Viral Video : ‘ಮಸಾಕಾ ಕಿಡ್ಸ್ ಆಫ್ರಿಕಾನಾ’ದ ಮಕ್ಕಳು ಈ ಸಲ ಜಸ್ಟಿನ್ ಬೈಬರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ
Justin Bieber : ಉಗಾಂಡಾದ ಈ ಸಂಸ್ಥೆಯ ಮಕ್ಕಳ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ. 10 ಮಿಲಿಯನ್ ಜನರು ವೀಕ್ಷಿಸಿದ ಈ ವಿಡಿಯೋ ಅನ್ನು ನಟಿ ಜೆನ್ನಿಫರ್ ಆನಿಸ್ಟನ್ ಇಷ್ಟಪಟ್ಟಿದ್ದಾರೆ.
Viral Video : ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಫ್ರಿಕದ ಈ ಮಕ್ಕಳ ಗುಂಪು ಜಸ್ಟಿನ್ ಬೈಬರ್ ಅವರ ಹಾಡಿಗೆ ಹೆಜ್ಜೆ ಹಾಕಿದೆ. ಸುಮಾರು 10 ಮಿಲಿಯನ್ ವೀಕ್ಷಣೆ ಹೊಂದಿದ ಈ ವಿಡಿಯೋದಲ್ಲಿರುವ ಈ ಪ್ರತಿಭಾವಂತ ಮಕ್ಕಳು ಉಗಾಂಡಾದಲ್ಲಿರುವ ಮಸಾಕಾ ಕಿಡ್ಸ್ ಆಫ್ರಿಕಾನಾ ಸಂಸ್ಥೆಗೆ ಸೇರಿದವು. ಈ ಸಂಸ್ಥೆಯು ಉಗಾಂಡಾದ ಮಕ್ಕಳನ್ನು ಬೆಂಬಲಿಸುವ ಸಂಸ್ಥೆ. ಕ್ಷಾಮ, ಯುದ್ಧ ಮತ್ತು ಇತರೆ ಕಾಯಿಲೆಗಳಿಂದ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡವರ ಮಕ್ಕಳು ಇವರು. ಸಂಸ್ಥೆಯು ಆಗಾಗ ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಈ ಮಕ್ಕಳ ಗಾಯನ, ನರ್ತನದ ವಿಡಿಯೋ ಹಂಚಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈ ಬಾರಿ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ನಟಿ ಜೆನ್ನಿಫರ್ ಇಷ್ಟಪಟ್ಟಿದ್ದಾರೆ.
View this post on Instagram
ಕಳೆದ ವಾರ ಕೂಡ ಈ ಸಂಸ್ಥೆಯ ಬೇರೆ ಮಕ್ಕಳ ಗುಂಪು ‘ಎಲೆಕ್ಟ್ರಿಸಿಟಿ’ ಹಾಡಿಗೆ ಇಂಥದೇ ಜೋಶ್ನೊಂದಿಗೆ ನರ್ತಿಸಿದ್ದರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:13 pm, Tue, 30 August 22