Viral Video: ಕಾವಾಲಾ ಕಾವು; ಉಗಾಂಡಾದ ಮಕ್ಕಳ ವಿಡಿಯೋ ಪೋಸ್ಟ್ ಮಾಡಿದ ಗಾಯಕಿ ಶಿಲ್ಪಾ ರಾವ್​

Jailer : ತಿಂಗಳಿಂದ ಈ ಕಾವಾಲಾ ರೀಲ್ ನೋಡುತ್ತಿದ್ದೇವೆ, ಕೊರಿಯಾ, ಜಪಾನ್​ ಮುಂತಾದ ದೇಶಗಳಿಂದ ಯಾರೆಲ್ಲಾ ಈ ಹಾಡಿಗೆ ನರ್ತಿಸುತ್ತಿದ್ದಾರೆ. ಆದರೆ ಈಗ ಈ ಉಗಾಂಡಾದ ಮಕ್ಕಳು ಈ ಹಾಡಿಗೆ ನರ್ತಿಸಿದಷ್ಟು ಸೊಗಸು ಅವರಿಂದ ಹೊಮ್ಮಿಲ್ಲ. ನಿಜಕ್ಕೂ ಈ ಮಕ್ಕಳ ಉತ್ಸಾಹ ಮತ್ತು ಆಸ್ಥೆ ಕಂಡು ಬಹಳ ಖುಷಿಯಾಯಿತು. ಈ ಹಾಡನ್ನು ಹಾಡಿದ ಶಿಲ್ಪಾ ರಾವ್​ ನಿಮಗೆ ಅಭಿನಂದನೆ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ಕಾವಾಲಾ ಕಾವು; ಉಗಾಂಡಾದ ಮಕ್ಕಳ ವಿಡಿಯೋ ಪೋಸ್ಟ್ ಮಾಡಿದ ಗಾಯಕಿ ಶಿಲ್ಪಾ ರಾವ್​
ಕಾವಾಲಾ ಹಾಡಿಗೆ ನರ್ತಿಸುತ್ತಿರುವ ಉಗಾಂಡಾದ ಮಕ್ಕಳು ಮತ್ತು ಕಾವಾಲಾ ಹಾಡಿನ ಗಾಯಕಿ ಶಿಲ್ಪಾ ರಾವ್
Follow us
ಶ್ರೀದೇವಿ ಕಳಸದ
|

Updated on:Aug 24, 2023 | 5:28 PM

Kaavaalaa : ಜಗತ್ತಿನಾದ್ಯಂತ ಕಾವಾಲಾ ತನ್ನ ಕಾವನ್ನು ಏರಿಸಿಕೊಳ್ಳುತ್ತಲೇ ಇದೆ. ಮಕ್ಕಳಾದಿಯಾಗಿ ಈ ಹಾಡಿಗೆ ಬೇರೆ ಬೇರೆ ದೇಶದ ಸಿನಿಮಾಸಕ್ತರು ನರ್ತಿಸುತ್ತಿದ್ದಾರೆ. ಇದೀಗ ಆಫ್ರಿಕಾದ ಉಗಾಂಡಾದ ಹೈಪರ್ಸ್​ ಬಾರ್ನ್​ ಟ್ಯಾಲೆಂಟೆಡ್​ ಗ್ರೂಪ್​ನ ಮಕ್ಕಳು ನಾವು ಯಾರಿಗೇನು ಕಡಿಮೆ ಎಂದು ಭಾರೀ ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ. ಜೈಲರ್​ ಸಿನೆಮಾದ ತಮನ್ನಾ ಭಾಟಿಯಾ (Tamanna Bhatiya) ಅಭಿನಯದ ಈ ಹಾಡಿನ ಮೂಲಗಾಯಕಿ ಶಿಲ್ಪಾ ರಾವ್ (Shilpa Rao), ‘ನಿಮಗೆ ತುಂಬುಪ್ರೀತಿ, ನಿಜಕ್ಕೂ ಬಹಳ ಚೆನ್ನಾಗಿ ನೀವು ನರ್ತಿಸಿದ್ದೀರಿ’ ಎಂದು ಈ ಹಾಡನ್ನು ಖುಷಿಯಿಂದ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಥೈಲ್ಯಾಂಡ್​; ಅರಮನೆಯಂಥ ಸ್ನಾನಗೃಹ, ಅಚ್ಚರಿಗೆ ಒಳಗಾದ ನೆಟ್ಟಿಗರು

ಈ ವಿಡಿಯೋದಲ್ಲಿ ಮಕ್ಕಳು ಬಾರ್ಸಿಲೋನಾ ಜರ್ಸಿಉಡುಪು ಧರಿಸಿದ್ದಾರೆ. ಇವರು ಸಾಕಷ್ಟು ತಾಲೀಮು ನಡೆಸಿದ್ದಾರೆ ಎನ್ನುವುದು ಈ ವಿಡಿಯೋ ನೋಡಿದ ಮೇಲೆ ತಿಳಿಯುತ್ತದೆ. ಅವರ ಮುಖದ ಮೇಲಿನ ಉತ್ಸಾಹ, ಜೀವನಪ್ರೀತಿಯ ಮೂಲ ನೃತ್ಯ ಸಂಗೀತ ಮತ್ತು ಕ್ರೀಡೆ! ಎನ್ನುವುದನ್ನು ನೋಡಿಯೇ ತಿಳಿಯಬೇಕು. ಒಂದು ಮಗು, ‘ಎಫ್​ ಸಿ ಬಾರ್ಸಿಲೋನಾ’ ಎಂದು ಕೂಗುತ್ತದೆ’

ಉಗಾಂಡಾದ ಮಕ್ಕಳು ಕಾವಾಲಾಗೆ ನರ್ತಿಸಿದಾಗ

View this post on Instagram

A post shared by Shilpa Rao (@shilparao)

ಬಾರ್ಕಾ ಮಹಿಳಾ ಆಟಗಾರರು ಈ ಹಾಡಿಗೆ ನೃತ್ಯ ಮಾಡಿದರೆ ಚೆನ್ನಾಗಿರುತ್ತದೆ. ಅಂದಹಾಗೆ ಸ್ಪೇನ್​ ಮಹಿಳಾ ತಂಡವು ವಿಶ್ವಕಪ್​ ಗೆದ್ದುಕೊಂಡಿತು, ಅವರು ತುಂಬಾ ಸುಂದರವಾಗಿದ್ದಾರೆ, ಅವರಲ್ಲಿ ಅಪಾರ ದಯೆ ಇದೆ ಎಂದಿದ್ದಾರೆ ಒಬ್ಬರು. ಸಂಗೀತ, ನೃತ್ಯ ಮತ್ತು ಸಿನೆಮಾದಂಥ ಕಲೆಗೆ ಭಾಷೆಯ ಹಂಗಿಲ್ಲ ಎನ್ನುವುದು ಇದಕ್ಕೇ ನೋಡಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ 

ಇವರೆಲ್ಲರೂ ಕಲೆ, ಕ್ರೀಡೆಯಂಥವುಗಳನ್ನು ತಮ್ಮಷ್ಟಕ್ಕೆ ತಾವೇ ಕಲಿಯುತ್ತಾರೆ. ನಿಜಕ್ಕೂ ಈ ದೇಶದ ಮಕ್ಕಳ ಬಗ್ಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ ಮಗದೊಬ್ಬರು. ಇಷ್ಟು ದಿನಗಳಲ್ಲಿ ಈ ಹಾಡಿಗೆ ಇಷ್ಟು ಮುದ್ದಾಗಿ ನರ್ತಿಸಿದ ಮಕ್ಕಳನ್ನು ಈವತ್ತೇ ನೋಡಿದೆ ಎಂದಿದ್ದಾರೆ ಮತ್ತೊಬ್ಬರು. ಕಾವಾಲಾದ ಎಲ್ಲ ರೀಲುಗಳನ್ನು ಇದು ನಿವಾಳಿಸಿ ಎಸೆಯುತ್ತದೆ ಎಂದಿದ್ದಾರೆ ಇನ್ನೊಬ್ಬರು ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:28 pm, Thu, 24 August 23