Viral Video: ಲೈವ್​ನಲ್ಲಿ ಆ್ಯಂಕರ್​​ಗೆಳತಿಯ ಬಳಿ ಪ್ರೇಮನಿವೇದನೆ ಮಾಡಿಕೊಂಡ ರಿಪೋರ್ಟರ್​ಗೆಳೆಯ

Love : ಸದಾ ಸುದ್ದಿಜಗತ್ತಿನಲ್ಲಿಯೇ ಮುಳುಗುವ ಪತ್ರಕರ್ತರಿಗೂ ವೈಯಕ್ತಿಕ ಜೀವನವೆನ್ನುವುದಿರುತ್ತದೆ. ಆದರೆ ಸಮಯ? ಸಿಕ್ಕ ಸಮಯದಲ್ಲಿಯೇ ಹೊಂದಿಸಿಕೊಂಡು ವೈಯಕ್ತಿಕ ಖುಷಿ ಪಡೆದುಕೊಳ್ಳುವುದು ಅನಿವಾರ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಲೈವ್​ ನ್ಯೂಸ್​ ಓದುತ್ತಿರುವ ಆ್ಯಂಕರ್​​​ಗೆಳತಿಯೆದುರು ಆಕೆಯ ರಿಪೋರ್ಟರ್​ಗೆಳೆಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ!

Viral Video: ಲೈವ್​ನಲ್ಲಿ ಆ್ಯಂಕರ್​​ಗೆಳತಿಯ ಬಳಿ ಪ್ರೇಮನಿವೇದನೆ ಮಾಡಿಕೊಂಡ ರಿಪೋರ್ಟರ್​ಗೆಳೆಯ
ನ್ಯೂಸ್ ಆ್ಯಂಕರ್​​ ಗೆಳತಿ ಲೈವ್​ ನ್ಯೂಸ್​ ಓದುತ್ತಿರುವಾಗ ಆಕೆಯ ರಿಪೋರ್ಟರ್​ ಗೆಳೆಯ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವ ದೃಶ್ಯ.
Follow us
ಶ್ರೀದೇವಿ ಕಳಸದ
|

Updated on:Aug 25, 2023 | 4:45 PM

Love Propose: ತಾನು ಪ್ರೀತಿಸುವ ಹುಡುಗಿಗೆ/ಹುಡುಗನಿಗೆ ವಿಶೇಷವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆನ್ನುವುದು ಅನೇಕರ ಕನಸಾಗಿರುತ್ತದೆ. ಅವರವರ ಆಸಕ್ತಿ ಅಭಿರುಚಿಗೆ ತಕ್ಕಂತೆ ಅವರು ಪ್ರೇಮನಿವೇದನೆಗೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ತಮ್ಮ ಗೆಳತಿಗೆ/ಗೆಳೆಯನಿಗೆ (Friends) ಅಚ್ಚರಿಯನ್ನೂ ನೀಡುತ್ತಾರೆ. ನೀರಿನಾಳದಲ್ಲಿ, ವಿಮಾನದಲ್ಲಿ, ಸಂಗೀತ ಸಭೆಯಲ್ಲಿ, ಕ್ರೀಡಾಂಗಣದಲ್ಲಿ, ಬೆಟ್ಟದ ತುದಿಯಲ್ಲಿ ಹೀಗೆ ಎಲ್ಲೆಲ್ಲೋ ಪ್ರೇಮನಿವೇದನೆ ಮಾಡಿಕೊಂಡ ಅನೇಕರ ವಿಡಿಯೋಗಳನ್ನು ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. NBCಯ ಅಂಗಸಂಸ್ಥೆ WRCB-TV ಚಾನೆಲ್​ನ ನ್ಯೂಸ್​ ಆ್ಯಂಕರ್​ ಸ್ನೇಹಿತೆಗೆ ಲೈವ್​ನಲ್ಲಿಯೇ ರಿಪೋರ್ಟರ್ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ!

ಇದನ್ನೂ ಓದಿ : Viral Video: ಬೀದಿನಾಯಿಯ ಬಗ್ಗೆ ಕರುಣೆ ತೋರಿದ ಮಹಿಳೆಯನ್ನು ಶ್ಲಾಘಿಸುತ್ತಿರುವ ನೆಟ್ಟಿಗರು 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರನೇಕರು ಈ ಹೃದಯಸ್ಪರ್ಶಿ ಮತ್ತು ಅಚ್ಚರಿಯಿಂದ ಕೂಡಿದ ಪ್ರೇಮನಿವೇದನೆಯ ವಿಡಿಯೋ ನೋಡಿ ಈ ಜೋಡಿಗೆ ಅಭಿನಂದಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಮ್ಯಾಜಿಕಲಿ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನ್ಯೂಸ್​ ಆ್ಯಂಕರ್​ ನಿಕೋಲ್ಸನ್​ ಟೆಲಿಪ್ರಾಂಪ್ಟರ್​​ನೆಡೆ ನೋಡುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ಸ್ಟುಡಿಯೋ ಪ್ರವೇಶಿಸಿದ ಆಕೆಯ ಗೆಳೆಯ ಮತ್ತು ರಿಪೋರ್ಟರ್ ರಿಲೇ ನಗೆಲ್​ ಹೂಗುಚ್ಛ ಮತ್ತು ಉಂಗುರವನ್ನು ಆಕೆ ಎದುರು ಹಿಡಿಯುತ್ತಾರೆ.

ಇವರಿಬ್ಬರ ಪ್ರೇಮನಿವೇದನೆಯ ಈ ವಿಡಿಯೋ

‘ನನ್ನ ಬಳಿ ವಿಶೇಷವಾದ ಒಂದು ವರದಿ ಇದೆ. ಕಾರ್ನೇಲಿಯಾ ಮತ್ತು ನಾನು ನಾಲ್ಕು ವರ್ಷಗಳ ಹಿಂದೆ ಮೋಂಟಾನಾದ ನ್ಯೂಸ್​​ ಸೆಂಟರ್​​ನಲ್ಲಿ ಭೇಟಿಯಾಗಿದ್ದೆವು. ನಾನು ನಿನ್ನನ್ನು ಭೇಟಿಯಾದಾಗ ಮೊದಲ ನೋಟದಲ್ಲಿಯೇ ಆಕರ್ಷಿತನಾಗಿದ್ದೆ. ನಿನ್ನದು ಅದ್ಭುತ ವ್ಯಕ್ತಿತ್ವ, ನೀ ಇರುವಲ್ಲೆಲ್ಲ ನಗುವನ್ನು ಹಂಚುತ್ತೀ, ಬೆಳಕನ್ನು ಹರಡುತ್ತೀ’ ಎಂದು ಹೇಳುತ್ತ ಪ್ರೇಮನಿವೇದನೆ ಮಾಡಿಕೊಳ್ಳುತ್ತಾರೆ ರಿಪೋರ್ಟರ್​.

ಇದನ್ನೂ ಓದಿ : Viral Video: ಸೆಕೆಂಡ್ ಚಾನ್ಸ್​; ಅಂದು 8 ತಿಂಗಳ ಮಗುವಿನೊಂದಿಗೆ ತವರಿಗೆ ಮರಳಿದ್ದ ಡಾ ಸಬೀಹಾ ಇನಾಮ್ದಾರ್​, ಇಂದು?

ಈತನಕ ಸುಮಾರು 19,000 ಜನರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡು ಜೋಡಿಗೆ ಶುಭ ಹಾರೈಸಿದ್ದಾರೆ. ನನಗೆ ಸಂತೋಷದಿಂದ ಕಣ್ಣುಕ್ಕುತ್ತಿದೆ ಎಂದಿದ್ದಾರೆ ಒಬ್ಬರು. ಇವರಿಬ್ಬರೂ ತುಂಬಾ ಮುದ್ದಾಗಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ, ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದಿದ್ದಾರೆ ಮಗದೊಬ್ಬರು. ನಿಜಕ್ಕೂ ಇದು ಬಹಳ ಆಪ್ತವಾದ ಚಿತ್ರಣ, ಮನಸ್ಸು ತುಂಬಿತು ನಿಮಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:44 pm, Fri, 25 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್