Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕೋಕೋ ಲೀಫಿ ಸ್ಟ್ರಾ’ ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ

Ecofriendly : ಈ ಕೊಳವೆಗಳಿಗೆ ಮಣಿಗಂಡನ್​ ಕೋಕೋ ಲೀಫಿ ಸ್ಟ್ರಾಸ್​ ಎಂದು ನಾಮಕರಣ ಮಾಡಿದ್ದಾರೆ. ಬಿಸಿ ಪಾನೀಯಗಳಲ್ಲಿ ಅರ್ಧ ಗಂಟೆ, ತಂಪು ಪಾನೀಯಗಳಲ್ಲಿ 6 ಗಂಟೆಯತನಕ ಇವು ಹಾಗೇ ಇರುತ್ತವೆ. ಸದ್ಯ ದಿನಕ್ಕೆ 10,000ದಂತೆ 12ಇಂಚುಗಳ ಸ್ಟ್ರಾ ತಯಾರಿಸಲಾಗುತ್ತಿದೆ. ಇವುಗಳ ಬೆಲೆ ಒಂದಕ್ಕೆ ರೂ. 1.5ರಿಂದ ರೂ. 3. ಗ್ರಾಮೀಣ ಮಹಿಳೆಯರು ಇವುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.

Viral Video: 'ಕೋಕೋ ಲೀಫಿ ಸ್ಟ್ರಾ' ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ
ಎವ್ಲೋಗಿಯಾ ಎಕೋ ಕೇರ್ ಸಂಸ್ಥೆಯಿಂದ ತಯಾರಿಸಲ್ಪಟ್ಟ ತೆಂಗಿನ ಎಲೆಗಳ ಸ್ಟ್ರಾ
Follow us
ಶ್ರೀದೇವಿ ಕಳಸದ
|

Updated on:Aug 24, 2023 | 7:07 PM

Straw: ನೀರು, ಜ್ಯೂಸ್​​, ಎಳನೀರು ಮತ್ತು ಮುಂತಾದ ಪಾನೀಯಗಳನ್ನು ಕುಡಿಯಲು ಪ್ಲಾಸ್ಟಿಕ್​ ಮತ್ತು ಪೇಪರ್​ನಿಂದ ಮಾಡಿದ ಸ್ಟ್ರಾಗಳನ್ನು ಬಳಸದೇ ಗತ್ಯಂತರವೇ ಇಲ್ಲವೆ? ಪ್ಲಾಸ್ಟಿಕ್​ ಬಳಕೆಯಿಂದ ನಮ್ಮ ಮನಸ್ಸು, ದೇಹದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತದೆ ಎಂಬ ಅರಿವಿದ್ದರೂ ನಾವು ಪರ್ಯಾಯದ ಕಡೆ ಗಮನ ಹರಿಸುತ್ತಿಲ್ಲವೇಕೆ? ನಮ್ಮನ್ನು ಸುತ್ತುವರಿದ ಜೀವಜಂತುಗಳು ಮತ್ತು ಪ್ರಾಣಿಪಕ್ಷಿಗಳು, ಪರಿಸರ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ನಮ್ಮ ಆಯ್ಕೆಯೇ ತಾನೆ? ಈ ಸ್ಟೋರಿ ಓದಿ. ಬೆಂಗಳೂರಿನಲ್ಲಿರುವ ಎವ್ಲೋಗಿಯಾ ಇಕೋ ಕೇರ್ (Evlogia Eco Care) ಪ್ಲಾಸ್ಟಿಕ್​ ಸ್ಟ್ರಾಗಳಿಗೆ ಬದಲಾಗಿ ಪರಿಸರಸ್ನೇಹಿ ಸ್ಟ್ರಾ ತಯಾರಿಸುತ್ತಿದೆ. ಬಿದ್ದ ತೆಂಗಿನಗರಿಗಳಿಂದ ದಿನಕ್ಕೆ 10,000 ಸ್ಟ್ರಾಗಳನ್ನು ಇದು ತಯಾರಿಸುತ್ತದೆ. ಈ ಸಂಸ್ಥೆಯ ಮಾಲಿಕರಾದ ಮಣಿಗಂಡನ್​ ಕುಮಾರಪ್ಪನ್ (Manigandan Kumarappan) ಮತ್ತು ರಾಧಾ ಕಣ್ಣನ್ ದಂಪತಿ​ ಗ್ರಾಮೀಣ ಹೆಣ್ಣುಮಕ್ಕಳ ಸ್ವಾವಲಂಬಿತನವನ್ನು ಈ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಈ ಮೊದಲು ನಗರಪ್ರದೇಶದಲ್ಲಿ ಎಳನೀರು ಸರಬರಾಜು ಮಾಡುವ ಟೆಂಕೋ ಎಂಬ ಕಂಪೆನಿಯನ್ನು ನಿರ್ವಹಿಸುತ್ತಿದ್ದೆ. ಆಗ ಗ್ರಾಹಕರು ಸ್ಟ್ರಾಗಳನ್ನು ಕೇಳುತ್ತಿದ್ದರು. ಪ್ಲಾಸ್ಟಿಕ್​ ಸ್ಟ್ರಾ ಕೊಡಲು ಮನಸ್ಸಾಗುತ್ತಿರಲಿಲ್ಲ ಇನ್ನು ಪೇಪರ್​ ಸ್ಟ್ರಾಗಳು ಒದ್ದೆಯಾಗಿಬಿಡುತ್ತಿದ್ದವು. ಆಗ ಇದಕ್ಕೆ ಏನಾದರೂ ಪರ್ಯಾಯ ಕಂಡುಕೊಳ್ಳಬೇಕು ಎನ್ನಿಸಿತು. ಇದೆಲ್ಲ ಯೋಚಿಸುತ್ತಿರುವಾಗ ನೆಲಕ್ಕೆ ಬಿದ್ದ ತೆಂಗಿನಗರಿಗಳು ಮತ್ತು ಕೆಲವೆಡೆ ಅವುಗಳನ್ನು ಸುಡುತ್ತಿದ್ದುದು ಕಿರಿಕಿರಿ ಮಾಡುತ್ತಿದ್ದವು. ಇದಕ್ಕೇನಾದರೂ ಪರಿಹಾರ ಕಂಡುಹಿಡಿಯಬೇಕು ಎಂದು ಉದ್ದೇಶಿಸಿ ಬಿದ್ದ ತೆಂಗಿನಗರಿಗಳ ಸಂಗ್ರಹದಲ್ಲಿ ತೊಡಗಿದೆ.’ ಎನ್ನುತ್ತಾರೆ ಮಣಿಗಂಡನ್​.

ತೆಂಗಿನಗರಿಗಳಿಂದ ಸ್ಟ್ರಾ ತಯಾರಿಸುತ್ತಿವ ಬಗೆ ನೋಡಿ

ಇದೇ ಹೊತ್ತಿಗೆ ಮಣಿಗಂಡನ್​ ಅವರಿಗೆ ತೆಂಗಿನ ಗರಿಗಳಿಂದ ಸ್ಟ್ರಾ ತಯಾರಿಸಬಹುದು ಎಂಬ ಸುದ್ದಿ ಇವರ ಕಣ್ಣಿಗೆ ಬಿದ್ದಿತು. ಮುಂದಿನ ದಿನ ತಜ್ಞರೊಂದಿಗೆ ಮಾತನಾಡಿ ತಂತ್ರಜ್ಞಾನದ ಬಗ್ಗೆ ಅರ್ಥ ಮಾಡಿಕೊಂಡು ಸಂಶೋಧನೆಗೆ ತೊಡಗಿದರು. ಎಂಜಿನಿಯರುಗಳ ಸಹಾಯದಿಂದ ಈ ಉದ್ಯಮವನ್ನು ಪ್ರಾರಂಭಿಸಿಯೇ ಬಿಟ್ಟರು. ತಮಿಳುನಾಡಿನ ನಾಲ್ಕು ಬೇರೆ ಬೇರೆ ಫಾರ್ಮ್​ಗಳಿಂದ ತೆಂಗಿನ ಗರಿಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ ಬೆಂಗಳೂರಿನ ಉತ್ಪಾದನಾ ಘಟಕಕ್ಕೆ ಕಳುಹಿಸಲಾಗುತ್ತದೆ.

ಎವ್ಲೋಗಿಯಾದ ಸಿಬ್ಬಂದಿಯೊಂದಿಗೆ ಮಣಿಗಂಡನ್

ಸ್ಟ್ರಾಗಳನ್ನು ಹೇಗೆ ತಯಾರಿಸಲಾಗುತ್ತದೆ?

ಗರಿಗಳಿಂದ ತೆಂಗಿನ ಎಲೆಗಳನ್ನು ಬೇರ್ಪಡಿಸಿ 120 ಡಿಗ್ರೀ ಸೆಲ್ಸಿಯಶ್​ನಲ್ಲಿ ಶಾಖ ಹಾಯಿಸಲಾಗುತ್ತದೆ. ನಂತರ ಯಂತ್ರದಿಂದ ಬೆಚ್ಚಿಗಿನ ಎಲೆಗಳನ್ನು ಸುರುಳಿಸುತ್ತಲಾಗುತ್ತದೆ. ತಣಿದ ನಂತರ ಕಟರ್​ ಬಳಸಿ ಬೇಕಾದ ಗಾತ್ರದಲ್ಲಿ ಕತ್ತರಿಸಲಾಗುತ್ತದೆ. ತಯಾರಾದ ಈ ಕೊಳವೆಗಳಿಗೆ ಮಣಿಗಂಡನ್​ ಕೋಕೋ ಲೀಫಿ ಸ್ಟ್ರಾಸ್​ ಎಂದು ನಾಮಕರಣ ಮಾಡಿದ್ದಾರೆ. ಬಿಸಿ ಪಾನೀಯಗಳಲ್ಲಿ ಅರ್ಧ ಗಂಟೆ, ತಂಪು ಪಾನೀಯಗಳಲ್ಲಿ 6 ಗಂಟೆಯತನಕ ಇವು ಹಾಗೇ ಇರುತ್ತವೆ. ಸದ್ಯ 12ಇಂಚುಗಳ ಸ್ಟ್ರಾ ತಯಾರಿಸಲಾಗುತ್ತಿದೆ. ಇವುಗಳ ಬೆಲೆ ಒಂದಕ್ಕೆ ರೂ. 1.5ರಿಂದ ರೂ. 3.

ಗ್ರಾಮೀಣ ಮಹಿಳೆಯರ ಸಬಲೀಕರಣ

ಆರಂಭದಲ್ಲಿ ಮೂರು ಮಹಿಳೆಯರನ್ನು ತೊಡಗಿಸಿಕೊಂಡು ಯಂತ್ರೋಪಕರಣ ಬಳಕೆ ಕುರಿತು ತರಬೇತಿ ನೀಡಲಾಯಿತು. ಇದೀಗ ಪೂರ್ಣಪ್ರಮಾಣದಲ್ಲಿ 15 ಮಹಿಳೆಯರನ್ನು ನೇಮಿಸಿಕೊಳ್ಳಾಗಿದೆ. ಇದೀಗ ಈ ಉತ್ಪಾದನಾ ಘಟಕವು ಪ್ರತಿ ತಿಂಗಳು 2,50,000 ಸ್ಟ್ರಾಗಳನ್ನು ಉತ್ಪಾದಿಸುತ್ತಿದೆ, ಭಾರತ, ಅಮೆರಿಕಾ, ಕೆನಡಾ ಮುಂತಾದ ದೇಶಗಳಿಗೆ ಇವು ರಫ್ತಾಗುತ್ತವೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 7:05 pm, Thu, 24 August 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ