Viral Video: ಆಕಾಶಕ್ಕೆ ಈ ಬಣ್ಣದ ಕುಂಚಿಗೆ ಕಟ್ಟಿದರಾರೋ? ಚೀನಾದಲ್ಲಿ ಮೂಡಿದ ಕಾಮನಬಿಲ್ಲು
Rainbow : ಇಷ್ಟು ದಟ್ಟವಾದ ಕಾಮನಬಿಲ್ಲು ಮೂಡಿದ್ದನ್ನು ಎಂದಾದರೂ ನೋಡಿದ್ದೀರಾ? ಹಾಗಿದ್ದರೆ ಓದಿ, ನೋಡಿ ಇದು ಯಾಕೆ ಇಷ್ಟೊಂದು ಗಾಢವರ್ಣಗಳಿಂದ ಕೂಡಿತ್ತು ಎಂದು.
Viral Video : ಇದೊಂದು ಅಪರೂಪದ ಕಾಮನಬಿಲ್ಲು. ಚೀನಾದ ಬಾನಂಗಳದಲ್ಲಿ ಕಂಡಿದೆ. ಇಷ್ಟು ಗಾಢವರ್ಣಗಳಲ್ಲಿ ಇದು ಮೂಡಿದಾಗ ನೋಡುಗರಲ್ಲಿ ತೀವ್ರ ಸಂಚಲನ ಮೂಡದಿರಲು ಸಾಧ್ಯವೆ? ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಪ್ರಕೃತಿಯ ಈ ವಿಸ್ಮಯಕ್ಕೆ ಯಾರು ಮನಸೋಲದಿರಲು ಸಾಧ್ಯ? ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ನಲ್ಲಿ ಪನೋರಮಾ ಶಾಟ್ನೊಂದಿಗೆ ವಿಡಿಯೋ ಆರಂಭವಾಗುತ್ತದೆ.
Rainbow colored scarf cloud over Haikou city in China pic.twitter.com/ewKmQjsiIE
ಇದನ್ನೂ ಓದಿ— Sunlit Rain (@Earthlings10m) August 26, 2022
ವಿಡಿಯೋ 27.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸಾವಿರಾರು ಪ್ರತಿಕ್ರಿಯೆಗಳನ್ನು ಹೊಂದಿದೆ. ನ್ಯೂಫ್ಲೇರ್ ಪ್ರಕಾರ, ಈ ವಿಡಿಯೋ ಅನ್ನು ಆಗಸ್ಟ್ 21 ರಂದು ಹೈನಾನ್ ಪ್ರಾಂತ್ಯದ ಹೈಕೌ ನಗರದಲ್ಲಿ ಚಿತ್ರೀಕರಿಸಲಾಗಿದೆ. ‘ಈ ಸ್ಕಾರ್ಫ್ ಕ್ಲೌಡ್ ಅನ್ನು ಪೈಲಿಯಸ್ ಎಂದೂ ಕರೆಯುತ್ತಾರೆ, ತೇವಾಂಶವುಳ್ಳ ಗಾಳಿ ಕ್ರಮೇಣ ಘನೀಕರಣಗೊಳ್ಳುತ್ತಾ ಹೋಗುತ್ತದೆ. ಸೂರ್ಯನ ಬೆಳಕು ಬಲಕೋನದಿಂದ ಬಿದ್ದಾಗ ಮೋಡದಲ್ಲಿನ ಹನಿಗಳು ಮತ್ತು ಮಂಜುಗಡ್ಡೆಯ ಸ್ಫಟಿಕಗಳ ನಡುವೆ ಬೆಳಕು ಮಿಳಿತಗೊಂಡು ಕಾಮನಬಿಲ್ಲಿನ ಬಣ್ಣವನ್ನು ಸೃಷ್ಟಿಸುತ್ತದೆ.’
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:36 pm, Tue, 30 August 22