Viral: ಮ್ಯಾಟ್ರಿಮೋನಿಯಲ್​ ಸೈಟ್​ನಿಂದ ರೂ 45 ಲಕ್ಷ ವಂಚಿಸಲು ಪ್ರಯತ್ನಿಸಿದ ವ್ಯಕ್ತಿ; ಮಹಿಳೆ ಆರೋಪ

Online Fraud : ವಿವಾಹಾಕಾಂಕ್ಷಿಗಳ ಪರಸ್ಪರ ಹುಡುಕಾಟಕ್ಕೆ ಸೇತುವೆಯೆಂಬಂತೆ ಅನೇಕ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​​ಗಳು ಕೆಲಸ ಮಾಡುತ್ತಿವೆ ನಿಜ. ಆದರೆ ಇಲ್ಲಿಯೂ ನುಸುಳಿದ ವಂಚಕರು ಆನ್​ಲೈನ್​ ಮೂಲಕ ಲಕ್ಷಾಂತರ ಹಣವನ್ನು ದೋಚಲು ಗಾಳ ಹಾಕಲು ನೋಡುತ್ತಿದ್ದಾರೆ ಎನ್ನುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಓದಿನೋಡಿ.

Viral: ಮ್ಯಾಟ್ರಿಮೋನಿಯಲ್​ ಸೈಟ್​ನಿಂದ ರೂ 45 ಲಕ್ಷ ವಂಚಿಸಲು ಪ್ರಯತ್ನಿಸಿದ ವ್ಯಕ್ತಿ; ಮಹಿಳೆ ಆರೋಪ
ಸೌಜನ್ಯ : ಅನ್​ಸ್ಪ್ಲ್ಯಾಶ್
Follow us
ಶ್ರೀದೇವಿ ಕಳಸದ
|

Updated on:Aug 22, 2023 | 1:01 PM

Matrimonial Site: ಶಾದಿ ಡಾಟ್​ ಕಾಮ್​ನಿಂದ (Shaadi.com) ಹೊಸ​ ವಂಚನೆ ಎಂಬ ಶೀರ್ಷಿಕೆಯಲ್ಲಿ ಮಹಿಳೆಯೊಬ್ಬರು ರೆಡ್ಡಿಟ್​ನಲ್ಲಿ ಇತ್ತೀಚೆಗೆ ತಮಗಾದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಆನ್​ಲೈನ್​​ ಮೂಲಕ ವ್ಯಕ್ತಿಯೊಬ್ಬ ಆಕೆಗೆ ರೂ. 45 ಲಕ್ಷ ವಂಚನೆ ನಡೆಸಲು ಪ್ರಯತ್ನಿಸಿದ ಪ್ರಕರಣ ಇದಾಗಿದೆ. ಸದ್ಯ ಮಹಿಳೆಗೆ ಆತನ ಮೇಲೆ ಅನುಮಾನ ಬಂದು ಶೀಘ್ರ ಎಚ್ಚೆತ್ತುಕೊಂಡಿದ್ದಾಳೆ. ಇದನ್ನು ಓದಿದ ನೆಟ್ಟಿಗರು ಇಂಥ ಪ್ರಕರಣಗಳು ಈಗೀಗ ಹೆಚ್ಚಾಗಿವೆ ಎಂದು ಹೇಳುತ್ತ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. 3 ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಸುಮಾರು ಸುಮಾರು 185 ಜನರು ಲೈಕ್ ಮಾಡಿದ್ದಾರೆ. 135 ಜನರು ಚರ್ಚೆಯಲ್ಲಿ ಭಾಗಿಯಾಗಿದ್ಧಾರೆ.

ಇದನ್ನೂ ಓದಿ : Viral: ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ನೋಟುಗಳು; ಇದು ಹಳೆಯ ವರಸೆ ಎಂದ ನೆಟ್ಟಿಗರು

‘ಆಗಾಗ ಶಾದಿ ಡಾಟ್ ಕಾಮ್​ ಅಪ್ಲಿಕೇಷನ್​ನಲ್ಲಿ ಕಣ್ಣಾಡಿಸುತ್ತಿರುತ್ತೇನೆ, ಆದರೆ ಅಲ್ಲಿ ಯಾರೊಂದಿಗೂ ಮಾತನಾಡುವುದಿಲ್ಲ. ಆದರೆ ವಾಟ್ಸ್ಯಾಪ್​ ಮೂಲಕ ಯಾರಾದರೂ (ಪ್ರೀಮಿಯಂ ಯೂಸರ್ಸ್​) ಸಂಪರ್ಕಿಸಿದಾಗ ಕೆಲವೊಮ್ಮೆ ಕೆಲವರಿಗೆ ಉತ್ತರಿಸಬೇಕಾದುದು ಸೌಜನ್ಯ. ಹೀಗಿರುವಾಗ ಪುರುಷನೊಬ್ಬ ಮೆಸೇಜ್ ಕಳಿಸಿದ. ಎರಡು ದಿನಗಳ ಕಾಲ ಅವನೊಂದಿಗೆ ಸಂಪರ್ಕದಲ್ಲಿದ್ದೆ. ತಾನು ಕೆನಡಾಗೆ ಹೋಗಲು ತಯಾರಿ ನಡೆಸುತ್ತಿದ್ದೇನೆ ಎಂದ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಶಾದಿ ಡಾಟ್​ ಕಾಮ್​ನ ಹೊಸ ವಂಚನೆ’ ಮಹಿಳೆಯ ಪೋಸ್ಟ್​ ಇಲ್ಲಿದೆ

The new shaadi.com scam by u/ohjugnii in delhi

‘ಏಕೆಂದರೆ ನಾನು ನನ್ನ ಪ್ರೊಫೈಲಿನಲ್ಲಿ ಕೆನಡಾಗೆ ಹೋಗಬಯಸುವ ವಿಷಯವನ್ನು ಉಲ್ಲೇಖಿಸಿದ್ದೆ. ಆ ಸುಳಿವಿನೊಂದಿಗೆ ಅವನು ನನ್ನನ್ನು ಉದ್ದೇಶಪೂರ್ವಕವಾಗಿ ಸಂಪರ್ಕಿಸಿದ್ದಾನೆ. ನನ್ನೊಂದಿಗೆ ಮಾತನಾಡುತ್ತಾ, ತಾನು ಫ್ರೀಲಾನ್ಸ್ ಮಾಡುವ ಕಂಪೆನಿಯೊಂದು ವಿದೇಶದಲ್ಲಿ ನೆಲೆಗೊಳ್ಳಬಯಸುವವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ. ಆಗ ನನಗೆ ಅವನ ಬಗ್ಗೆ ಅನುಮಾನ ಮೂಡಿತು. ತನ್ನ ಕಂಪೆನಿಗಾಗಿ ಗ್ರಾಹಕರನ್ನು ಹುಡುಕಲೆಂದೇ ಇಲ್ಲಿ ಪ್ರೊಫೈಲ್​ ಸೃಷ್ಟಿಸಿದ್ದಾನೆ ಎನ್ನುವುದು ಅರಿವಿಗೆ ಬಂದಿತು. ಇದೊಂದು ಮೋಸದ ವ್ಯವಹಾರವೆಂದು ಎಚ್ಚೆತ್ತುಕೊಂಡೆ.’

ಇದನ್ನೂ ಓದಿ : Viral Video: ಬಾಹ್ಯಾಕಾಶದಲ್ಲಿ ಹನಿ ಸ್ಯಾಂಡ್​ವಿಚ್ ತಯಾರಿಸಿ ಸವಿದ ಗಗನಯಾತ್ರಿ

ಜಾಗರೂಕತೆಯಿಂದ ಸಂಪರ್ಕದಲ್ಲಿದ್ದೆ. ಕನ್ಸಲ್ಟನ್ಸಿ ಆಫೀಸ್​ ಒಂದರಿಂದ ತಾನು ಫೋನ್ ಮಾಡುತ್ತಿರುವುದಾಗ ತಿಳಿಸಿದ ಮಹಿಳೆಯೊಬ್ಬಳು, ಅವನು ತನ್ನ ಜ್ಯೂನಿಯರ್ ಎಂದು ಹೇಳಿದಳು. ರೂ. 45 ಲಕ್ಷಗಳನ್ನು ಆಕೆಗೆ ಪಾವತಿಸಿದರೆ ಆಕೆ ಕೆನಡಾದಲ್ಲಿ ನೆಲೆಗೊಳ್ಳಲು ಸಹಾಯ ಮಾಡುವುದಾಗಿ ಹೇಳಿದಳು. ಇಷ್ಟೊಂದು ಹಣದಲ್ಲಿ ನಗರದ ಹೊರವಲಯದಲ್ಲಿ ಸೈಟ್​ ಖರೀದಿಸುತ್ತೇನೆ! ಎಂದು ಹೇಳಿ ಇಬ್ಬರನ್ನೂ ಬ್ಲಾಕ್​ ಮಾಡಿಬಿಟ್ಟೆ! ಕೆಲವರು ಅಪ್ಲೀಕೇಶನ್​ಗಳ ಮೂಲಕ ಕೆಲಸ ಮತ್ತು ಪ್ಯಾಕೇಜ್​ಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಇನ್ನೂ ಕೆಲವರು ವಂಚಿಸಲು ಗ್ರಾಹಕರನ್ನು ಹುಡುಕಾಡುತ್ತಿರುತ್ತಾರೆ! ಹುಷಾರಾಗಿರಿ’ ಎಂದಿದ್ದಾರೆ ಈ ಮಹಿಳೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:59 pm, Tue, 22 August 23

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ