Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು

Stray Dog : ಬೀದಿನಾಯಿಯೊಂದು ನೀರಡಿಸಿ ಇಲ್ಲಿ ಬಂದಿದೆ. ನಲ್ಲಿಯಿಂದ ನೀರು ಬರುತ್ತದೆ ಎನ್ನುವಷ್ಟು ತಿಳಿವಳಿಕೆ ಸಹಜ. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ನಲ್ಲಿ ತಿರುಗಿಸಿ ನಾಯಿಗೆ ಸಹಾಯ ಮಾಡಿದ್ದಾರೆ. ಮೊದಲು ಹೆದರಿಕೊಂಡ ನಾಯಿ ಕ್ರಮೇಣ ತಣಿವು ತೀರಿಸಿಕೊಂಡಿದೆ. ಮಹಿಳೆಯ ಸಹಾನುಭೂತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು
ನೀರಡಿಸಿರುವ ಬೀದಿನಾಯಿಗೆ ನೀರು ಕುಡಿಯಲು ಸಹಾಯ ಮಾಡಿದ ಮಹಿಳೆ
Follow us
ಶ್ರೀದೇವಿ ಕಳಸದ
|

Updated on:Aug 25, 2023 | 3:41 PM

Dog Lover: ಸಾಕಿದ ನಾಯಿಗಳ ಹಸಿವು ಹೊತ್ತುಹೊತ್ತಿಗೆ ತಣಿಯುತ್ತದೆ. ಆದರೆ ಬೀದಿನಾಯಿಗಳದ್ದು (Stray Dogs) ? ಎಲ್ಲಿ ನೀರು ಸಿಗುತ್ತದೋ ಅಲ್ಲಿ ಕುಡಿಯಬೇಕು, ರಸ್ತೆಯಲ್ಲಿ ಏನಾದರೂ ಕಣ್ಣಿಗೆ ಬಿದ್ದರೆ ತಿನ್ನಬೇಕು. ಜಾಗ ಸಿಕ್ಕಲ್ಲಿ ಮಲಗಬೇಕು. ಹೇಳಿಕೇಳಿ ಬೀದಿನಾಯಿ, ಕಂಡಲ್ಲೆಲ್ಲ ಓಡಿಸುವವರೇ, ತಿನ್ನಲು, ಕುಡಿಯಲು ಏನಾದರೂ ಸಿಕ್ಕೀತೆಂದು ಸುಮ್ಮನೇ ಅವುಗಳು ಮೂಸಿದರೂ ಸರಿ, ಎಲ್ಲಿಂದಲೋ ಕಲ್ಲುಗಳು ಬಂದು ಬೀಳುತ್ತವೆ. ಇಂಥ ಅನಿಶ್ಚಿತತೆಯ ನಡುವೆಯೇ ಬೀದಿನಾಯಿಗಳು ರೊಚ್ಚಿಗೇಳುವುದು, ಕಚ್ಚುವುದು, ಬೆನ್ನಟ್ಟುವುದು ಇನ್ನೂ ಏನೆಲ್ಲವೂ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ನಾಯಿ ನಲ್ಲಿಯ ಬಳಿ ನೀರು ಕುಡಿಯಲು ಹವಣಿಸುತ್ತಿದೆ. ಇದನ್ನು ಕಂಡ ಮಹಿಳೆಯೊಬ್ಬರು ನಲ್ಲಿಯನ್ನು ತಿರುಗಿಸಿ ನೀರು ಕುಡಿಲು ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ : Viral Video: ಬಿಹಾರ; ವಿದೇಶದಿಂದ ಮರಳಿದ ಗಂಡ ತಲಾಖ್​ ನೀಡಿದ, ಹೆಂಡತಿ ಬೀದಿರಂಪಕ್ಕಿಳಿದಳು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೀದಿನಾಯಿಯ ಬಗ್ಗೆ ಅನುಕಂಪ ತೋರಿದ ಈ ಮಹಿಳೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ಅನ್ನು ಗಿವ್ ಇಂಡಿಯಾ ಎಂಬ ಇನ್​ಸ್ಟಾ ಪುಟದಿಂದ ಹಂಚಿಕೊಳ್ಳಲಾಗಿದೆ. ಆ. 2ರಂದು ಹಂಚಿಕೊಂಡ ಈ ವಿಡಿಯೋ ಅನ್ನು 16,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ.

ನೋಡಿ ಸಹಾನುಭೂತಿಯ ಈ ದೃಶ್ಯ

View this post on Instagram

A post shared by Give (@give_india)

ಪ್ರತಿಯೊಬ್ಬರೂ ಉಡುಗೊರೆಯಂತೆ ನೀಡಲು ಸಾಧ್ಯವಾಗುವುದೆಂದರೆ ಕರುಣೆ, ಸಹಾನುಭೂತಿ, ದಯೆ ಎಂದಿದ್ದಾರೆ ಒಬ್ಬರು. ನೀವು ಮಾಡುವ ಕೆಲಸ ಹಣ ಕೊಟ್ಟು ಕಲಿಸಿದರೂ ಬರುವಂಥದ್ದಲ್ಲ, ನಿಮ್ಮಂಥವರ ಸಂತತಿ ಹೆಚ್ಚಲಿ ಎಂದಿದ್ದಾರೆ ಇನ್ನೊಬ್ಬರು. ನಾಯಿಗೆ ಸಹಾಯ ಮಾಡಿದ್ದಕ್ಕಾಗಿ ನಮ್ಮೆಲ್ಲರ ಪರವಾಗಿ ನಿಮಗೆ ಧನ್ಯವಾದ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್

ಸಹಾನುಭೂತಿ ಎನ್ನುವುದು ಎಳವೆಯಿಂದಲೇ ಬರುವಂಥದ್ದು. ಪೂರಕ ಪರಿಸರವನ್ನು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಕಲ್ಪಿಸಿ ಕೊಡಬೇಕು. ಇಲ್ಲವಾದಲ್ಲಿ ಸ್ವಾರ್ಥತನ ಬಲುಬೇಗನೇ ಮೈಗೂಡಿಬಿಡುತ್ತದೆ. ಇನ್ನೊಬ್ಬರ ನೋವು ದುಃಖ ಕೂಡ ಅರ್ಥ ಮಾಡಿಕೊಳ್ಳದಷ್ಟು ಕಾಠಿಣ್ಯ ಬೆಳೆದುಬಿಡುತ್ತದೆ. ಹಾಗಾಗಿ ನಿತ್ಯವೂ ಮನೆಯಂಗಳದಲ್ಲಿ ಅಥವಾ ಬೀದಿಬಳಿ ಅನ್ನಾಹಾರ ನೀಡುವ ಕ್ರಮವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಅನಾಥರಿಗೆ ಅಥವಾ ಹಸಿವು ಎಂದವರಿಗೆ ಉಪಚರಿಸುವುದನ್ನು ಕಲಿಸಿ ಕೊಡಬೇಕು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:39 pm, Fri, 25 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್