Viral Video: ಮೆಟ್ರೋ; ಯಾರಿಗೆ ಕರೀತೀಯೋ ಕರಿ! ಲೇಡೀಸ್​ ಕೋಚ್​​ನಲ್ಲಿ ನುಗ್ಗಿದ ಯುವಕನ ಆಟಾಟೋಪ

Metro: ದೆಹಲಿ ಮೆಟ್ರೋದಲ್ಲಿ ದಿನವೂ ಒಂದಿಲ್ಲಾ ಒಂದು ಅಹಿತಕರ ಅಥವಾ ಮುಜುಗರಕ್ಕೀಡಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೂ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು. ಇದೀಗ ಲೇಡೀಸ್​ ಕೋಚ್​​ನಲ್ಲಿ ಯುವಕನೊಬ್ಬ ನುಗ್ಗಿ ಅಲ್ಲಿದ್ದ ಮಹಿಳೆಯರೊಂದಿಗೆ ಜಗಳಕ್ಕಿಳಿದಿದ್ದನ್ನು ನೋಡಿಯಂತೂ ದಿಗಿಲಿಗೆ ಬಿದ್ದಿದ್ದಾರೆ.

Viral Video: ಮೆಟ್ರೋ; ಯಾರಿಗೆ ಕರೀತೀಯೋ ಕರಿ! ಲೇಡೀಸ್​ ಕೋಚ್​​ನಲ್ಲಿ ನುಗ್ಗಿದ ಯುವಕನ ಆಟಾಟೋಪ
ದೆಹಲಿ ಮೆಟ್ರೋದ ಲೇಡೀಸ್​ ಕೋಚ್​ನಲ್ಲಿ ನುಗ್ಗಿದ ಯುವ ಮಹಿಳೆಯರೊಂದಿಗೆ ವಾಗ್ವಾದಕ್ಕೆ ಇಳಿದ ದೃಶ್ಯ
Follow us
ಶ್ರೀದೇವಿ ಕಳಸದ
|

Updated on:Aug 25, 2023 | 6:19 PM

Delhi: ದೆಹಲಿಯ ಮೆಟ್ರೋ ಒಂದಿಲ್ಲಾ ಒಂದು ವಿಷಯಕ್ಕೆ ಪ್ರತೀದಿನ ಸುದ್ದಿಯಲ್ಲಿರುತ್ತದೆ. ಅದರಲ್ಲಿಯೂ ರೀಲಿಗರ ಹಾವಳಿಯಂತೂ ಹೇಳತೀರದು. ಆದರೆ ಈವತ್ತು ಸುದ್ದಿಯಲ್ಲಿರುವ ಈ ವಿಡಿಯೋ ಮಾತ್ರ ಹೆದರಿಕೆ ಹುಟ್ಟಿಸುವಂತಿದೆ. ಒಬ್ಬ ಯುವಕ ಲೇಡೀಸ್​ ಕೋಚ್​ನಲ್ಲಿ (Ladies Coach) ನುಗ್ಗಿದ್ದಾನೆ. ಅಲ್ಲಿದ್ದ ಯುವತಿಯರು, ಮಹಿಳೆಯರು ಅವನನ್ನು ಪ್ರಶ್ನಿಸಿದ್ದಾರೆ ಮತ್ತು ಹೊರಹೋಗುವಂತೆ ಹೇಳಿದ್ದಾರೆ. ಅದಕ್ಕೆ ಅವನು ‘ಯಾರನ್ನು ಕರೀತೀಯೋ ಕರೀ’ ಎಂದು ಒರಟಾಗಿ ಉತ್ತರಿಸಿದ್ದಾನೆ ಮತ್ತು ತೀವ್ರ ವಾಗ್ವಾದಕ್ಕೂ ಬಿದ್ದಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ದೆಹಲಿ ಮೆಟ್ರೊದ ಬಗ್ಗೆ ನೆಟ್ಟಿಗರು ಮತ್ತೆ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : Viral Video: ಲೈವ್​ನಲ್ಲಿ ಆ್ಯಂಕರ್​​ಗೆಳತಿಯ ಬಳಿ ಪ್ರೇಮನಿವೇದನೆ ಮಾಡಿಕೊಂಡ ರಿಪೋರ್ಟರ್​ಗೆಳೆಯ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ದೆಹಲಿ ಸ್ಥಳೀಯ ಪ್ರಯಾಣಿಕರಿಗೆ ವರದಾನವೆನ್ನಿಸಿದ್ದ ಮೆಟ್ರೋ ದಿನೇದಿನೇ ಅನವಶ್ಯಕ ಸಂಗತಿಗಳಿಂದಾಗಿ ಕುಖ್ಯಾತಿಗೊಳ್ಳುತ್ತಿದೆ. ಈ ವಿಡಿಯೋದಲ್ಲಿ ಈ ಯುವಕ ಲೇಡಿಸ್​ ಕೋಚ್​ ಪ್ರವೇಶಿಸಿದ್ದೇ ಮತ್ತೀಗ ನೆಟ್ಟಿಗರ ಕಣ್ಣನ್ನು ಕೆಂಪಾಗಿಸಿದೆ. ಈ ಕೋಚ್​​ನಿಂದ ಹೊರಹೋಗುವಂತೆ ಅಲ್ಲಿದ್ದ ಮಹಿಳೆಯರೆಲ್ಲ ಕೇಳಿಕೊಂಡರೂ ಆತ ಸಿನಿಮೀಯ ಶೈಲಿಯಲ್ಲಿ ಅವರೆಲ್ಲರ ವಿರುದ್ಧ ಜಗಳಕ್ಕೆ ಬಿದ್ದಿದ್ದಾನೆ.

ಲೇಡೀಸ್ ಕೋಚ್​​ನಲ್ಲಿ ಪುರುಷ ಪುಂಗವ!

ಸುಮಾರು ಐದು ಗಂಟೆಗಳ ಹಿಂದೆ X ನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 38,000 ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ದೆಹಲಿ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಂಥ ದುರ್ವರ್ತನೆಯ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದ ಈ ಕಥೆಗಳಿಗೆ ಕೊನೆಯೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ಕ್ರಮೇಣ ಪೋಕರಿಗಳ ತಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು

ಅವ ಕುಡಿದಿದ್ದಾನೆ ಅದಕ್ಕೆ ಹೀಗೆ ವರ್ತಿಸುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಮಹಿಳೆಯರಿಗೆ ಎಲ್ಲಿಯೂ ಸುರಕ್ಷತೆಯೇ ಇಲ್ಲ! ಎಂದಿದ್ದಾರೆ ಮತ್ತೊಬ್ಬರು. ಅದು ಹೇಗೆ ಇವರು ಹೀಗೆಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಾರೆ? ಪೊಲೀಸರು ಮತ್ತು ಸಿಸಿಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಒಟ್ಟಾರೆಯಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:11 pm, Fri, 25 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ