Viral Optical Illusion: ಈ ಮರದ ತುಂಡುಗಳಲ್ಲಿ ಬೆಕ್ಕು ಅಡಗಿದೆ, ಹುಡುಕುವಿರಾ?

Brain Activity: ಎಲ್ಲರೂ ಹಬ್ಬದ ಮೂಡ್​ನಲ್ಲಿದ್ದೀರಿ, ಆಫೀಸಿನಲ್ಲಿ ಕೆಲಸದ ಒತ್ತಡ ಬೇರೆ. ಆದರೂ ವಾರಾಂತ್ಯವೂ ಬರುತ್ತಿದೆ ಎಂಬ ಸಮಾಧಾನವೂ ಇದೆ. ಎಲ್ಲದರ ಮಧ್ಯೆ ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟರೆ ಹೇಗೆ? ಈ ಮರದ ತುಂಡುಗಳ ಮಧ್ಯೆ ಒಂದು ಪುಟಾಣಿ ಬೆಕ್ಕು ಅಡಿಗಿದೆ. ಅದನ್ನು ಕಂಡುಹಿಡಿಯುವಿರಾ? ನಿಮಗಿರುವ ಸಮಯ 8 ಸೆಕೆಂಡುಗಳು.

Viral Optical Illusion: ಈ ಮರದ ತುಂಡುಗಳಲ್ಲಿ ಬೆಕ್ಕು ಅಡಗಿದೆ, ಹುಡುಕುವಿರಾ?
ಇಲ್ಲಿ ಬೆಕ್ಕೊಂದು ಅಡಗಿದೆ, ಹುಡುಕಿ.
Follow us
ಶ್ರೀದೇವಿ ಕಳಸದ
|

Updated on:Aug 25, 2023 | 11:36 AM

Optical Illusion: ವಾರದ ಆಲಸ್ಯ, ಸುಸ್ತು, ಬೇಸರವನ್ನೆಲ್ಲ ಶನಿವಾರ ಭಾನುವಾರದಲ್ಲಿ ಕಳೆದು ಮತ್ತೊಂದು ಸೋಮವಾರಕ್ಕೆ ಚೈತನ್ಯ ತಂದುಕೊಳ್ಳಲೇಬೇಕು. ಹಾಗಾಗಿ ಎಲ್ಲರ ಚಿತ್ತವೀಗ ವಾರಾಂತ್ಯದ ರಜೆಯೆಡೆಗೆ. ಈವತ್ತು ಶುಕ್ರವಾರ. ಕೆಲವರಿಗೆ ವರಮಹಾಲಕ್ಷ್ಮೀ ದಯೆಯಿಂದ ರಜೆ ಇದೆ. ಇನ್ನೂ ಕೆಲಮಂದಿ ಮನಸ್ಸಿಲ್ಲದೇ ಕೆಲಸ ಮಾಡುತ್ತ ಶುಕ್ರವಾರ ಯಾವಾಗ ಮುಗಿಯತ್ತದೆಯೋ ಎಂದು ಕಾಯುತ್ತಿದೆ. ಈ ಕಾಯುವವರಿಗಾಗಿ ಇಲ್ಲೊಂದು ಭ್ರಮಾತ್ಮಕ ಚಿತ್ರವಿದೆ. ಇಲ್ಲಿ ಬಿದ್ದಿರುವ ಮರಮುಟ್ಟುಗಳಲ್ಲಿ ಬೆಕ್ಕೊಂದು (Cat) ಅಡಗಿದೆ. ನೆಟ್ಟಿಗರು 8 ಸೆಕೆಂಡುಗಳಲ್ಲಿ ಈ ಬೆಕ್ಕು ಹುಡುಕುವಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ ಕೆಲವರು ಇಲ್ಲ. ನೀವು?

ಇದನ್ನೂ ಓದಿ : Viral Video: ಕುರುಕ್ಷೇತ್ರ; ಸುಖವಿಂದರ್ ಸಿಂಗ್​ ಹಾಡು ಇದೀಗ ಟ್ರೆಂಡಿಂಗ್​ನಲ್ಲಿ, ವಾಹ್​ ಎಂದ ನೆಟ್ಟಿಗರು  

ಇಂಥ ಭ್ರಮಾತ್ಮಕ ಚಿತ್ರಗಳು ಸ್ಮರಣಶಕ್ತಿಯ ಹೆಚ್ಚಳಕ್ಕೆ ಸಹಾಯ ಮಾಡುತ್ತವೆ. ಮೆದುಳನ್ನು ಚುರುಕುಗೊಳಿಸುತ್ತವೆ. ನಿಯಮಿತವಾಗಿ ಇಂಥ ಚಟುವಟಿಕೆಗಳಲ್ಲಿ ತೊಡಗುವುದರಿಂದ ವೃದ್ಧಾಪ್ಯದಲ್ಲಿ ಸ್ಮರಣಶಕ್ತಿಯ ಸಮಸ್ಯೆಯುಂಟಾಗಲಾರದು. ಹಾಗಾಗಿ ಸೃಜನಶೀಲಚಟುವಟಿಕೆಗಳಲ್ಲಿ ನಿಯಮಿತವಾಗಿ ತೊಡಗಿಕೊಳ್ಳುವುದು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಚಿತ್ರವನ್ನು ಗಮನಿಸಿ ಬೆಕ್ಕನ್ನು ಹುಡುಕಿ

Viral Optical Illusion Find the cat

ಬೆಕ್ಕನ್ನು ಹುಡುಕಿ

ಒತ್ತಡಕ್ಕೆ ಬಿದ್ದ ಮನಸ್ಸಿಗೆ ವಿಶ್ರಾಂತಿ ಬೇಕು. ಒತ್ತಡ ಕಡಿಮೆ ಆಗುತ್ತಿದ್ದಂತೆ ಮನಸ್ಸು ನಿರಾಳವಾಗುತ್ತದೆ. ಆದರೆ ಮೆದುಳು ಚುರುಕುಗೊಳ್ಳಲು ಇಂಥ ಚಟುವಟಿಕೆಗಳು ಬೇಕು. 8 ಸೆಕೆಂಡುಗಳಲ್ಲಿ ಈ ಮೇಲಿನ ಚಿತ್ರದಲ್ಲಿ ನೀವು ಬೆಕ್ಕನ್ನು ಹುಡುಕುವಲ್ಲಿ ಸಮರ್ಥರಾದಿರೆ? ಈ ಮೂಲಕ ನಿಮ್ಮ ದೃಷ್ಟಿ ಮತ್ತು ಬುದ್ಧಿಯ ಚುರುಕುತನವನ್ನು ಪರೀಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ : Viral Video: ‘ಕೋಕೋ ಲೀಫಿ ಸ್ಟ್ರಾ’ ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ

8 ಸೆಕೆಂಡುಗಳಲ್ಲಿ ಸವಾಲಿಗೆ ಉತ್ತರ ಕಂಡು ಹಿಡಿಯುವುದು ಅನೇಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿಮಗೆ? ಇನ್ನೂ ಸಾಧ್ಯವಾಗಿಲ್ಲವೆಂದರೆ ಸಮಯವನ್ನು ವಿಸ್ತರಿಸಿಕೊಳ್ಳಿ. ನಿಮ್ಮ ಸಮಯ ಇದೀಗ ಶುರು! ಬೆಕ್ಕು ಯಾವಾಗಲೂ ನಮ್ಮ ಕಣ್ಣಿಗೆ ಬೀಳದಂತೆ ಅಡಗಿಕೊಳ್ಳುತ್ತದೆ, ಆದರೆ ನಾವು ಅದರ ಕಣ್ಣಿಗೆ ಮಾತ್ರ ಬೀಳುತ್ತಿರುತ್ತೇವೆ. ಈಗಲೂ ಹಾಗೆಯೇ ಆಗಿದೆ. ಆಗಲಿ, ಈ ಕೆಳಗಿನ ಚಿತ್ರವನ್ನು ನೋಡಿ ಬೆಕ್ಕು ಅಡಗಿದ ಜಾಗ ತಿಳಿಯುತ್ತದೆ!

ಇಲ್ಲಿದೆ ಬೆಕ್ಕು!

Viral Optical Illusion Find the cat

ಸಿಕ್ಕಿತೇ ಬೆಕ್ಕು?

ಝೂಮ್ ಮಾಡಿ ನೋಡಿದ ಮೇಲೆ ನಿಮಗೆ ಬೆಕ್ಕು ಕಂಡಿರುತ್ತದೆ ತಾನೆ? ಆದರೂ ಮೊದಲ ಸಲಕ್ಕೆ ಬೆಕ್ಕನ್ನು ಗುರುತಿಸುವುದು ಕಷ್ಟವೇ. ಮತ್ತಷ್ಟು ಭ್ರಮಾತ್ಮಕ ಚಿತ್ರಗಳೊಂದಿಗೆ ಮತ್ತೆ ಸಿಗೋಣ.

ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:33 am, Fri, 25 August 23