದ ಈಕೆ ತನ್ನ ಗ್ರಾಹಕರಿಗೆ ಮಾರಿದ್ದಾಳೆ. ಅದನ್ನು ಅವರಿಗೆ ತಲುಪಿಸಲು ಕಾಯುತ್ತಿದ್ದಾಳೆ. ಅದರೆ ಪತ್ತೇದಾರಿ ನರಿಯಣ್ಣನಿಗೆ ಈ ಸುದ್ದಿ ತಿಳಿದುಬಿಟ್ಟಿದೆ! ಆದರೆ ಎಲ್ಲಿ ಅಡಗಿಸಿಟ್ಟಿದ್ದು ಎಂದು ಗೊತ್ತಾಗುತ್ತಿಲ್ಲ. ನೀವು ಸಹಾಯ ಮಾಡುವಿರೆ ವಜ್ರಗಳನ್ನು ಪತ್ತೆ ಹಚ್ಚಲು?

Viral Video: ಕದ್ದ ವಜ್ರಗಳನ್ನು ಹುಡುಕಲು ಪತ್ತೆದಾರಿ ನರಿಗೆ ಸಹಾಯ ಮಾಡುವಿರಾ?
ಬೆಕ್ಕೇಶ್ವರಿ ಎಲ್ಲಿ ವಜ್ರಗಳನ್ನು ಬಚ್ಚಿಟ್ಟುಕೊಂಡಿದ್ದಾಳೆ?
Follow us
ಶ್ರೀದೇವಿ ಕಳಸದ
|

Updated on: Aug 19, 2023 | 1:19 PM

Brain Teaser : ನೀವೆಲ್ಲ ವಾರಾಂತ್ಯದ ಮೂಡ್​ನಲ್ಲಿದ್ದೀರಿ. ಆದರೂ ವಾರಾಂತ್ಯದಲ್ಲಿ ಮಾಡಬೇಕಾದ ಮನೆಕೆಲಸಗಳು, ವೈಯಕ್ತಿಕ ಕೆಲಸಗಳು ಕೈಮಾಡಿ ಕರೆಯುತ್ತಿವೆ. ಆದರೆ ವಿಶ್ರಾಂತಿ ಬೇಕು ಎಂದು ಮನಸ್ಸು ಹೇಳುತ್ತಿದೆ. ಹಾಗೆಂದು ಸುಮ್ಮನೆ ಮಲಗಲಾದೀತೆ? ಕೆಲಸಗಳನ್ನು ಮಾಡಲೇಬೇಕು. ಈ ಕೆಲಸಗಳಿಗೆ ತೊಡಗುವ ಮೊದಲು ನಿಮ್ಮ ಮೆದುಳಿಗೆ ಅಂಟಿಕೊಂಡ ಜಿಡ್ಡನ್ನು ಬಿಡಿಸಬೇಕಲ್ಲ? ಅದಕ್ಕಾಗಿಯೇ ಇದೀಗ ಮತ್ತೊಂದು ಹೊಸ ಚಟುವಟಿಕೆಯನ್ನು ನಿಮಗಾಗಿ ತರಲಾಗಿದೆ. ರೆಡ್ಡಿಟ್​ನಲ್ಲಿ (Reddit) ಹಂಚಿಕೊಳ್ಳಲಾದ ಈ ಮೋಜಿನ ಕಾಮಿಕ್​ ಸಾಮಾಜಿಕ ಜಾಲತಾಣಿಗರನ್ನು ಭಾರೀ ರಂಜಿಸುತ್ತಿದೆ. ಬಿರುಬೇಸಿಗೆಯ ವಾತಾವರಣದಲ್ಲಿ ರೆಸಾರ್ಟ್​ ಒಂದರಲ್ಲಿ ಸರ್ವರ್​ ಬೆಕ್ಕೇಶ್ವರಿ ಅತಿಥಿಗಳಿಗೆ ಐಸ್​ ಹಾಕಿದ ಚಹಾ ಕೊಡುತ್ತಿದ್ದಾಳೆ. ಹಾಗೆಂದು ಈ ಕೆಲಸದಲ್ಲಷ್ಟೇ ಈಕೆ ಪರಿಣತೆಯಲ್ಲ!

ಇದನ್ನೂ ಓದಿ : Viral Video: ಮದುವೆಯಲ್ಲಿ ವಿಡಿಯೋಗ್ರಾಫರ್​ ನೃತ್ಯ; ಕ್ಯಾ ಬಾತ್ ಹೈ ಎಂದ ನೆಟ್ಟಿಗರು 

ಮ್ಯೂಸಿಯಂನಿಂದ ಕದ್ದ ಕೆಲ ವಜ್ರಗಳನ್ನು ಬೆಕ್ಕೇಶ್ವರಿ ತನ್ನ ಬಳಿ ಬಚ್ಚಿಟ್ಟುಕೊಂಡಿದ್ದಾಳೆ. ಬಂದ ಅತಿಥಿಗಳಿಗೆ ಅವುಗಳನ್ನು ಮಾರಿದ್ದಾಳೆ ಕೂಡ. ಆದರೆ ಅವುಗಳನ್ನು ತಲುಪಿಸಲು ಕಾಯುತ್ತಿದ್ದಾಳೆ. ಈ ವಿಷಯ ಪತ್ತೇದಾರಿ ನರಿಯಣ್ಣನಿಗೆ ಗೊತ್ತಾಗಿದೆ. ಆದರೆ ವಜ್ರಗಳನ್ನು ಎಲ್ಲಿ ಅಡಗಿಸಿ ಇಟ್ಟುಕೊಂಡಿದ್ದಾಳೆನ್ನುವುದು ಮಾತ್ರ ಅವನಿಗೆ ತಿಳಿಯುತ್ತಿಲ್ಲ. ಹಾಗಾಗಿ ನಿಮ್ಮ ಕೆಲಸ ಇದೀಗ ನರಿಯಣ್ಣನಿಗೆ ಸಹಾಯ ಮಾಡುವುದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಕ್ಕೇಶ್ವರಿ ವಜ್ರಗಳನ್ನು ಯಾವ ಗ್ಲಾಸಿನಲ್ಲಿ, ಹೇಗೆ ಬಚ್ಚಿಟ್ಟಿದ್ದಾಳೆ? ಕಂಡುಹಿಡಿಯಿರಿ

After stealing diamonds from a Paris Museum, Cassandra Cat fled to an exclusive tropical resort. When Slylock Fox found her, the felonious feline was posing as a server about to deliver the stolen jewels to a buyer. How did Slylock know which glass the diamonds were hidden in? by u/slylockbot in comics

ಈ ಪೋಸ್ಟ್ ಅನ್ನು ಸುಮಾರು ಒಂದು ವರ್ಷದ ಹಿಂದೆ ರೆಡ್ಡಿಟ್​​ನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ನರಿಯಣ್ಣನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ಬೆಕ್ಕೇಶ್ವರಿ ವಜ್ರಗಳನ್ನು ಪ್ಯಾರೀಸ್​ ಮ್ಯೂಸಿಯಂನಿಂದ ಕದ್ದಮೇಲೆ ಗ್ಲಾಸ್​ನಲ್ಲಿ ಅಡಗಿಸಿ ಇಟ್ಟುಕೊಂಡಿದ್ದಾಳೆ ಎಂದು ಕೆಲವರು. ಆದರೆ ಯಾವ ಗ್ಲಾಸ್​ ಎನ್ನುವುದನ್ನು ಪತ್ತೆ ಹಚ್ಚಬೇಕಲ್ಲ? ಐಸ್​ಫ್ಲೋಟ್​? ಎಂದು ಒಬ್ಬರು ಕೇಳಿದ್ದಾರೆ. ನಾನು ಬಹಳ ಬುದ್ಧಿವಂತ, ಆದರೆ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವಲ್ಲಿ ಸೋತೆ ಎಂದಿದ್ದಾರೆ ಇನ್ನೊಬ್ಬರು. ಅನೇಕರು ಐಸ್​ನೊಳಗೆ ವಜ್ರಗಳಿದ್ದು ಅದು ಗ್ಲಾಸಿನೊಳಗೆ ತೇಲುತ್ತಿದೆ ಎಂದಿದ್ದಾರೆ ಹಲವಾರು ಜನ. ನೀವು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ