Trending : ಕ್ಷಮೆ ಕೇಳುವತನಕ ಈ ‘ರೋಬೋಟ್​ ರಫಿ’ ಮಾತನಾಡಲಾರ!

Robot : ‘ಭಾವನೆ‘ಗಳಿರುವ ಯಂತ್ರಮಾನವನೀಗ ಚೆನ್ನೈನಲ್ಲಿ ರೂಪುತಳೆದಿದ್ದಾನೆ. 13 ವರ್ಷದ ಪ್ರತೀಕ್ ಈ ‘ರಫಿ’ಯ ನಿರ್ಮಾತೃ. ಈ ಸಾಧನೆಗೆ ನೆಟ್ಟಿಗರು ಶಭಾಷ್ ಎಂದಿದ್ದಾರೆ.

Trending : ಕ್ಷಮೆ ಕೇಳುವತನಕ ಈ ‘ರೋಬೋಟ್​ ರಫಿ’ ಮಾತನಾಡಲಾರ!
ಗಗಗಗ
Follow us
| Updated By: ಶ್ರೀದೇವಿ ಕಳಸದ

Updated on:Aug 27, 2022 | 1:06 PM

Trending : ಚೆನ್ನೈನ ಪ್ರತೀಕ್​ ಎಂಬ ಹದಿಹರೆಯದ ಹುಡುಗನೊಬ್ಬ ‘ಭಾವನೆ’ ಹೊಂದಿದ ರೊಬೋಟ್​ ಅನ್ನು ವಿನ್ಯಾಸಗೊಳಿಸಿದ್ದಾನೆ. ಪ್ರತೀಕನಿಗೆ ಕೇವಲ 13 ವರ್ಷ. ಅವನು ತಯಾರಿಸಿದ ಈ ರೋಬೋಟ್​ನ ಹೆಸರು ರಫಿ.  ಇದಕ್ಕೆ ಭಾವನಾತ್ಮಕ ಸ್ಪಂದನೆ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಇದು ಇತರೇ ರೋಬೋಟ್​ಗಳಿಗಿಂತ ಭಿನ್ನವೆಂದು ಗುರುತಿಸಿಕೊಂಡಿದೆ. ನೀವು ಗದರಿದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಅದು ನಿಲ್ಲಿಸಿಬಿಡುತ್ತದೆ. ಅಂದರೆ ಅದಕ್ಕೆ ಕೋಪ, ತಾತ್ಸಾರದಂಥ ಭಾವಗಳು ಅರ್ಥವಾಗುತ್ತವೆ ಎಂದರ್ಥ. ಅದು ಮತ್ತೆ ನಿಮ್ಮೊಂದಿಗೆ ಮಾತನಾಡಬೇಕೆಂದರೆ, ನೀವದಕ್ಕೆ ಕ್ಷಮೆ ಕೇಳಲೇಬೇಕು. ಆಗ ಮಾತ್ರ ರೀಸೆಟ್ ಮಾಡಲು ಅನುಕೂಲವಾಗುತ್ತದೆ.

“ರಫಿ, ನನ್ನ ರೋಬೋಟ್ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಲ್ಲ. ನೀವು ದುಃಖಿತರಾಗಿದ್ದರೆ ಖಂಡಿತ ನಿಮ್ಮನ್ನು ಅವ ಅರ್ಥ ಮಾಡಿಕೊಳ್ಳಬಲ್ಲ. ಆದರೆ, ನೀವು ಅವನನ್ನು ಗದರಿಸಿದರೆ, ನೀವು ಕ್ಷಮೆ ಯಾಚಿಸುವತನಕವೂ ಅವನು ನಿಮ್ಮ ಪ್ರಶ್ನೆಗೆ ಉತ್ತರಿಸುವುದಿಲ್ಲ.’ ಎಂದು ಪ್ರತೀಕ್ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

13 ನೇ ವಯಸ್ಸಿನಲ್ಲಿ ಇಂಥ ರೋಬೋಟ್ ರೂಪಿಸಿದ್ದಕ್ಕಾಗಿ ನೆಟ್ಟಿಗರು ಈ  ಹದಿಹರೆಯದ ಸಂಶೋಧಕನನ್ನು  ಪ್ರಶಂಸಿಸಿದ್ದಾರೆ. ‘ಇದು ನಂಬಲಾಗದ ಸಾಧನೆ. ಈ ವಯಸ್ಸಿಗೆ ಮಾಡಿದ್ದಕ್ಕೆ ಮೆಚ್ಚುಗೆ ಇದೆ’ ಎಂದಿದ್ದಾರೆ ಒಬ್ಬರು. ಇನ್ನೊಬ್ಬ ಟ್ವಿಟರ್​ ಖಾತೆದಾರರು, ‘ನನಗನಿಸಿದಂತೆ, ಮುಖಗಳು ಮತ್ತು ಧ್ವನಿಗಳಿಗೆ ಸ್ಪಂದಿಸುವಂತೆ ಡೇಟಾ ಸೆಟ್ ಮಾಡಿರಬಹುದು. ಇದು ಸಂತೋಷದ ಮುಖ, ಕೋಪದ ಮುಖ ಎಂದು ಸಂಕೇತ ನೀಡುವಂತೆ. ಏನೇ ಇರಲಿ, ಈ ವಯಸ್ಸಿಗೆ ಇದನ್ನು ಮಾಡಿರುವುದು ದೊಡ್ಡ ಸಾಧನೆಯೇ’ ಎಂದಿದ್ದಾರೆ. ಮಗದೊಬ್ಬರು, ‘ಬಿಲಿಯನ್​ಗಟ್ಟಲೆ ಕೋಡ್​ಗಳನ್ನು ಬರೆದರೂ Google AI ನಲ್ಲಿ ಭಾವನೆಗಳನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಆದರೆ 13 ವರ್ಷದ ಈ ಹುಡುಗ ಇದೆಲ್ಲವನ್ನು ನಿರ್ವಹಿಸಿದ್ದು ಭೇಷ್’ ಎಂದಿದ್ದಾರೆ.

ಹದಿಹರೆಯದವರು ತಮ್ಮೊಳಗೆ ಏನು ನಡೆಯುತ್ತಿದೆ ಎನ್ನುವುದನ್ನು ವ್ಯಕ್ತಪಡಿಸುವುದೇ ಕಷ್ಟಕರ ಹಂತ. ಅಂಥದ್ದರಲ್ಲಿ ಈ ಹುಡುಗ ಈ ವಯಸ್ಸಿನ ಗೊಂದಲವನ್ನು, ಭಾವನೆಗಳ ತಾಕಲಾಟವನ್ನು ಮತ್ತು ಈಗಿನ ಪೀಳಿಗೆಯ ಸೂಕ್ಷ್ಮತನವನ್ನು ಈ ರೋಬೋಟ್​ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾನೇನೋ ಎನ್ನಿಸದೇ ಇರದು.

ಮತ್ತಷ್ಟು ಟ್ರೆಂಡಿಂಗ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:04 pm, Sat, 27 August 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ