Viral Video: ‘ಎಲೆಕ್ಟ್ರಿಸಿಟಿ’ಯ ಜೋಶ್​ನೊಂದಿಗೆ ಬಂದಿದ್ದಾರೆ ಮಸಾಕಾ ಕಿಡ್ಸ್​ ಆಫ್ರಿಕಾನಾ ಮಕ್ಕಳು!

African Kids : ಯುದ್ಧ, ಬರಗಾಲ, ಕಾಯಿಲೆ ಇನ್ನೇನೋ ಕಾರಣಗಳಿಂದ ತೀರಿಹೋದವರ ಮಕ್ಕಳನ್ನು ಈ ಸಂಸ್ಥೆ ಪೋಷಿಸುತ್ತದೆ. ಅವರ ಬದುಕಲ್ಲಿ ಉತ್ಸಾಹ ತುಂಬಲು ಆಗಾಗ ಇಂಟರ್​ನೆಟ್​ನಲ್ಲಿ ಇಂಥ ಕ್ರಿಯಾಶೀಲ ವಿಡಿಯೋಗಳನ್ನು ಹರಿಬಿಡುತ್ತದೆ.

Viral Video: ‘ಎಲೆಕ್ಟ್ರಿಸಿಟಿ’ಯ ಜೋಶ್​ನೊಂದಿಗೆ ಬಂದಿದ್ದಾರೆ ಮಸಾಕಾ ಕಿಡ್ಸ್​ ಆಫ್ರಿಕಾನಾ ಮಕ್ಕಳು!
ಹೆಂಗೆ ನಮ್ ಕಾನ್ಸರ್ಟ್!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 24, 2022 | 4:06 PM

African Kids : ಮಸಾಕಾ ಕಿಡ್ಸ್ ಆಫ್ರಿಕಾನಾ ಇದು ಉಗಾಂಡಾದಲ್ಲಿರುವ ಅನಾಥ ಮಕ್ಕಳನ್ನು ಬೆಂಬಲಿಸುವ ಒಂದು ಸ್ವಯಂ ಸೇವಾ ಸಂಸ್ಥೆ. ಯುದ್ಧ, ಬರಗಾಲ, ಕಾಯಿಲೆ ಅಥವಾ ಇನ್ನೇನೋ ಕಾರಣಗಳಿಂದ ತೀರಿಹೋದವರ ಮಕ್ಕಳನ್ನು ಇದು ಪೋಷಿಸುತ್ತದೆ.  ಅವರನ್ನು ಬದುಕಲು ಪ್ರೋತ್ಸಾಹಿಸುವ ಉದ್ದೇಶದಿಂದ ಆಗಾಗ ಇಂಟರ್​ನೆಟ್​ನಲ್ಲಿ ಇಂಥ ಕ್ರಿಯಾಶೀಲ ವಿಡಿಯೋಗಳನ್ನು ಹರಿಬಿಟ್ಟು ಆ ಮಕ್ಕಳಲ್ಲಿ ಜೀವನೋತ್ಸಾಹ ತುಂಬಲು ಪ್ರಯತ್ನಿಸುತ್ತಿರುತ್ತದೆ. ನೆಟ್ಟಿಗರಂತೂ ಇಂಥ ವಿಡಿಯೋಗಳನ್ನು ಮನಸಾರೆ ಪ್ರೋತ್ಸಾಹಿಸುತ್ತಿರುತ್ತಾರೆ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Masaka Kids Africana (@masakakidsafricana)

ಸಂಸ್ಥೆಯು ಫೀಲ್ಜ್ ಮತ್ತು ಡೇವಿಡೊ ಅವರ ‘ಎಲೆಕ್ಟ್ರಿಸಿಟಿ’ ಹಾಡಿಗೆ ಈ ಮೂವರು ಮಕ್ಕಳ ನೃತ್ಯ ಮತ್ತು ಲಿಪ್​ಸಿಂಕ್​ ಮಾಡುವ ವಿಡಿಯೋವನ್ನು ಭಾನುವಾರದಂದು ಪೋಸ್ಟ್ ಮಾಡಿದೆ. ಒಬ್ಬ ಹುಡುಗ ಕಟ್ಟಿಗೆಯನ್ನು ಮೈಕ್​ನಂತೆ ಹಿಡಿದು ಲಿಪ್​ ಸಿಂಕ್​ ಮಾಡಿ ಹಾಡುತ್ತಿದ್ದರೆ, ಇನ್ನೊಬ್ಬ ಬಣ್ಣದ ಬಕೆಟ್‌ಗಳಿಂದ ಮಾಡಿದ ಡ್ರಮ್‌ಗಳನ್ನು ನುಡಿಸುತ್ತಿದ್ದಾನೆ.  ಮೂರನೆಯವನು ನರ್ತಿಸುತ್ತಿದ್ದಾನೆ. ಈ ವೀಡಿಯೊ ಐದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಮತ್ತು 3,28,000 ಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.

Instagram ನಲ್ಲಿ Masaka Kids Africana ಸುಮಾರು 4.4 ಮಿಲಿಯನ್ ಫಾಲೋವರ್ಸ್​ ಅನ್ನು ಹೊಂದಿದೆ. ಜನಪ್ರಿಯ ಹಾಡುಗಳಿಗೆ ಮಕ್ಕಳ ಪ್ರದರ್ಶನದ ವೀಡಿಯೊಗಳನ್ನು ಈ ಸಂಸ್ಥೆಯು ನಿಯಮಿತವಾಗಿ ಪೋಸ್ಟ್ ಮಾಡುತ್ತದೆ. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ದಿಲ್ ಧಡಕ್ನೆ ದೋ ಚಲನಚಿತ್ರದ ಪ್ರಸಿದ್ಧ ಬಾಲಿವುಡ್ ಹಾಡಿಗೆ ಮಕ್ಕಳ ನೃತ್ಯದ ವಿಡಿಯೋ ಅನ್ನು ಪೋಸ್ಟ್ ಮಾಡಿತ್ತು. ಈ ವಿಡಿಯೋ 6 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಮತ್ತು 4,10,000 ಕ್ಕೂ ಹೆಚ್ಚು ಲೈಕ್ಸ್​ ಪಡೆದಿತ್ತು.

ಮತ್ತಷ್ಟು ಇಂಥ ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 4:01 pm, Wed, 24 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ